24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಗಳೂರು ಪಟ್ಲ ಫೌಂಡೇಶನ್ ಹವ್ಯಾಸಿ ಘಟಕದಿಂದ ತಾಳಮದ್ದಳೆ

ಬೆಳ್ತಂಗಡಿ: ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಸಹಯೋಗದಲ್ಲಿ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ ಮಂಗಳೂರು ಇದರ ಹತ್ತನೇ ಕಾರ್ಯಕ್ರಮವಾಗಿ ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತರನ ಪೌರುಷ ತಾಳಮದ್ದಳೆ ಜರಗಿತು.

ಯಕ್ಷದ್ರುವ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ ಶೆಟ್ಟಿ .ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ. ಕಳೆದ 11 ವರ್ಷಗಳಿಂದ ಯಕ್ಷಗಾನದ ಸಮಗ್ರ ಬೆಳವಣಿಗೆಗೆ ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳು ಅಪೂರ್ವವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈ, ಕಾರ್ಯದರ್ಶಿ ವಿನಯ ಆಚಾರ್ ಹೊಸಬೆಟ್ಟು, ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಗೌರವ ಅಧ್ಯಕ್ಷ ಉಮೇಶ ಶೆಣೈ ,ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಂಬಾ ಪ್ರಸಾದ ಪಾತಾಳ,ಬಿ ಸುಬ್ರಹ್ಮಣ್ಯರಾವ್, ಸುರೇಶ ಪುತ್ತುರಾಯ ಇಚ್ಚೂರು,ಗೀತಾ ಕುದ್ದಣ್ಣಾಯ, ಗಂಗಾಧರ ಟೈಲರ್ ಉಪ್ಪಿನಂಗಡಿ, ಸುರೇಶ ರಾವ್. ಬಿ ಆಶಾ ರಾವ್, ಸುಶಾಂತ್ ಉಪಸ್ಥಿತರಿದ್ದರು. ಅತಿಥಿ ಕಲಾವಿದರನ್ನು ಶಾಲು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

ಉತ್ತರನ ಪೌರುಷ ತಾಳಮದ್ದಳೆ ಯಲ್ಲಿ ಭಾಗವತರಾಗಿ ರಾಜಾರಾಮ ಹೊಳ್ಳ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್, ಹರಿಶ್ಚಂದ್ರ ನಾಯ್ಗ ಮಾಡೂರು, ಅರ್ಥಧಾರಿಗಳಾಗಿ ವಿನಯ ಆಚಾರ್ ಹೊಸಬೆಟ್ಟು (ಉತ್ತರ) ದಿವಾಕರ ಆಚಾರ್ಯ ಗೇರುಕಟ್ಟೆ (ಉತ್ತರೆ) ಶ್ರೀಧರ ಎಸ್ ಪಿ ಕೃಷ್ಣಾಪುರ (ಗೋಪಾಲಕ) ಗಣೇಶ ಕುಂಜತ್ತೂರು (ಬೃಹನ್ನಳೆ) ಭಾಗವಹಿಸಿದ್ದರು. ಕಾಳಿಕಾಂಬ ಯಕ್ಷಗಾನ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಕೆ. ಮಹಾಲಿಂಗೇಶ್ವರ ಭಟ್ ವಂದಿಸಿದರು. ಶ್ರೀಧರ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು.

Related posts

ಜ.6 : ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ ಯೋಜನೆಯ‌ ಸಹಾಯಧನ ಹಸ್ತಾಂತರ

Suddi Udaya

ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಪೆರಿಂಜೆ ಅವರಿಗೆ ಸಿದ್ದಕಟ್ಟೆ ಯಕ್ಷ ಮಿತ್ರ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿಯಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ಲೋಕೋಪಯೋಗಿ ಸಚಿವರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಅಭಿನಂದನೆ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ

Suddi Udaya
error: Content is protected !!