24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವತಿಯಿಂದ ಉಚಿತ ದಂತ ಚಿಕಿತ್ಸೆ ಮತ್ತು ಡೆಂಟಲ್ ಪಿಲ್ಲಿಂಗ್ಸ್ ಹಾಗೂ ವೀಲ್ ಚೇರ್ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ಮತ್ತು ಕ್ಷೇತ್ರ ಸಮಿತಿ ವತಿಯಿಂದ ಎಜೆ ಡೆಂಟಲ್ ಹಾಸ್ಪಿಟಲ್, ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸೆ ಮತ್ತು ಡೆಂಟಲ್ ಪಿಲ್ಲಿಂಗ್ಸ್ ಹಾಗೂ ವೀಲ್ ಚೇರ್ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಧರ್ಮಸ್ಥಳ ಕಲಾಭವನದಲ್ಲಿ ಮೇ 17 ರಂದು ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನಾ ಅಧ್ಯಕ್ಷ ಸಂಪತ್ ಬಿ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಧುನಿಕ ಮಾರುಕಟ್ಟೆಯಲ್ಲಿ ಸಿದ್ಧ ಉಡುಪುಗಳ ಹಾವಳಿಯಿಂದಾಗಿ ಟೈಲರ್ ಗಳ ಸಾಂಪ್ರದಾಯಿಕ ವೃತ್ತಿಗೆ ಮತ್ತು ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯಾರ ಮುಂದೆಯೂ ಕೈಚಾಚದೆ, ತಮ್ಮ ಸ್ವಂತ ಕೌಶಲ್ಯ ಮತ್ತು ಕಠಿಣ ಪರಿಶ್ರಮದ ಬಲದಿಂದ ಗೌರವಯುತ ಬದುಕು ಸಾಗಿಸುವ ಸ್ವಾವಲಂಬಿಗಳಾಗಿದ್ದಾರೆ.ಸಮಾಜದ ಪ್ರತಿಯೊಂದು ವರ್ಗದ ಜನರಿಗೂ ಅತ್ಯಾವಶ್ಯಕವಾಗಿರುವ ಇವರ ಸೇವೆಯನ್ನು ಗೌರವಿಸುವುದು ಮತ್ತು ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಸಾಮಾಜಿಕ ಭದ್ರತೆ ಸಿಗುವಂತಾಗುವುದು ಇಂದಿನ ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಶೈಲೇಶ್ ಆರ್ ಜೆ., ವಸಂತ ಪೂಜಾರಿ ನಿರ್ದೇಶಕ ಟೈಲರ್ಸ್ ಬ್ಯಾಂಕ್,. ಜಯಮಾಲ ಯೋಗೀಶ್ ಗೋಲ್ಡನ್ ಮೆಕೋವರ್ ಬ್ಯೂಟಿ ಪಾರ್ಲರ್ ಉಜಿರೆ ವಲಯದ ಅಧ್ಯಕ್ಷ ಝೀನತ್ ಉಜಿರೆ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಲಾನ್ಸ್‌ ಡಿಸೋಜ, ಯುವ ಉದ್ಯಮಿ ಟುವಿತ್ ಕೆ ಸಾಲಿಯನ್ ಉಪಸ್ಥಿತರಿದ್ದರು.

Related posts

ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಖೋ ಖೋ ಪಂದ್ಯಾಟ: ವೇಣೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ದಾನ

Suddi Udaya

ಮಚ್ಚಿನ: ಪಾಲಡ್ಕದಲ್ಲಿ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್‌ನಲ್ಲಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

Suddi Udaya

ತಣ್ಣೀರುಪಂತ: ಎರಡು ವರ್ಷದಿಂದ ಕಾಣೆಯಾದ ವ್ಯಕ್ತಿ ಪತ್ತೆ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸೇವಾ ಟ್ರಸ್ಟ್, ರೋಟರಿ ಬೆಂಗಳೂರು ಇಂದಿರಾ ನಗರ,ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!