26.8 C
ಪುತ್ತೂರು, ಬೆಳ್ತಂಗಡಿ
May 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ’ ವಾರ್ಷಿಕ ಪರ್ವ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ

ಬೆಳ್ತಂಗಡಿ : ಕ್ಷೇತ್ರದ ಶಾಸಕರಾಗಿ, ಯುವ ನಾಯಕರಾಗಿ ಹರೀಶ್ ಪೂಂಜ ಅವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ದೈವಸ್ಥಾನದ ಮುಂದಿನ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅನುದಾನ ತರಿಸಿ ಕೊಡುವಲ್ಲಿ ಯಶಸ್ವಿಯಾಗಿ ಕೆಲಸವನ್ನು ಮಾಡಲು ಅವರಿದ್ದಾರೆ, ಆ ಮುಖಾಂತರ ಆದಷ್ಟು ಶೀಘ್ರವಾಗಿ ಜೀರ್ಣೋದ್ಧಾರ ಕಾರ್ಯ ಆಗಲಿ, ಖಂಡಿತವಾಗಿಯೂ ಶಾಸಕರು ಅನುದಾನದ ಕೊರತೆಯನ್ನು ಮಾಡುವುದಿಲ್ಲ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿಯಲ್ಲಿ ಮೇ 17ನೇ ನಡೆದ ವಾರ್ಷಿಕ ಪರ್ವದಲ್ಲಿ ಭಾಗವಹಿಸಿ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ನಾನೂ ಕೂಡ ನಿಮ್ಮ ಪರವಾಗಿ ಶಾಸಕ ಹರೀಶ್ ಪೂಂಜ ಅವರಲ್ಲಿ ಆದಷ್ಟು ಅನುದಾನ ತರಿಸುವ ಕೆಲಸ ಮಾಡಬೇಕೆಂದು ವಿನಂತಿಯನ್ನು ಮಾಡುತ್ತೇನೆ. ಅಭಿವೃದ್ಧಿ ಕೆಲಸವನ್ನು ಮಾಡುವಾಗ ಇದನ್ನು ಬಿಟ್ಟು ಹಾಕುವುದಿಲ್ಲ ಅವರಿಗೆ ನಮ್ಮ ಮೇಲೆ ತುಂಬಾ ಅಭಿಮಾನವಿದೆ, ಅವರ ನೇತೃತ್ವದಲ್ಲಿ ಈ ಕೆಲಸವನ್ನು ಮಾಡುತ್ತಾರೆ ಎಂದು ಭಾಗೀರಥಿ ಮುರುಳ್ಯ ತಿಳಿಸಿದರು.

ಮುಖ್ಯ ಅತಿಥಿಯಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮಗಳ ಜನರನ್ನೂ ಒಗ್ಗೂಡಿಸಿ ಕಾನದ ಕಟದರ ಚರಿತ್ರೆಯನ್ನು ತಿಳಿಸಿ ಜನರ ಸಹಕಾರದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಬೇಕು, ಸತ್ಯ ಸಾರಮಾನಿ ಕಾನದ ಕಟದರ ನೈಜ ಇತಿಹಾಸದ ಅರಿವು ಇಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾನದ ಕಟದರ ಆದರ್ಶ, ಆಶಯಗಳಿಗೆ, ಮೂಲ ಸಂಸ್ಕೃತಿಗಳಿಗೆ ಧಕ್ಕೆ ತರುವ ಕೆಲಸ ಆಗುತ್ತಿರುವುದು ವಿಷಾದನೀಯ ಎಂದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ್ ಜಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಾಲ್ಕೈದು ವರ್ಷಗಳ ಹಿಂದೆ ಹಿರಿಯರಾದ ವೆಂಕಣ್ಣ ಕೊಯ್ಯೂರು ಅವರ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಹಿರುಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚಿಸಿಕೊಂಡು ನಿಯೋಗ ಕಾನದ ಕಟದರ ಅನೇಕ ಚಾರಿತ್ರಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇವೆ, ಕಾನದ ಕಟದರಿಗೆ ಅತಿಕಾರೆ ಭತ್ತ ಕೊಟ್ಟ ಕೆಳದಿಯ ಅರಸ ಶಿವಪ್ಪ ನಾಯಕರ ಅರಮನೆ, ನೋಣಯ್ಯ ಎಂಬ ಹಿರಿಯರ ಮಾರ್ಗದರ್ಶನದಲ್ಲಿ ಕಾನದ ಕಟದರು ಗದ್ದೆ ಮಾಡಿ ಅತಿಕಾರೆ ಭತ್ತ ಬಿತ್ತಿ ಬೆಳೆದ ಜಾಗವೂ ಸೇರಿದಂತೆ ಪ್ರಮುಖ ಚಾರಿತ್ರಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ, ಫೊಟೋ ವೀಡಿಯೋ ಸಂಗ್ರಹಿಸಿದ್ದೇವೆ ಎಂದು ವಿವರಿಸಿದರು. ಸಮುದಾಯದ ಹಿರುಯರಾದ ಬಳ್ಳಾಜೆ ಬಾಬು ಅವರನ್ನು ಸಂಪರ್ಕಿಸಿ ಸಂದರ್ಶನ ನಡೆಸಿದಾಗಲೂ ಜನ್ಮಭೂಮಿ ಇಂದಬೆಟ್ಟು ಪೇರಾಲ್ದಪಲ್ಕೆ ಆಗಿದೆ ಎಂಬುದಕ್ಕೆ ಆಧಾರವಾಗಿ ಕಾನದ ಕಟದರ ಪಾಡ್ದನ ಮತ್ತಿತರ ಅನುಭವಪೂರ್ಣ ಮಾಹಿತಿಗಳನ್ನು ಒದಗಿಸಿದ್ದಾರೆ ಹಾಗೂ ಇಂದಬೆಟ್ಟು ಸುತ್ತಮುತ್ತಲಿನ ಅನೇಕ ಹಿರಿಯರೂ ಕಾನದ ಕಟದರ ಜನ್ಮಭೂಮಿಯು ಸುಮಾರು ೨೦೦ ವರ್ಷಗಳಿಂದ ಸ್ಥಳೀಯ ಕುಟುಂಬಗಳು ಆರಾಧಿಸಿಕೊಂಡು ಬಂದಿರುವ ದೈವಸ್ಥಾನ ಇರುವ ಮತ್ತು ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಾ ಬಂದಿರುವ ಮತ್ತು ಇದೀಗ ಹಳೆಯ ದೈವಸ್ಥಾನವಿರುವ ಪೇರಾಲ್ದಪಲ್ಕೆಯಲ್ಲಿ ಕಾನದ ಕಟದರ ತಂದೆ ತಾಯಿ ವಾಸವಿದ್ದ ಜಾಗ ಮತ್ತು ಕಾನದ ಕಟದರು ಹುಟ್ಟಿದ ಜಾಗವಾಗಿದೆ ಎಂದು ಪ್ರತಿಪಾದಿಸಿದರು.

ಮುಖ್ಯ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹರಿಯಪ್ಪ ಮುತ್ತೂರು ಮುಖ್ಯ ಅತಿಥಿಯಾಗಿ ಮಾತನಾಡಿ ಧಾರ್ಮಿಕ ಪರಿಷತ್ ಸದಸ್ಯನಾಗಿ ಕಾನದ ಕಟದರ ಜನ್ಮಭೂಮಿ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸರಕಾರದಿಂದ ಅನುದಾನ ಕೊಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಸಹಕಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.

ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಜೀವ ಆರ್ ಮಾತನಾಡಿ ಸರ್ವ ಜಾತಿ, ಸಮುದಾಯಗಳ ಭಕ್ತಾದಿಗಳು ಕಾನದ ಕಟದ ಜನ್ಮಭೂಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿ ಅತೀ ಶೀಘ್ರವಾಗಿ ಜೀರ್ಣೋದ್ಧಾರ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಭಾಗಿಯಾಗಬೇಕೆಂದು ವಿನಂತಿಸಿದರು.

ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀರ್ಣೋದ್ಧಾರ ಕಾರ್ಯಕ್ಕೆ ಸಾಮಾಜಿಕ, ಧಾರ್ಮಿಕ ನಾಯಕರ, ದಾನಿಗಳ, ಧರ್ಮದರ್ಶಿಗಳ ತನು,ಮನ,ಧನಗಳ ಸಂಪೂರ್ಣ ಸಹಕಾರ ಕೋರಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಕೆ.ಡಿ.ಪಿ. ಸದಸ್ಯ ಎಸ್. ಬೇಬಿ ಸುವರ್ಣ, ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಪೇರಾಲ್ದಪಲ್ಕೆ, ಮಹಿಳಾ ಸಮಿತಿ ಅಧ್ಯಕ್ಷೆ ಬೇಬಿ ಗೌರೊಟ್ಟು ಹಾಗೂ ವಿಶೇಷ ಆಹ್ವಾನಿತರಾಗಿ ಹೊಸಂಗಡಿ ಕುರ್ಲೊಟ್ಟು ಶ್ರೀ ಸತ್ಯ ಸಾರಮಾನಿ ಕ್ಷೇತ್ರದ ಮುಖ್ಯಸ್ಥ ಅವಿನಾಶ್ ಹೊಸಂಗಡಿ, ಶ್ರೀ ಸತ್ಯಸಾರಮಾನಿ ಕ್ಷೇತ್ರದ ಅಧ್ಯಕ್ಷ ಶೇಖರ್ ವಿ. ಧರ್ಮಸ್ಥಳ, ಅಂಡಿAಜೆ ಪೇರಾಲ್ದಪಲ್ಕೆ ಸತ್ಯ ಸಾರಮಾನಿ ಕ್ಷೇತ್ರದ ಅಧ್ಯಕ್ಷ ಸಂತೋಷ್ ಪೇರಾಲ್ದಪಲ್ಕೆ, ಅಳದಂಗಡಿ ಕೋಟೆಬಾಗಿಲು ಶ್ರೀ ಸತ್ಯ ಸಾರಮಾನಿ ಕ್ಷೇತ್ರದ ಅಧ್ಯಕ್ಷ ಸುರೇಶ್, ಪಡಂಗಡಿ ಪೊಯ್ಯೆಗುಡ್ಡೆ ಶ್ರೀ ಸತ್ಯ ಸಾರಮಾನಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಮು ಬಿ., ಬೆಳ್ತಂಗಡಿ ಕೆಲ್ಲಗುತ್ತು ಶ್ರೀ ಸತ್ಯ ಸಾರಮಾನಿ ಕ್ಷೇತ್ರದ ಅಧ್ಯಕ್ಷರಾದ ಅಣ್ಣಪ್ಪ, ಶಿರ್ಲಾಲು ನೆಲ್ಲಿಗುಡ್ಡೆ ಸತ್ಯ ಸಾರಮಾನಿ ದೈವಸ್ಥಾನದ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಚುಶ್ರೀ ಬಾಂಗೇರು ಕಾರ್ಯಕ್ರಮ ನಿರೂಪಿಸಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ. ವಸಂತ್ ಬಿ.ಕೆ. ಸ್ವಾಗತಿಸಿ ಉಪಾಧ್ಯಕ್ಷ ರಮೇಶ್ ಆರ್ ವಂದಿಸಿದರು. ಶಾನ್ವಿ, ಆನ್ವಿ, ಶ್ವೇತ, ವಿನೋದ, ಸೂರಜ್ ಪ್ರಾರ್ಥನೆಗೈದರು. ಅರ್ಚಕರಾದ ಚೀಂಕ್ರ, ಸೇವಕ ಶೀನ, ಪ್ರಿಯೇಶ್, ಜೀರ್ಣೋದ್ಧಾರ ಸಮಿತಿಯ
ಉಪಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಕೋಶಾಧಿಕಾರಿಗಳಾದ ಕೆ.ನೇಮಿರಾಜ್ ಕಿಲ್ಲೂರು, ಗುರುವ ಇಂದಬೆಟ್ಟು, ಎನ್.ಸಿ.ಸಂಜೀವ ನೆರಿಂiÀi, ಸೋಮ, ಸೋಮಯ್ಯ, ಶೋಭಾರಾಜ್, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್: ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ಕಾನದ ಕಟದ ಜನ್ಮಭೂಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ೧ ಲಕ್ಷ ರೂ ಅನುದಾನ ಹಾಗೂ ಸೂಕ್ತ ಸಂದರ್ಭದಲ್ಲಿ ಅಗತ್ಯ ಸಾಮಾಗ್ರಿಗಳನ್ನು ಒದಗಿಸುವುದಾಗಿ ಸಮಿತಿಯ ಪದಾಧಿಕಾರಿಗಳೊಂದಿಗೆ ವಾಗ್ದಾನ ಮಾಡಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5‌ ಸಾವಿರ ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಕಲ್ಮಂಜ ಗ್ರಾ.ಪಂ. ಅಧ್ಯಕ್ಷರಾಗಿ ವಿಮಲಾ, ಉಪಾಧ್ಯಕ್ಷರಾಗಿ ಪೂರ್ಣಿಮ ಅವಿರೋಧ ಆಯ್ಕೆ

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಕರಾಯ ತ್ರಿವರ್ಣ ಸಂಗಮ ಆಟೋ ಚಾಲಕ ಮಾಲಕ ಸಂಘದ ಸಮಿತಿ ರಚನೆ: ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಅವಿರೋಧ ಆಯ್ಕೆ

Suddi Udaya

ನಾಳ ವರ್ಷವಧಿ ಜಾತ್ರಾ ಮಹೋತ್ಸವ ಲೆಕ್ಕಪತ್ರ ಮಂಡನೆ, ಅಭಿನಂದನೆ ಹಾಗೂ ಅಧಿಕಾರ ಹಸ್ತಾಂತರ

Suddi Udaya

ಬಳಂಜ: ನಾರಾವಿ ವಲಯ ಕ್ರೀಡಾ ಕೂಟ ಉದ್ಘಾಟನೆ

Suddi Udaya
error: Content is protected !!