30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ: ಮಂಪರ್ ಪರೀಕ್ಷೆ-ಬ್ರೈನ್ ಮ್ಯಾಪಿಂಗ್ ಗೆ ಆರೋಪಿಗಳ ನಕಾರ

ಬೆಳ್ತಂಗಡಿ: ಶಿಬಾಜೆ ಗ್ರಾಮದಲ್ಲಿ 2022ರ ಡಿಸೆಂಬರ್ 18 ರಂದು ನಡೆದ ಶ್ರೀಧರ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸರಕಾರ ಪ್ರಕರಣವನ್ನು ಎಸ್‌ಐಟಿಗೆ ನೀಡಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಆರೋಪಿಗಳು ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್‌ಗೆ ಆರೋಪಿಗಳು ಒಪ್ಪಿಗೆ ಸೂಚಿಸಿ ಬಳಿಕ ನ್ಯಾಯಾಲಯದ ಮುಂದೆ ನಕಾರ ಒಡ್ಡಿಯಿರುವ ಬಗ್ಗೆ ವರದಿಯಾಗಿದೆ.

ಶ್ರೀಧರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಿಚಾರಣೆ ನಡೆಸುತ್ತಿದ್ದು ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಎಲ್.ಆನಂದ್ ಗೌಡ, ಮಹೇಶ್‌ನ ಮಂಪರು ಪರೀಕ್ಷೆಗೆ ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದ ಮುಂದೆ ಮಂಪರು ಪರೀಕ್ಷೆಗೆ ಒಳಪಡಲ್ಲ ಎಂದಿದ್ದಾರೆ. ಈ ಮೊದಲು ಎಸ್‌ಐಟಿ ಬಳಿ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದ ನಾಲ್ವರು ಆರೋಪಿ ಇದೀಗ ಕೋರ್ಟ್ ನಲ್ಲಿ ನಕಾರ ಮಾಡಿದ್ದಾರೆ.

ಈ ಪ್ರಕರಣದ ಉನ್ನತ ತನಿಖೆಗಾಗಿ 2026 ಫೆ.20 ರಂದು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್, ಉಡುಪಿ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಹರೀಶ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿತ್ತು. ಶಿಬಾಜೆಯ ಎ.ಸಿ.ಕುರಿಯನ್ ಮಾಲೀಕತ್ವದ ತೋಟದಲ್ಲಿ ಶ್ರೀಧರ ಮೇಲ್ವಿಚಾರಕಾರಗಿದ್ದರು. 2022ರ ಡಿ.17 ರಂದು ಸಂಜೆ 5:30 ಕ್ಕೆ ಪರಿಚಯಸ್ಥರಿಂದ ಶ್ರೀಧರ ಮೇಲೆ ಹಲ್ಲೆ ನಡೆದಿತ್ತು, ಮರುದಿನ ಡಿ.18ರಂದು ಶ್ರೀಧರ ಬೆತ್ತಲಾಗಿ ಕೊಲೆಯಾಗಿದ್ದ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆಯನ್ನು ಸಿಐಡಿ ತನಿಖೆ ನಡೆಸಿ ಆರೋಪಿಗಳು ನಿರ್ದೋಷಿಗಳು ಎಂದು ವರದಿ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ಮತ್ತೆ ಸರಕಾರ ಎಸ್ಐಟಿ ತನಿಖೆಗೆ ಆದೇಶ ಮಾಡಿತ್ತು.

Related posts

ಜಿಲ್ಲೆಯಾಧ್ಯಂತ ಸಂಚರಿಸಲಿರುವ “ವಿಜಯ ಸಂಕಲ್ಪ ಯಾತ್ರೆ” : ಬೆಳ್ತಂಗಡಿ ಶ್ರೀ ಕುತ್ಯಾರು ದೇವಸ್ಥಾನ ಬಳಿಯಿಂದ ಲಾಯಿಲಾದ ವರೆಗೆ ಬೃಹತ್ ರೋಡ್ ಶೋ ಹಾಗೂ ಬೈಕ್ ಜಾಥಾ

Suddi Udaya

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಪೂರ್ವಭಾವಿ ಸಭೆ:ನೂತನ ಸಮಿತಿ ಅಧ್ಯಕ್ಷರಾಗಿ ರವಿಶಂಕರ್ ಶೆಟ್ಟಿ ಆಯ್ಕೆ

Suddi Udaya

ಇಳಂತಿಲ ಗ್ರಾ.ಪಂ.ಅಧ್ಯಕ್ಷರಾಗಿ ವಸಂತ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya

ಬೆಳ್ತಂಗಡಿ ಬಂಟರ ಸಂಘದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಎ.ಸದಾನಂದ ಶೆಟ್ಟಿ ರವರಿಗೆ ಗೌರವಾರ್ಪಣೆ

Suddi Udaya

ಪಡಂಗಡಿ: ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!