23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಂಗಳೂರು ವಿವಿ ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯಾಟ : ಉಜಿರೆಯ ಎಸ್‌.ಡಿ.ಎಂ ಚಾಂಪಿಯನ್ಸ್

ಉಜಿರೆ : ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕೋಣಾಜೆಯ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಪುರುಷ ಹಾಗೂ ಮಹಿಳೆಯರ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದು ಪಂದ್ಯಾಟದ ಚಾಂಪಿಯನ್ಸ್ ಗಳಾಗಿದ್ದಾರೆ.

ಪುರುಷರ ತಂಡವು ಫೈನಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ದವಳ ಕಾಲೇಜು ವಿರುದ್ಧ ಸೆಣಸಾಡಿ 23 – 17 ಅಂಕಗಳ ಅಂತರದಿಂದ ಜಯ ಸಾಧಿಸಿತು. ಉಜಿರೆಯ ಎಸ್.ಡಿ.ಎಂ ಮಹಿಳಾ ತಂಡವು ಫೈನಲ್ ಹಂತದ ಪಂದ್ಯದಲ್ಲಿ ಮೂಡುಬಿದಿರೆಯ ದವಳಾ ಕಾಲೇಜು ತಂಡವನ್ನು ಎದುರಿಸಿ 20 – 09 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿತು. ಪ್ರಶಸ್ತಿ ವಿಜೇತ ಪುರುಷ ಮತ್ತು ಮಹಿಳೆಯರ ತಂಡಗಳಿಗೆ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿ ನಿಡಿರುತ್ತಾರೆ. ದೈಹಿಕ ಶಿಕ್ಷಣ ಉಪನ್ಯಾಸಕಿ ಶಾರದಾ ತಂಡಗಳನ್ನು ಸಂಯೋಜಿಸಿದರು.

ಪುರುಷರ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ
ಚಿಂತನ್ (2ನೇ ಎಂಎಸ್‌ಡಬ್ಲ್ಯು), ದಿನೇಶ್ (1ನೇ ಎಂಎಸ್‌ಡಬ್ಲ್ಯು), ಪುನೀತ್ (1ನೇ ಎಂಎಸ್‌ಡಬ್ಲ್ಯು), ಕೀರ್ತನ್ (3ನೇ ಬಿಎ), ಮಣಿಕಂಠ್ (3ನೇ ಬಿಕಾಂ), ಸಾತ್ವಿಕ್ (3ನೇ ಬಿಸಿಎ), ಗಣೇಶ್ (3ನೇ ಬಿಎ), ಪ್ರವೀಣ್ (2ನೇ ಬಿಕಾಂ), ಮನೋಜ್ (2ನೇ ಬಿಕಾಂ), ಅಭಿಷೇಕ್ (2ನೇ ಬಿಬಿಎ), ಶಯಾನ್ (1ನೇ ಬಿಕಾಂ) ಹಾಗೂ ಶ್ರೀಕಾಂತ್ (1ನೇ ಬಿಬಿಎ) ತಂಡವನ್ನು ಪ್ರತಿನಿಧಿಸಿದರು.

ಮಹಿಳೆಯರ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ವರ್ಷಿತಾ (ದ್ವಿತೀಯ ಎಂಎಸ್‌ಡಬ್ಲ್ಯೂ), ರಶ್ಮಿ ಎಸ್‌. (ಪ್ರಥಮ ಎಂಎಸ್‌ಡಬ್ಲ್ಯೂ), ಮನೀಷಾ (ಪ್ರಥಮ ಎಂ.ಕಾಮ್), ಸುರಕ್ಷಾ ಆಚಾರ್ಯ (ತೃತೀಯ ಬಿ.ಕಾಂ), ಪಲ್ಲವಿ (ತೃತೀಯ ಬಿ.ಕಾಂ), ಧನುಶ್ರೀ ಎಚ್‌.ಆರ್‌. (ತೃತೀಯ ಬಿಎ), ಭೂಮಿಕಾ ಶೆಟ್ಟಿ (ದ್ವಿತೀಯ ಬಿ.ಕಾಂ), ಸಹನಾ (ದ್ವಿತೀಯ ಬಿ.ಕಾಂ), ಪೂಜಾಶ್ರೀ (ಪ್ರಥಮ ಬಿಬಿಎ) ಹಾಗೂ ಸಿಂಚನಾ (ಪ್ರಥಮ ಬಿ.ಕಾಂ) ಭಾಗವಹಿಸಿದ್ದರು.

ಸತತ 16 ವರ್ಷಗಳಿಂದ ಎಸ್.ಡಿ.ಎಂ ಮೇಲುಗೈ :

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳೂರು ವಿಭಾಗದ ಅಂತರ್ ಕಾಲೇಜು ನೆಟ್ ಬಾಲ್ ಪಂದ್ಯಾವಳಿಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವು ಸತತ 16 ವರ್ಷಗಳಿಂದ ಪುರುಷ ಮತ್ತು ಮಹಿಳೆಯರ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿಕೊಂಡು ಬಂದಿದೆ. 2011 ರಿಂದ ನಿರಂತರವಾಗಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಪುರುಷರ ತಂಡವು ಈ ವರೆಗೆ ಅಖಿಲ ಭಾರತ ವಿಶ್ವ ವಿದ್ಯಾನಿಲಯಗಳ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಎರಡು ಬಾರಿ ಚಿನ್ನದ ಪದಕ, ಒಂದು ಬಾರಿ ಬೆಳ್ಳಿ ಪದಕ ಹಾಗು ಒಂದು ಬಾರಿ ಚತುರ್ಥ ಸ್ಥಾನವನ್ನು ಪಡೆದುಕೊಂಡಿದೆ. ಮಹಿಳಾ ತಂಡವು ಒಂದು ಬಾರಿ ಚಿನ್ನ, ಎರಡು ಬಾರಿ ತೃತೀಯ ಸ್ಥಾನ ಹಾಗು ಒಂದು ಬಾರಿ ಚತುರ್ಥ ಸ್ಥಾನವನ್ನು ಪಡೆದುಕೊಂಡಿದೆ. ಇದೇ ತಂಡದಲ್ಲಿ ಭಾಗವಹಿಸಿದ್ದ ನಿತಿನ್ ಪೂಜಾರಿ ಅಂತಾರಾಷ್ಟ್ರೀಯ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ನಿತಿನ್ ಪುಜಾರಿ ಹಾಗು ಮತ್ತೋರ್ವ ರಾಷ್ಟ್ರೀಯ ಮಟ್ಟದ ನೆಟ್ ಬಾಲ್ ಆಟಗಾರ ಸಾಕ್ಷಾತ್ ಇವರಿಗೆ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಮಹಿಳಾ ತಂಡದಲ್ಲಿದ್ದ ಎಸ್.ಡಿ.ಎಂ ಕ್ರೀಡಾ ಸಂಘದ ಹಿರಿಯ ವಿದ್ಯಾರ್ಥಿನಿ ಮೇಘನಾ ಅಂತಾರಾಷ್ಟ್ರೀಯ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಉಪನಾಯಕಿಯಾಗಿ ಸ್ಥಾನ ಪಡೆದಿದ್ದರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪುಜಾರಿ ತರಬೇತಿ ನೀಡಿರುತ್ತಾರೆ.

Related posts

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

Suddi Udaya

ಜೂ.15-29: ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಪುದುವೆಟ್ಟು : ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಡಗಕಾರಂದೂರು ಶಾಲೆಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಯಶಸ್ವಿ

Suddi Udaya

ವಿ‌ ಹರೀಶ್ ನೆರಿಯ ರವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್” ಪ್ರದಾನ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ಬಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ “ಡೈಮಂಡ್ ಪ್ಲಸ್” ಪ್ರಶಸ್ತಿ

Suddi Udaya
error: Content is protected !!