26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುನ್ನತ್ ಕೆರೆ ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ನ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ; ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ಸುನ್ನತ್ ಕೆರೆ ಇದರ ವಾರ್ಷಿಕ ಮಹಾಸಭೆಯು ಬುಸ್ತಾನುಲ್ ಉಲೂಂ ಸೆಕೆಂಡರಿ ಮದರಸ ಸುನ್ನತ್ ಕೆರೆ ಸಭಾಂಗಣದಲ್ಲಿ ಜರುಗಿದ್ದು ನೂತನ ಆಡಳಿತ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಹಕೀಂ ಸುನ್ನತ್‌ಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಬಿ.ಹೆಚ್, ಕೋಶಾಧಿಕಾರಿಯಾಗಿ ಅಬ್ಬಾಸ್ ಹಾಜಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಮಿತಿ ಗೌರವಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಹಾಜಿ, ಉಪಾಧ್ಯಕ್ಷರರುಗಳಾಗಿ ಸ್ವಾದಿಕ್ ಸಾಹೇಬ್ ಮತ್ತು ಇಲ್ಯಾಸ್ ಎಸ್.ಕೆ, ಜೊತೆ ಕಾರ್ಯದರ್ಶಿಯಾಗಿ ಇಕ್ಬಾಲ್ ಫಿಶ್ ಹಾಗೂ ಲೆಕ್ಕಪರಿಶೋಧಕರಾಗಿ ಜಿ.ಎಂ ತಾಜುದ್ದೀನ್ ಇವರು ಆಯ್ಕೆಯಾದರು.

ಜಮಾಅತ್ ಖತೀಬ್ ಎಂ.ಕೆ ಅಬುಬಕ್ಕರ್ ಸಿದ್ದೀಕ್ ಹಿಮಮಿ ಅಲ್ ಫುರ್ಖಾನಿ ರಶಾದಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯಂಗ್-ಮೆನ್ಸ್ ಪ್ರ.ಕಾರ್ಯದರ್ಶಿ ಜಿ.ಎಂ ತಾಜುದ್ದೀನ್ ಸ್ವಾಗತಿಸಿದರು. ಜಮಾಅತ್ ಪ್ರ.ಕಾರ್ಯದರ್ಶಿ ಶಮೀರ್ ಪ್ಲಾಸ್ಟಿಕ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಮಹಾಸಭೆಯ ಬಳಿಕ ನೂತನ ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡುವ ಮೂಲಕ ಅಧಿಕಾರ ಪದಗ್ರಹಣವೂ ನಡೆಯಿತು.

Related posts

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya

ಉಜಿರೆ: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ: ತಿಮರೋಡಿ ಗಡಿಪಾರು ಬಗ್ಗೆ ಪೊಲೀಸರಿಂದ ಮೈಕ್ ಮೂಲಕ ಪ್ರಕಟಣೆ

Suddi Udaya

ಉಪ ನಿರೀಕ್ಷಕರಾಗಿ ಭಡ್ತಿಗೊಂಡ ದೇವಪ್ಪ ಎಂ ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕಾರ

Suddi Udaya

ನಿವೃತ್ತ ಸಾಧಕ ಯೋಧ ಪ್ರಶಸ್ತಿ ಸ್ವೀಕರಿಸಿ ಆಗಮಿಸಿದ ಲ| ಡಾ.ಗೋಪಾಲಕೃಷ್ಣ ಕಾಂಚೋಡು: ಉಜಿರೆಯಲ್ಲಿ ಭವ್ಯವಾದ ಸ್ವಾಗತ – ಅಭಿನಂದನೆ

Suddi Udaya
error: Content is protected !!