24.8 C
ಪುತ್ತೂರು, ಬೆಳ್ತಂಗಡಿ
October 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅತ್ತೆ ಮೇಲೆ ಕತ್ತಿಯಿಂದ ಕಡಿದು ಕೊಲೆ ಯತ್ನ: ಆರೋಪಿ ಅಳಿಯನ ಬಂಧನ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಹಳೆ ದ್ವೇಷವನ್ನು ಇಟ್ಟುಕೊಂಡು ಅತ್ತೆ ಮನೆಗೆ ಹೋಗಿ ಅವ್ಯಾಚ ಶಬ್ದಗಳಿಂದ ಅಳಿಯ ಬೈದು ಬಳಿಕ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ: ಆರೋಪಿ ಪ್ರಸನ್ನ ಕುಮಾರ್ ದೂರುದಾರ ಸುಜಾತ ಅವರ ಗಂಡನ ತಮ್ಮನಾಗಿದ್ದು ಸುಮಾರು 3 ರಿಂದ 4 ವರ್ಷಗಳ ಹಿಂದೆ ಆರೋಪಿ ಪ್ರಸನ್ನ ಕುಮಾರ್ ತನ್ನ ಸಂಬಂಧಿ ಸತೀಶ್ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿತನಾಗಿ ಜೀವನ ಪರ್ಯಾಂತ ಜೈಲಿನಲ್ಲಿ ಕೊಳೆಯಬೇಕು ಎಂದು ಹೇಳುತ್ತಿದ್ದ. ಈ ವಿಚಾರದಲ್ಲಿ ದ್ವೇಷ ಹೊಂದಿ ಆಗಾಗ ದೂರುದಾರರ 54 ವರ್ಷದ ತಾಯಿಯೊಂದಿಗೆ ಮಾತಿನ ಗಲಾಟೆ ನಡೆಸಿ ದೂರುದಾರರ ತಾಯಿಯನ್ನು ಕೊಲೆ ಮಾಡಿ ಬಳಿಕ ದೂರುದಾರರನ್ನು ಕೊಲೆ ಮಾಡುವುದಾಗಿ ಹೇಳುತ್ತಿದ್ದು. ಇದೇ ವಿಚಾರದಲ್ಲಿ ಪೂರ್ವ ದ್ವೇಷ ಹೊಂದಿ ಮೇ.19 ರಂದು ಮದ್ಯಾಹ್ನ ಸುಮಾರು 12:45 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ದೆಲೋಡಿ ಮನೆಗೆ ದೂರುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಮಾರಕ ಆಯುಧವಾದ ಉದ್ದನೆಯ ಕತ್ತಿಯನ್ನು ಹಿಡಿದು ದೂರುದಾರರ ತಾಯಿಯನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕತ್ತಿಯಿಂದ ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ಕಡಿದು ತೀವ್ರ ಹಲ್ಲೆ ನಡೆಸಿದ್ದು ದೂರುದಾರರ ತಾಯಿಯನ್ನು ಮೂಡಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಾಗದ ಮಹಿಳೆಯ ಮಗಳು ನೀಡಿದ ದೂರಿನ ಮೇರೆಗೆ ಮೇ.19 ರಂದು BNS
-2023(329(4),352,118(2),109) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ವೇಣೂರು ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ತಂಡ ಆರೋಪಿ ಆಳಿಯ ಹೊಸಂಗಡಿ ನಿವಾಸಿ ಪ್ರಸನ್ನ ಕುಮಾರ್(33) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ವೇಣೂರಿನ ಕುರ್ಲೊಟ್ಟು ಜಂಕ್ಷನ್ ನಲ್ಲಿ ಮೇ.20 ರಂದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Related posts

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಸಮಿತಿ ರಚನೆ

Suddi Udaya

ಉಜಿರೆ ಸಂಧ್ಯಾ ಪ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕಕ್ಕೆ ಅತ್ಯುತ್ತಮ ‘ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್-2024’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈಯವರಿಗೆ ಪ್ರಶಸ್ತಿ ಹಸ್ತಾಂತರ

Suddi Udaya

ಬೆಳ್ತಂಗಡಿ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಪೈ , ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಪಟವರ್ಧನ್ ಆಯ್ಕೆ

Suddi Udaya

ಉಜಿರೆ ಪೇಟೆಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಕುರಿತು ಸಭೆ

Suddi Udaya

ನ.26- ನ.30: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

ಪೆರ್ಲ ಬೈಪಾಡಿ ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಜಯಶ್ರೀ ಕೆ. ಸೇವಾ ನಿವೃತ್ತಿ

Suddi Udaya
error: Content is protected !!