September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮಸ್ಥಳ: ಇತಿಹಾಸ ಪ್ರಸಿದ್ಧ ಹೊಯ್ಸಳ ರಾಜರುಗಳಿಂದ ನಿರ್ಮಾಣಗೊಂಡು ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ, ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೇ 17 ರಿಂದ 22 ರವರಗೆ ನಿಲೇಶ್ವರ ಆಲಂಬಾಡಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಶ್ರೀ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಎ 28 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ ಪಾದೆ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಅಶೋಕ್ ಕುಮಾರ್ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಈಶ್ವರ ಗೌಡ ಪಿ ಎಚ್, ಆರ್ಥಿಕ ಸಮಿತಿಯ ಸಂಚಾಲಕ ದಿನೇಶ್ ಗೌಡ ದೆವಸ್ಯ, ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಬರೆಮೇಲು, ಕಾರ್ಯದರ್ಶಿ ಲೋಕೆಶ್ ಶೆಟ್ಟಿ ಮೂರ್ಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮೋಹನ್ ಗೌಡ ಬಾರೆ, ಸೀತಾರಾಮ ಸಾಲ್ಯಾನ್ ಕಜೆ, ಮುದರ ಕುಲಾಲ್ ದೊರ್ತಡಿ, ಶ್ರೀಮತಿ ಮೋಹಿನಿ ಓಬಯ್ಯ ಗೌಡ ಬೆಂದ್ರಾಳ ಹಾಗೂ ಬ್ರಹ್ಮಕಲಶೋತ್ಸವ ವಿವಿಧ ಸಮಿತಿಗಳ ಸಂಚಾಲಕರುಗಳಾದ ಕೀರ್ತನ್ ಶೆಟ್ಟಿ ಮೂರ್ಜೆ, ಶ್ರೀನಿವಾಸ ಗೌಡ ಮಡಿಯೂರು, ರಾಜೇಶ್ ಮೂರ್ಜೆ, ಶಾಜಿಮೋಹನ್ ಮೂರ್ಜೆ, ಅಕ್ಷಯ್ ಮೂರ್ಜೆ,ರಕ್ಷೀತ್ ಮೂರ್ಜೆ,ಶ್ರೀಮತಿ ನಳಿನಾಕ್ಷೀ ವಸಂತ್ ಕಜೆ, ಶ್ರೀಮತಿ ಉಷಾ ಡಿ ಮಜಲು, ಗ್ರಾ ಪಂ ಸದಸ್ಯರಾದ ಶ್ರೀಮತಿ ಸವಿತಾ, ಬೈಲಂಗಡಿ ಬಸದಿಯ ಅರ್ಚಕ ಮಿತ್ರಸೇನ ಇಂದ್ರ ಮೊದಲಾದವರಿದ್ದರು.

Related posts

ಮುಂಡಾಜೆ ಕಾಯರ್ತೋಡಿ ರಾಧಾ ಹೆಬ್ಬಾರ್‌ರವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರು: 25 ಅಡಿಕೆ ಮರ ಹಾಗೂ 10 ರಬ್ಬರ್ ಮರ ಧರಾಶಾಯಿ

Suddi Udaya

ನಾರಾವಿಯ ಪ್ರೀಮಲ್ ನಿಶ್ಮಾ ಸಂಶೋಧನಾ ಲೇಖನದಲ್ಲಿ ಪ್ರಥಮ ಸ್ಥಾನ

Suddi Udaya

ಪೆರಿಂಜೆ ಪಡ್ಯಾರಬೆಟ್ಟ ಕ್ಷೇತ್ರದಿಂದ ಪುಸ್ತಕ ವಿತರಣೆ

Suddi Udaya

ವೇಣೂರು ಐಟಿಐ : ಟೊಯೋಟೊ ನೇಮಕಾತಿ ಶಿಬಿರ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ’ ಪ್ರಶಸ್ತಿ

Suddi Udaya

ಇಂದಬೆಟ್ಟು ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya
error: Content is protected !!