24.8 C
ಪುತ್ತೂರು, ಬೆಳ್ತಂಗಡಿ
October 7, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಪ್ಪಿನಂಗಡಿ: 70 ಅಡಿ ಆಳದ ಹೊಂಡಕ್ಕೆ ಬಿದ್ದ ಕಾರು; ಪಟ್ಟೂರು ಶಿಕ್ಷಣ ಸಂಸ್ಥೆಯ ಸಂಚಾಲಕ ಸೇರಿ ಇಬ್ಬರು ಪಾರು

ಉಪ್ಪಿನಂಗಡಿ: ಉಪ್ಪಿನಂಗಡಿಯಿಂದ ಪಟ್ಟೂರುಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಬದಿಯ ಸುಮಾರು 70 ಅಡಿ ಆಳದ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಮೇ 22ರ ಸಂಜೆ ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ನಡೆದಿದೆ.

ಅಪಘಾತಕ್ಕೀಡಾದ ಕಾರಿನಲ್ಲಿ ಪಟ್ರಮೆ ಗ್ರಾಮದ ದೇರಾಜೆ ನಿವಾಸಿ ಹಾಗೂ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕರಾದ ಪ್ರಶಾಂತ್ ದೇರಾಜೆ ಮತ್ತು ಅವರ ಸಹೋದರ ಪ್ರವೀಣ್ ದೇರಾಜೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಹೆದ್ದಾರಿ ಬದಿಯಿಂದ ಕೆಳಕ್ಕೆ ಉರುಳಿ ಆಳವಾದ ಹೊಂಡಕ್ಕೆ ಬಿದ್ದಿದೆ. ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಲ್ಪಸ್ವಲ್ಪ ತರಚುಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪರಿಚಿತರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.

Related posts

ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ ಕಚೇರಿ ಉದ್ಘಾಟನೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ರೂ. 1.65 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

Suddi Udaya

ಹೃದಯಾಘಾತದಿಂದ ಗರ್ಡಾಡಿಯ ಪದ್ಮಪ್ರಸಾದ್ ನಿಧನ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ ಧರ್ಮಸ್ಥಳ ಶೌಚಾಲಯದ ಸುತ್ತಮುತ್ತ ಸ್ಥಳ ಮಹಜರು

Suddi Udaya

ಅಕ್ರಮವಾಗಿ ಕಡಿದು ಸಂಗ್ರಹಿಸಿದ್ದ ಮರಮಟ್ಟು ವಶಕ್ಕೆ

Suddi Udaya
error: Content is protected !!