24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ದ. ಕ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳ ಭೇಟಿ, ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆ ಬಗ್ಗೆ ಚರ್ಚೆ

ಬೆಳ್ತಂಗಡಿ : ಬಹು ನಿರೀಕ್ಷಿತ ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಕಾಮಗಾರಿಯ ಆರ್ಥಿಕ ಬಿಡ್ ಗೆ ಸರಕಾರ ಈಗಾಗಲೇ ಅನುಮೋದನೆ ನೀಡಿದ್ದು ಆ ನಿಟ್ಟಿನಲ್ಲಿ ವಕೀಲರ ಸಂಘದ ನಿಯೋಗ ಇಂದು ಬೆಂಗಳೂರಿನ ನ್ಯಾಯ ಗ್ರಾಮದಲ್ಲಿರುವ ವಸತಿ ಗೃಹದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ರವರನ್ನು ಭೇಟಿ ಮಾಡಿ ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಮಹಮ್ಮದ್ ನವಾಜ್ ರವರನ್ನು ಭೇಟಿ ಮಾಡಿ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಿದರು.

ನಿಯೋಗದಲ್ಲಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ, ಉಪಾಧ್ಯಕ್ಷ ಶ್ರೀನಿವಾಸ ಗೌಡ, ಹಿರಿಯ ಸಮಿತಿ ಅಧ್ಯಕ್ಷ ಶಿವ ಕುಮಾರ್ ಎಸ್ ಎಂ, ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಎ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಬಂಟರ ಸಂಘದ ವಲಯ ಸಮಿತಿ ಸಾಮಾನ್ಯ ಸಭೆ ಹಾಗೂ ವಲಯ ಸಮಿತಿ ರಚನೆ

Suddi Udaya

ನಾಳ ದೇವಸ್ಥಾನದಲ್ಲಿ ಯಕ್ಷಗಾನ ಬಯಲಾಟ

Suddi Udaya

ಸಿಎಸ್ಇಇಟಿ ಪರೀಕ್ಷೆ: ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಸಾಧನೆ

Suddi Udaya

ಬೆಳ್ತಂಗಡಿ ಚರ್ಚ್ ಗಳಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾಗಿ ಹರೀಶ್ ದೇವಾಡಿಗ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಕೆ

Suddi Udaya

ಮುಂಡಾಜೆ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಲಯ ಭಜನಾ ಸಮಾವೇಶ

Suddi Udaya
error: Content is protected !!