26.5 C
ಪುತ್ತೂರು, ಬೆಳ್ತಂಗಡಿ
September 19, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಜಾತಿ ನಿಂದನೆ, ಹಲ್ಲೆ ಪ್ರಕರಣ : ಆರೋಪಿ ಕರುಣಾಕರ ಗೌಡನಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ: ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಆರೋಪಿ ಕರುಣಾಕರ ಗೌಡ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ನಿವಾಸಿ ಅಶ್ವಥ್(21) ಎಂಬಾತನಿಗೆ ಜೂ.2ರಂದು ಸಂಜೆ ಮಾಚಾರು ಎಂಬಲ್ಲಿರುವಾಗ ಸದ್ರಿ ಸ್ಥಳಕ್ಕೆ ಆರೋಪಿಗಳಾದ ಕರುಣಾಕರ ಗೌಡ, ನಿತಿನ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದು, ಅವರುಗಳ ಪೈಕಿ ಕರುಣಾಕರ ಗೌಡ(26) ಎಂಬಾತ ಅಶ್ವಥ್ ಗೆ ಜಾತಿ ನಿಂದನೆ ಮಾಡಿರುತ್ತಾರೆ ಹಾಗೂ ಮತ್ತೋರ್ವ ಆರೋಪಿತ ನಿತಿನ್ ಎಂಬವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 64/2024, ಕಲಂ: 341,323,324 ಜೊತೆಗೆ 34 ಬಾ ದಂ ಸಂ ಕಲಂ 3(1)(S) SC/ST ACT 2015 03ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸೆಕ್ಟರ್ ಸುಬ್ಬಾಪೂರ್ ಮಠ ನೇತೃತ್ವದಲ್ಲಿ ಪ್ರಕರಣದ ಆರೋಪಿ ಕರುಣಾಕರ ಗೌಡ(26)ನನ್ನು ಜೂ.5 ರಂದು ರಾತ್ರಿ ಬಂಧಿಸಿ ಮಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದು, ಜೂ.6 ರಂದು ಆರೋಪಿಯನ್ನು ಮಂಗಳೂರು ಕೋರ್ಟ್ ಗೆ ಹಾಜರುಪಡಿಸಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Related posts

ಅಳದಂಗಡಿಯಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಗೆ ಚಾಲನೆ

Suddi Udaya

ದಯಾ ಶಾಲಾ ವಾರ್ಷಿಕೋತ್ಸವ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

Suddi Udaya

ಕೊಕ್ಕಡ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ:

Suddi Udaya

ಶಿಬರಾಜೆ: ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಶಾಲೆತ್ತಡ್ಕ ಸ. ಪ್ರೌಢಶಾಲೆಗೆ ಚೇಯರ್ ಕೊಡುಗೆ

Suddi Udaya

ತಾಲೂಕು ಜನಜಾಗೃತಿ ವೇದಿಕೆ ಸಭೆ: ನೂತನ ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್ ವೇಣೂರು ಆಯ್ಕೆ

Suddi Udaya
error: Content is protected !!