31.2 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಪೂರ್ಣ ಪ್ರಮಾಣದ ಸಭೆ

ಬೆಳ್ತಂಗಡಿ: ತಾಲೂಕು ಹಿಂದುಳಿದ ಮೋರ್ಚಾದ ಪೂರ್ಣ ಪ್ರಮಾಣದ ಸಭೆಯು ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಅವರ ಅಧ್ಯಕ್ಷತೆಯಲ್ಲಿ ಮೇ 26 ರಂದು ನಡೆಯಿತು.

ಸಭೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಅಧ್ಯಕ್ಷ ಮಹೇಶ್ ಜೋಗಿ ಉಪಸ್ಥಿತರಿದ್ದು ಮೋರ್ಚಾದ ಕಾರ್ಯ ಚಟುವಟಿಕೆಯ ಬಗ್ಗೆ ಹಾಗೂ ಸಂಘಟನೆಯನ್ನು ಗಟ್ಟಿಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಮೋರ್ಚಾದ ಪ್ರಭಾರಿಗಳಾದ ಚಂದ್ರಶೇಖರ್ ಪೆನ್ನ ಅವರು ಶಕ್ತಿಕೇಂದ್ರ ಮಟ್ಟ ಹಾಗೂ ಬೂತುಮಟ್ಟದಲ್ಲಿ ಸಂಘಟನೆ ದೃಷ್ಟಿಯಲ್ಲಿ ಐದು ಜನರ ತಂಡವನ್ನು ಕಟ್ಟಿ ಮೋರ್ಚಾವನ್ನು ಬಲಗೊಳಿಸಬೇಕೆಂದು ಮಾಹಿತಿ ನೀಡಿದರು. ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಕಲ್ಮಂಜ ಅವರು ಮೋರ್ಚಾ ಪದಾಧಿಕಾರಿಗಳು ಸಂಘಟನೆ ಬಲಗೊಳ್ಳಲು ಕಾರ್ಯರೂಪದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಹಿಂದುಳಿದ ವರ್ಗಮೋರ್ಚಾದ ಪ್ರಭಾರಿಗಳಾದ ಸೀತಾರಾಮ್ ಬೆಳಾಲು ರವರು ಮನ್ ಕಿ ಬಾತ್ ನ ಬಗ್ಗೆ ಮಾಹಿತಿ ನೀಡಿದರು.

ತಾಲೂಕಿನ ಮೋರ್ಚಾದ ಅಧ್ಯಕ್ಷ ರತ್ನಾಕರ್ ಬುಣ್ಣನ್ ರವರು ತಾಲೂಕಿನಲ್ಲಿ ಹಿಂದುಳಿದ ವರ್ಗಮೋರ್ಚಾ ಎಲ್ಲಾ ಬೂತುಗಳನ್ನು ಒಳಗೊಂಡಂತೆ ಶಕ್ತಿಕೇಂದ್ರದ ಮಟ್ಟದಲ್ಲಿ ಸಂಘಟನೆ ವೃದ್ಧಿಸುವಂತೆ ಮಾಹಿತಿ ನೀಡಿದರು. ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಧ್ಯಕ್ಷರು ಶಾಲು ಹಾಕಿ ಗೌರವಿಸಿದರು. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಭಂಡಾರಿ ಹಾಗೂ ವಿಠಲ ಆಚಾರ್ಯ ಉಪಸ್ಥಿತರಿದ್ದರು. ಸುಧೀರ್ ಭಂಡಾರಿ ಸ್ವಾಗತಿಸಿ. ರಾಜೇಶ್ ಮೂಡಿಕೋಡಿ ಧನ್ಯವಾದವಿತ್ತರು.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ‘ದೆಸಿಲ್ದರತಿ’ ಶಿಶಿಲೇಶ್ವರ ದೇವರ ಭಕ್ತಿಗೀತೆಯ ಚಿತ್ರೀಕರಣ

Suddi Udaya

ಎಸ್.ಡಿ.ಎಮ್ ಕಾಲೇಜಿನಲ್ಲಿ ಆಂಗ್ಲ ವಿಭಾಗದಿಂದ ಅಧ್ಯಯನ ವಿನಿಮಯ ಕಾರ್ಯಕ್ರಮ 

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya

ಸಾವ್ಯ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಬೆಳಾಲು : ವಿಶ್ವವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಗ್ರಾಮ ಸಭೆ

Suddi Udaya

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya
error: Content is protected !!