October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲರ್ಸ್ ಡೇ 2026–27

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಪ್ರೀ-ಕೆ.ಜಿ., ಎಲ್.ಕೆ.ಜಿ., ಯು.ಕೆ.ಜಿ. ಹಾಗೂ ಕಿರಿಯ ತರಗತಿಯ ಪುಟಾಣಿ ಮಕ್ಕಳಿಗಾಗಿ ಕಲರ್ಸ್ ಡೇ’ (ಬಣ್ಣಗಳ ದಿನ)ವನ್ನು ವಿನೂತನವಾಗಿ ಆಚರಿಸಲಾಯಿತು.

ಶಾಲೆಯ ಹೆಮ್ಮೆಯ ಬ್ಯಾಂಡ್ ವಾದನದೊಂದಿಗೆ ಪುಟಾಣಿ ಮಕ್ಕಳನ್ನು ಅವರ ಪೋಷಕರ ಸಹಿತವಾಗಿ ಅನುಗ್ರಹ ಶಾಲೆಯ ಮಹಾದ್ವಾರದಿಂದ ಸಭಾಭವನದವರೆಗೆ ಶಿಸ್ತುಬದ್ಧವಾಗಿ ಕರೆತರಲಾಯಿತು. ಬಳಿಕ ಪುಟಾಣಿ ಮಕ್ಕಳ ಸುಂದರವಾದ ಪ್ರಾರ್ಥನಾ ನೃತ್ಯದೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪುಟಾಣಿ ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿಭಿನ್ನ ಹಾಗೂ ಆಕರ್ಷಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ಮೋನಿಕಾ ಐವನ್ ಮೆನೆಜಸ್ ಅವರು ಮಾತನಾಡಿ, ಬಣ್ಣಗಳ ಮಹತ್ವ ಹಾಗೂ ಮಕ್ಕಳ ಜೀವನದಲ್ಲಿ ಅವುಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಮಕ್ಕಳನ್ನು ಪ್ರೀತಿ, ಕಾಳಜಿ ಹಾಗೂ ಪ್ರೋತ್ಸಾಹದೊಂದಿಗೆ ಬೆಳೆಸುವ ಅಗತ್ಯವನ್ನು ಅವರು ತಿಳಿಸಿದರು.

ಶಾಲೆಯ ಸಂಚಾಲಕರಾದ ವಂದನೀಯ ಫಾ. ಅಬೆಲ್ ಲೋಬೊ ಅವರು ಮಾತನಾಡಿ, ಕಲರ್ಸ್ ಡೇ ಆಚರಣೆಯ ಮಹತ್ವವನ್ನು ವಿವರಿಸಿದರು. ಪುಟಾಣಿ ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆ ಹಾಗೂ ಅವರ ಸೃಜನಶೀಲ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ವಂ.ಫಾ. ಡಾ. ವಿಜಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿಸೋಜಾ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಶಶಿಕಿರಣ್ ಜೈನ್ ಹಾಗೂ ಶಿಕ್ಷಕಿ ಗ್ರೇಸಿ ಸಲ್ದಾನ ಅವರು, ಆಡಳಿತ ಮಂಡಳಿಯ ಸದಸ್ಯರಾದ ಬಬಿತಾ ಮೋರಸ್, ಸ್ಟೀವನ್ ಮೊಂತೇರೊ, ಜೈಸನ್ ಮೋರಸ್  ಉಪಸ್ಥಿತರಿದ್ದರು.

ವಿದ್ಯಾರ್ಥಿ ಸುಹಾನ್ ಮೊಂತೇರೋ  ಕಾರ್ಯಕ್ರಮವನ್ನು ನಿರೂಪಿಸಿದರು.

ಪುಟಾಣಿ ಮಕ್ಕಳಿಂದ ವಿವಿಧ ಬಣ್ಣಗಳನ್ನು ಪ್ರತಿಬಿಂಬಿಸುವ ಆಕರ್ಷಕ ವಸ್ತ್ರಾಲಂಕಾರ ಹಾಗೂ ಮನಮೋಹಕ ನೃತ್ಯ ಪ್ರದರ್ಶನ ನಡೆಯಿತು. ವಿವಿಧ ಬಣ್ಣಗಳ ಉಡುಪುಗಳಲ್ಲಿ ಕಂಗೊಳಿಸಿದ ಮಕ್ಕಳ ನೃತ್ಯ, ನಗು ಹಾಗೂ ಉತ್ಸಾಹಭರಿತ ಪ್ರದರ್ಶನವು ನೆರೆದಿದ್ದ ಪೋಷಕರು ಮತ್ತು ಅತಿಥಿಗಳನ್ನು ವಿಶೇಷವಾಗಿ ರಂಜಿಸಿತು.

Related posts

ಪಣಕಜೆ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯ ಮಹಾಸಭೆ: ನೂತನ ಅಧ್ಯಕ್ಷರಾಗಿ ಡಾ. ನಿಯಾಝ್, ಪ್ರಧಾನ ಕಾರ್ಯದರ್ಶಿಯಾಗಿ ಬಿ ಯಂ ಅಶ್ರಫ್

Suddi Udaya

ಕೊಕ್ಕಡದಲ್ಲಿ ಗಗನ್ ಪ್ರಾವಿಷನ್ ಸ್ಟೋರ್ಸ್ ಮತ್ತು ಗಗನ್ ಸ್ಟುಡಿಯೋ ಶುಭಾರಂಭ

Suddi Udaya

ಮುಂಡಾಜೆ‌: ಮಸ್ಲಕ್ ನವೀಕೃತ ಮದರಸ ಉದ್ಘಾಟನೆ: ಹಜ್ಜ್ ಯಾತ್ರಿ ಕಾಜೂರು ತಂಙಳ್ ರಿಗೆ ಬೀಳ್ಕೊಡುಗೆ

Suddi Udaya

ನೀರಿನ ವ್ಯವಸ್ಥೆ ಕಲ್ಪಿಸಿದ ಶಾಸಕ ಹರೀಶ್ ಪೂಂಜರವರಿಗೆ ವೇಣೂರು ಪ್ರೌಢಶಾಲಾ ವತಿಯಿಂದ ಸನ್ಮಾನ

Suddi Udaya

ಜ.1: ಜೆಸಿಐ ಕೊಕ್ಕಡ ಕಪಿಲ ಘಟಕದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 11 ನೇ ಗುರುತು ಮಾಡಿದ ಜಾಗದಲ್ಲಿ ಸಿಗದ ಅವಶೇಷಗಳು

Suddi Udaya
error: Content is protected !!