32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕ್ಯಾಂಟಿನ್‌ನಲ್ಲಿ ವೇಶ್ಯಾವಟಿಕೆ ಪ್ರಕರಣ: ಆರೋಪಿ ಸುಂದರ್ ಶೆಟ್ಟಿಗೆ ಜಾಮೀನು ಮಂಜೂರು

ಬೆಳ್ತಂಗಡಿ: ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡದ ಕ್ಯಾಂಟಿನ್ ನಲ್ಲಿ ವೇಶ್ಯಾವಟಿಕೆ ಪ್ರಕರಣ ಸಂಬಂಧ ಮೊದಲ ಆರೋಪಿ ಸುಂದರ್ ಶೆಟ್ಟಿಗೆ ಮಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆಇಬಿ ರಸ್ತೆಯಲ್ಲಿರುವ ಪವನ್ ಕ್ಯಾಂಟಿನ್ ನಲ್ಲಿ ವೇಶ್ಯಾವಟಿಕೆ ನಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷ ನೇತೃತ್ವದ ಪೊಲೀಸರು ಮೇ.10 ರಂದು ಸಂಜೆ 5 ಗಂಟೆಗೆ ದಾಳಿ ಮಾಡಿ ವೇಶ್ಯಾವಟಿಕೆ ನಡೆಸುತ್ತಿದ್ದ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ(55) ಮತ್ತು ಉಸ್ಮಾನ್(38) ನನ್ನು ಬಂಧಿಸಿ ,ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಸುಂದರ್ ಶೆಟ್ಟಿ ಮತ್ತು ಉಸ್ಮಾನ್ ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ.11 ರಂದು ಸಂಜೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಎರಡನೇ ಆರೋಪಿ ಉಸ್ಮಾನ್ ಗೆ ಮೇ.25 ರಂದು ಜಾಮೀನು ಮಂಜೂರಾಗಿತ್ತು.

ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಸುಂದರ್ ಶೆಟ್ಟಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ನಡೆಸಿದ ನ್ಯಾಯಾಲಯ ಮೊದಲ ಆರೋಪಿ ಸುಂದರ್ ಶೆಟ್ಟಿಗೆ ಮೇ.27 ರಂದು ಜಾಮೀನು ಮಂಜೂರು ಮಾಡಿದೆ. ಸುಂದರ್ ಶೆಟ್ಟಿ ಪರ ಮಂಗಳೂರು ವಕೀಲರಾದ ಅರುಣ್ ಬಂಗೇರ ರವರು ವಾದ ಮಂಡಿಸಿದ್ದಾರೆ.

Related posts

ಮೆಸ್ಕಾಂ ಅಧ್ಯಕ್ಷ ಕೆ ಹರೀಶ್ ಕುಮಾರ್ ರಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಗೌರವಾರ್ಪಣೆ

Suddi Udaya

ಮೈರೋಳ್ತಡ್ಕ ಪುತ್ತಿಲ ನಿವಾಸಿ ಕಮಲ ನಿಧನ

Suddi Udaya

ಹೊಸ್ಮಾರು ಕುಲಾಲ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 2 ಲಕ್ಷದ ಮಂಜೂರಾತಿ ಪತ್ರ ಹಸ್ತಾಂತರ

Suddi Udaya

ಜಡಿಮಳೆ: ಉರುಳಿ ಬಿದ್ದ ಸಂಗಮ ಕ್ಷೇತ್ರ ಕಲ್ಮಂಜ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಪುರಾತನ ಕಾಲದ ಅಶ್ವತ್ಥ ಮರ

Suddi Udaya

ಕಕ್ಕಿಂಜೆ: ಸಿದ್ದಿಕ್ ಯು.ಪಿ. ಮಾಲಕತ್ವದ ವಾಯುಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ

Suddi Udaya

ಕಳಿಯ ಮತ್ತು ಬೆಳ್ತಂಗಡಿಮೆಸ್ಕಾಂ ಸಂಪರ್ಕಕ್ಕೆ ರಸ್ತೆಗೆ ಶಿಲಾನ್ಯಾಸ

Suddi Udaya
error: Content is protected !!