27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಬಿವೋಕ್‌ ವಿಭಾಗದಲ್ಲಿ ಸಿನಿಮಾ ಹಾಗೂ ಬ್ರ್ಯಾಂಡಿಂಗ್‌ ಕುರಿತು ವಿಶೇಷ ಸಂವಾದ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ ಚಿತ್ರರಂಗ, ಸಿನಿಮಾ ನಿರ್ಮಾಣ, ಕಂಟೆಂಟ್ ಸೃಷ್ಟಿ ಹಾಗೂ ಡಿಜಿಟಲ್ ಬ್ರ್ಯಾಂಡಿಂಗ್ ಕುರಿತು ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹೈದರಾಬಾದಿನ ‘ಲೈಟ್ಸ್ ಕ್ಯಾಮೆರಾ ವುಮನ್’ ಸಂಸ್ಥೆಯ ಸಂಸ್ಥಾಪಕಿ ಹಾಗೂ ಚಲನಚಿತ್ರ ನಿರ್ದೇಶಕಿ ನವ್ಯ ನಾಗೇಶ್, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಿಂಜರಿಯಬಾರದು. ಉತ್ತಮ ಪೋರ್ಟ್‌ಫೋಲಿಯೊ ನಿರ್ಮಾಣ, ನಿರಂತರ ಕಲಿಕೆ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಆಧರಿಸಿದ ಕಥೆಗಳೇ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು. ಪ್ರತಿಯೊಂದು ದೃಶ್ಯವೂ ಸೂಕ್ತ ಯೋಜನೆಯೊಂದಿಗೆ ರೂಪುಗೊಳ್ಳಬೇಕಿದ್ದು, ಸುತ್ತಮುತ್ತಲಿನ ಬದುಕು ಮತ್ತು ಸಮಕಾಲೀನ ಘಟನೆಗಳೇ ಉತ್ತಮ ಕಥೆಗಳ ಮೂಲವಾಗಬಹುದು ಎಂದು ತಿಳಿಸಿದರು.

ಐಐಟಿ ಹಳೆ ವಿದ್ಯಾರ್ಥಿನಿ ಹಾಗೂ ‘ಬ್ರ್ಯಾಂಡ್ ಕ್ಯಾಮಿಯೋ’ ಸಂಸ್ಥಾಪಕಿ ಕಾವ್ಯ ನಾಗೇಶ್ ಮಾತನಾಡಿ, “ಇಂದು ಸಿನಿಮಾದಲ್ಲಿ ಒಳ್ಳೆಯ ಕಥೆ ಹೇಳಿದರೆ ಮಾತ್ರ ಸಾಲದು; ಆ ಕಥೆಯನ್ನು ಪ್ರೇಕ್ಷಕರಿಗೆ ಹೇಗೆ ತಲುಪಿಸುತ್ತೇವೆ ಎಂಬುದೂ ಅಷ್ಟೇ ಮುಖ್ಯ” ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಮೂಲಕವೇ ಕಂಟೆಂಟ್ ಹೆಚ್ಚು ಜನರನ್ನು ತಲುಪಲು ಸಾಧ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚಿತ್ರರಂಗದ ಸೃಜನಾತ್ಮಕ ಹಾಗೂ ಮಾರುಕಟ್ಟೆ ಸಂಬಂಧಿತ ಆಯಾಮಗಳ ಕುರಿತು ಮೌಲ್ಯಯುತ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ಸಹಾಯಕ ಪ್ರಾಧ್ಯಾಪಕಿ ತೇಜಸ್ವಿನಿ ಇನ್ನಿತರರು ಉಪಸ್ಥಿತರಿದ್ದರು.

Related posts

7 ಮಂದಿ ಮತದಾರರ ಹೆಸರಿನಲ್ಲಿ ಅನುಮತಿಯಿಲ್ಲದೆ ಫಾರಂ-7 ಅರ್ಜಿ ಸಲ್ಲಿಕೆ ಆರೋಪ; ಸಮಗ್ರ ತನಿಖೆಗೆ ಎಸ್.ಡಿ.ಪಿ.ಐ. ಆಗ್ರಹ

Suddi Udaya

‘ಶ್ವೇತ ಸಮೂಹ ‘ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ  ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಆಪರೇಷನ್ ಸಿಂದೂರ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ

Suddi Udaya

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ದಿಗ್ವಿಜಯ: ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

Suddi Udaya
error: Content is protected !!