26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಕ್ಕಾರಿನ ಯುವಕನನ್ನು ಕೆದಿಲದಲ್ಲಿ ಅಪಹರಿಸಿ ಹಲ್ಲೆ ಆರೋಪ-ಪ್ರಕರಣ ದಾಖಲು

ಪುತ್ತೂರು: ಬೆಳ್ತಂಗಡಿಯ ತೆಕ್ಕಾರು ನಿವಾಸಿಯಾಗಿದ್ದು ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಯುವಕನೋರ್ವನನ್ನು ಕೆದಿಲದಿಂದ ಪರಿಚಯದ ಮೂವರು ರಿಕ್ಷಾವೊಂದರಲ್ಲಿ ಅಪಹರಿಸಿ ಕರೆದೊಯ್ದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ತೆಕ್ಕಾರಿನ ಮಹಮ್ಮದ್ ಇರ್ಷಾದ್ (26ವ) ಅಪಹರಣಕ್ಕೊಳಗಾಗಿ ಹಲ್ಲೆಗೊಳಗಾದವರು.

ಘಟನೆ ವಿವರ: ‘ಮೇ 25ಕ್ಕೆ ಕಾಸರಗೋಡಿನಿಂದ ಬೆಳ್ತಂಗಡಿ ಮನೆಗೆ ಬಂದಾಗ ಅಲ್ಲಿದ್ದ ಅಕ್ಕ ಸೈನಾಜ್ ಅವರನ್ನು ಮನೆಯಾದ ಕರುವೇಲು ಎಂಬಲ್ಲಿಗೆ ಸ್ಕೂಟರ್‌ನಲ್ಲಿ ಬಿಟ್ಟು ಬಳಿಕ ಕೆದಿಲ ಗ್ರಾಮದ ಗಡಿಯಾರ ಮಸೀದಿ ಬಳಿ ಸ್ಕೂಟರ್ ಅನ್ನು ತನ್ನ ಬಾವನಿಗೆ ನೀಡಲು ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಪರಿಚಯಸ್ಥರಾದ ಆಸೀಫ್ ಯಾನೆ ಅಚ್ಚಿ, ಶಾಕೀರ್ ಮತ್ತು ಆಸೀಫ್ ಎಂಬವರು ನನ್ನನ್ನು ಆಟೋ ರಿಕ್ಷಾವೊಂದರಲ್ಲಿ ಅಪಹರಿಸಿ, ಸಜೀಪ ಎಂಬಲ್ಲಿನ ಗುಡ್ಡಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಮೇ 26ರಂದು ರಾತ್ರಿಯ ತನಕ ಗುಡ್ಡದಲ್ಲೇ ಇರಿಸಿ ಹಲ್ಲೆ ನಡೆಸಿದ್ದಾರೆ. ಮೇ27ರಂದು ಆರೋಪಿಗಳು ನಿದ್ರೆಯಲ್ಲಿದ್ದಾಗ ಅವರಿಗೆ ತಿಳಿಯದಂತೆ ತಪ್ಪಿಸಿಕೊಂಡು ಬಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ’ ಮಹಮ್ಮದ್ ಇರ್ಷಾದ್ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಶಾಕೀರ್ ಎಂಬವರು ಹಣ ಕೊಡಲು ಬಾಕಿ ಇರುವುದನ್ನು ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕನ್ಯಾಡಿ-2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾ ದಿನದ ಮಹತ್ವದ ಕುರಿತು ಕಾರ್ಯಕ್ರಮ

Suddi Udaya

ಉಜಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya

ಮದ್ದಡ್ಕ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya
error: Content is protected !!