29.9 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಕಾರ್ಯಾಗಾರ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ

ಮುಂಡೂರು : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮುಂಡೂರು ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಮುಂಡೂರು ಇವುಗಳ ಆಶ್ರಯದಲ್ಲಿ” ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು” ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ- ಬಲಯುತರಾಗಿರಿ, ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ವಾಣಿಯಂತೆ ಮುಂಡೂರು ಗ್ರಾಮದ ಎಲ್ಲಾ ಧರ್ಮ ಮತ್ತು ಸಮುದಾಯದ ಮಕ್ಕಳಿಗೆ “ಸ್ಫೂರ್ತಿ” ಬದುಕಿಗೆ ಹೊಸ ಚೈತನ್ಯ.. ಕಾರ್ಯಗಾರ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ಬ್ಯಾಗು ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಮುಂಡೂರು ಶಾರದಾಂಬ ಯುವಕ ಮಂಡಲದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶ್ರೀ ಕ್ಷೇತ್ರ ಮಂಗಳಗಿರಿ ಆಡಳಿತ ಮೊಕ್ತೇಸರರು ರಾಜೀವ ಇವರು ಮಾತನಾಡುತ್ತಾ ಅತ್ಯಂತ ಉತ್ತಮವಾದಂತಹ ವಿಶಿಷ್ಟವಾದಂತಹ ಕಾರ್ಯಕ್ರಮ, ಗ್ರಾಮದ ಜನರಲ್ಲಿ ಉತ್ತಮ ಬಾಂಧವ್ಯ, ಪ್ರೀತಿ ವಿಶ್ವಾಸದ ಜೊತೆಗೆ ನಾವೆಲ್ಲರೂ ಉಸಿರಾಡುವ ಗಾಳಿ, ಕುಡಿಯುವ ನೀರು, ಬೆಳಕು ಎಲ್ಲ ಒಂದೇ, ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಬಿಲ್ಲವ ಸಂಘಟನೆ ಪರಿಪಾಲನೆ ಮಾಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಇವರು ಬ್ಯಾಗ್ ಮತ್ತು ಪುಸ್ತಕ ವಿತರಣೆ ಮಾಡಿ ಮಾತನಾಡುತ್ತಾ ಈ ಬಿಲ್ಲವ ಸಂಘಟನೆ ಗ್ರಾಮದ ಎಲ್ಲಾ ಧರ್ಮದವರು ಮತ್ತು ಸಮುದಾಯದವರನ್ನು ಸೇರಿಸಿ ತಾಲೂಕು, ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮವನ್ನು ಮಾಡಿದ್ದಾರೆ, ಕೇವಲ ಒಂದೇ ಜಾತಿ ಧರ್ಮಕ್ಕಾಗಿ ಸಂಘಟನೆ ಮಾಡಿದವರಲ್ಲ ಸಮಸ್ತ ಮಾನವ ಕುಲಕ್ಕೆ ಒಳಿತನ್ನು ಮಾಡಿದವರು ಎಂದರು.

ಬೆಳ್ತಂಗಡಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಸುಮತಿ ಪ್ರಮೋದ್ , ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ ಕೆ ಪ್ರಸಾದ್, ಯುವ ವಾಹಿನಿ ರಿಜಿಸ್ಟರ್ಡ್ ಬೆಳ್ತಂಗಡಿ ಘಟಕ ಅಧ್ಯಕ್ಷ ಶ್ರೀ ಗುರುರಾಜ್ ಗುರಿಪಳ್ಳ, ಕಾರ್ಕಳ ಸ. ಪ್ರಥಮ ದರ್ಜೆ ಕಾಲೇಜು ಡಾ. ಚಂದ್ರಾವತಿ , ಬೆಳ್ತಂಗಡಿ ಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ ಉಪಾಧ್ಯಕ್ಷ ಸುಂದರ ಪೂಜಾರಿ, ಕ್ರೈಸ್ತ ಸಮುದಾಯದ ಮುಖಂಡ ಅತ್ತುಸ್ ವೇಗಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.

ಕಾರ್ಯಕ್ರಮದಲ್ಲಿ ಮುಂಡೂರು ಗ್ರಾಮದ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಹರಿಣಿ ಮಂಜುನಾಥ್ ಇವರ ಮಗಳಾದ ತೃಷ, ವಸಂತ ಆಚಾರ್ಯ ಮತ್ತು ಸವಿತಾ ಇವರ ಮಗನಾದ ಅಕ್ಷತ ವಿ ಆಚಾರ್ಯ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ರಾಜೀವ್ ಸಾಲಿಯಾನ್ ಮತ್ತು ಶೈಲಜಾ ಅವರ ಮಗಳಾದ ಯಶಸ್ವಿ, ಮ್ಯಾಕ್ಸಿನ್ ಡಿಸೋಜಾ ಇವರ ಮಗಳಾದ ಮರಿಟಾ ಸ್ನೇಹ ಡಿಸೋಜಾ ಇವರನ್ನು ಹಾಗೂ ಗುರುವಪ್ಪ ಸಾಲಿಯಾನ್ ಕೇ ರಿಯಾರ್ ಗೌರವಾಧ್ಯಕ್ಷ ಮಹಾಮಾಯಿ ಸೇವಾ ಸಮಿತಿ ಕೋಟಿ ಕಟ್ಟೆ ಮುಂಡೂರು, ಶ್ರೀ ರಾಜೀವ ಆಡಳಿತ ಮೊಕ್ತೇಸರರು ಶ್ರೀಕ್ಷೇತ್ರ ಮಂಗಳಗಿರಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಂಡೂರು ಆಶಾ ಕಾರ್ಯಕರ್ತೆ ಸುಶೀಲಾ ಶೆಟ್ಟಿ, ಮುಂಡೂರು ವಿಶ್ವಕರ್ಮ ಸಮಾಜ ಅಧ್ಯಕ್ಷ ಚಿದಾನಂದ ಆಚಾರ್ಯ, ಬದ್ರಿಯಾ ಜುಮ್ಮಾ ಮಸ್ಜಿದ್ ಮುಂಡೂರು ಉಪಾಧ್ಯಕ್ಷ ಇಸುಬು ಬಡಕಿಲ, ಮುಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕಲ್ಲೇಶ್ ಕೆಬಿ, ಮುಂಡೂರು ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಮೂಲ್ಯ, ಮುಂಡೂರು ಶ್ರೀ ಶಾರದಾಂಬ ಯುವಕ ಮಂಡಲ ಅಧ್ಯಕ್ಷ ರಮಾನಂದ ಸಾಲಿಯಾನ, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಹರಿಶ್ಚಂದ್ರ ಹೆಗ್ಡೆ, ಮುಂಡೂರು ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಸತೀಶ್, ಮಲೆಕುಡಿಯ ಸಮಾಜದ ಮುಖಂಡ ಸತೀಶ ಎಂ ಕೆ, ನಲ್ಕೆ ಸಮಾಜದ ಮುಖಂಡ ದೇಜಪ್ಪ ನಲ್ಕೆ, ದೇವಾಡಿಗ ಸಮಾಜದ ಮುಖಂಡ ರಮೇಶ್ ದೇವಾಡಿಗ, ಬೆಳ್ತಂಗಡಿ ಘಟಕ ಯುವ ವಾಹಿನಿ ನಿಯೋಜಿತ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ , ಪ್ರತಿಭಾ ಪ್ರವೀಣ್ ಮಡಿವಾಳ ಮುಂಡೂರು,, ಗುರುವಪ್ಪ ಪೂಜಾರಿ ಅಧ್ಯಕ್ಷರು ಯುವ ಬಿಲ್ಲವ ವೇದಿಕೆ, ಶ್ವೇತಾ ಹರೀಶ್ ಅಧ್ಯಕ್ಷರು ಬಿಲ್ಲವ ಮಹಿಳಾ ವೇದಿಕೆ, ಪ್ರಸನ್ನ ನಾನಿಲ್ತಿ ಯಾರ್ ಕಾರ್ಯದರ್ಶಿ ಯುವ ಬಿಲ್ಲವ ವೇದಿಕೆ, ಶಾಂಭವಿ ಕೊಡಕಲ್ ಕಾರ್ಯದರ್ಶಿ ಬಿಲ್ಲವ ಮಹಿಳಾ ವೇದಿಕೆ ವೇದಿಕೆಯಲ್ಲಿ ಉಪಸ್ಥಿತ ರಿದ್ದರು.

ಗ್ರಾಮದ 150 ಮಕ್ಕಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗು ನೀಡಿದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಾಂ , ಪುಸ್ತಕ ವಿತರಣೆಗೆ ದೇಣಿಗೆ ನೀಡಿದ ಸತೀಶ್ ಅರುವದಕಲ ಮತ್ತು ವೀರೇಂದ್ರ ಪೂಜಾರಿ ಕುದ್ಕೋಳಿ ದರ್ಕಾಸ್ ಇವರಿಗೆ ಕೃತಜ್ಞತೆ ಅರ್ಪಿಸಲಾಯಿತು. ಸ್ಪೂರ್ತಿ ಬದುಕಿಗೆ ಹೊಸ ಚೈತನ್ಯ ಕಾರ್ಯಗಾರವನ್ನು ಸ್ಮಿತೇಶ್ ಎಸ್ ಬಾರ್ಯ ಆಪ್ತ ಸಮಾಲೋಚಕರು ಬೆಳ್ತಂಗಡಿ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಜೀವ್ ಸಾಲಿಯನ್ ಮಾಜಿ ಅಧ್ಯಕ್ಷ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮುಂಡೂರು ಪ್ರಸ್ತಾವನೆ ಗೈದರು, ಅದಿತಿ ಆದಿತ್ಯ ಜಯರಾಜ್ ರಿಷಿಕಾ, ಪ್ರಾರ್ಥನೆ ಮಾಡಿದರು, ಜಯರಾಜ್ ಬಂಗೇರಾ ಪ್ರಧಾನ ಕಾರ್ಯದರ್ಶಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮುಂಡೂರು ಸ್ವಾಗತಿಸಿದರು, ಭೋಜ ಪೂಜಾರಿ ಮಾಜಿ ಅಧ್ಯಕ್ಷರು ಶ್ರೀ ಗು ನಾ ಸಂಘ ಮುಂಡೂರು ಧನ್ಯವಾದ ನೀಡಿದರು. ಸುಧಾ ರಮಾನಂದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದ ಪ್ರಾರಂಭದಲ್ಲಿ ಪ್ರಸನ್ನ ನಾನಿಳ್ತ್ಯಾರ್ ಸ್ವಾಗತಿಸಿ ಅಶೋಕ್ ಕೊಡಕ್ಕಲ್ ಧನ್ಯವಾದ ನೀಡಿದರು.

Related posts

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ದೇಣಿಗೆ

Suddi Udaya

ಕೊಯ್ಯೂರು: ಕೋರಿಯಾರು ವಾತ್ಸಲ್ಯ ಮನೆಯ ಗೋಪಾಲಕೃಷ್ಣ ಶರ್ಮ ನಿಧನ

Suddi Udaya

ನಿಟ್ಟಡೆ ಕುಂಭಶ್ರೀ ಪದವಿಪೂರ್ವ ಕಾಲೇಜಿನಲ್ಲಿ SPECTRUM -2025 ಫ್ರೆಶರ್ಸ್ ಡೇ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉಜಿರೆ ಅನುಗ್ರಹ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಹಿರಿಯ ಯಕ್ಷಗಾನ ಕಲಾವಿದ ಬಿ. ಗೋಪಾಲಕೃಷ್ಣ ನಿಧನ

Suddi Udaya

ಉಜಿರೆ: ಎಸ್.ಡಿ.ಎಂ ಜೂನಿಯರ್ ಇಂಡಿಯನ್ ರೆಡ್ ಕ್ರಾಸ್ ಹಾಗೂ ಯುತ್ ರೆಡ್ ಕ್ರಾಸ್ ನಿಂದ ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಾಗಾರ

Suddi Udaya
error: Content is protected !!