24.9 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್‌ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಔಷಧದಾನ ಪರಂಪರೆಯನ್ನು ನಿರಂತರವಾಗಿ ಮಾಡುವಲ್ಲಿ ಸಹಕರಿಸುತ್ತಿರುವ ಉಜಿರೆ ಎಸ್‌ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ದಾದಿಯರು, ರೋಗಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರೋಗಿಗಳ ಸೇವೆ ಮಾಡುವ ಎಲ್ಲಾ ದಾದಿಯರ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆ ದಂಪತಿಗಳು ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗಳ ಶುಭಾಶೀರ್ವಾದ ದಾದಿಯರ ಪಾಲಿಗೆ ಸದಾ ಇದೆ ಎಂದು ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.

ಅವರು ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೇ 29ರಂದು ಹಮ್ಮಿಕೊಳ್ಳಲಾದ ದಾದಿಯರ ದಿನಾಚರಣೆಯ ಪ್ರಯುಕ್ತ ದಾದಿಯರನ್ನು ಗೌರವಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಸೇವೆ ಉತ್ತಮವಾಗಿರುವುದಕ್ಕೆ ಇಲ್ಲಿನ ದಾದಿಯರು ಕೂಡ ಕಾರಣ. ರೋಗಿಗಳ ಸಮಸ್ಯೆಯನ್ನು ತಿಳಿದು, ವೈದ್ಯರ ಸೂಚನೆಯನ್ನು ಸರಿಯಾಗಿ ಪಾಲಿಸುವ ದಾದಿಯರ ಜವಾಬ್ದಾರಿಯುತ ಸೇವೆಗೆ ಬೆಲೆ ಕಟ್ಟಲಾಗದು ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ದಾದಿಯರಿಗೆ ಶುಭ ಹಾರೈಸಿ ಮಾತನಾಡಿ ವೈದ್ಯಕೀಯ ಕ್ಷೇತ್ರದ ವೃತ್ತಿಯಲ್ಲಿ ಒತ್ತಡ ಮತ್ತು ಕಿರಿಕಿರಿಯನ್ನು ಅನುಭವಿಸುವವರು ದಾದಿಯರು. ನಮ್ಮ ದಾದಿಯರ ಸೇವೆ ಉತ್ತಮವಾಗಿದ್ದು, ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ ಮಾತನಾಡುತ್ತಾ, ಡ್ಯೂಟಿಗಿಂತ ಸರ್ವಿಸ್ ಭಿನ್ನವಾಗಿರುತ್ತದೆ. ಸರ್ವಿಸ್‌ನಲ್ಲಿ ತ್ಯಾಗ ಇದೆ. ಕಾಳಜಿ ಇದೆ. ನಮ್ಮ ದಾದಿಯರು ಸೇವಾ ಮನೋಭಾವದಿಂದ ದುಡಿಯುತ್ತಿದ್ದು, ಎಲ್ಲಾ ದಾದಿಯರಿಗೆ ಶುಭ ಹಾರೈಕೆ ಸಲ್ಲಿಸುತ್ತೇನೆ ಎಂದರು.

ನರ್ಸಿಂಗ್ ಅಧೀಕ್ಷಕಿ ಶೆರ್ಲಿ ದಾದಿಯರ ಪ್ರಮಾಣವಚನವನ್ನು ನೆರವೇರಿಸಿಕೊಟ್ಟು ಮಾತನಾಡುತ್ತಾ, ರೋಗಿಯ ಯೋಗಕ್ಷೇಮವನ್ನು ನಿರಂತರ ನೋಡಿಕೊಳ್ಳುತ್ತಾ, ರೋಗಿಗಳ, ವೈದ್ಯರ ಮತ್ತು ಆಸ್ಪತ್ರೆಯ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿರುವುದು ದಾದಿಯರ ಕರ್ತವ್ಯ. ವಿಶ್ವವೇ ಗೌರವಿಸುವ ರೀತಿಯಲ್ಲಿ ತನ್ನ ವೃತ್ತಿ ಜೀವನವನ್ನು ರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟ ಫ್ಲೋರೆನ್ಸ್ ನೈಟಿಂಗೇಲ್, ನರ್ಸಿಂಗ್ ವೃತ್ತಿ ಮಾಡುವವರಿಗೆ ಮಾದರಿಯಾಗಿದ್ದಾರೆ. ನಮ್ಮ ಆಸ್ಪತ್ರೆಯು ಸೇವಾ ಆಧಾರಿತವಾಗಿದ್ದು, ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಲಾಭದ ಅಪೇಕ್ಷೆಯಿಲ್ಲದೆ ರೋಗಿಗಳ ಸೇವೆಯ ಉದ್ದೇಶದಿಂದ ಈ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಇಲ್ಲಿ ಸೇವಾ ಮನೋಭಾವದಿಂದ ದುಡಿಯುವ ಮೂಲಕ ನಾವೆಲ್ಲ ಪೂಜ್ಯರ ಉದ್ದೇಶ ನೆರವೇರಿಸಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿನ ಎಲ್ಲಾ ದಾದಿಯರಿಗೆ ನನ್ನ ಮನದಾಳದಿಂದ ಶುಭ ಹಾರೈಕೆಗಳು ಎಂದರು.

ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರನ್ನು ಸನ್ಮಾನಿಸಲಾಯಿತು. ಎಲ್ಲಾ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ದಾದಿಯರಿಗೆ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆಸ್ಪತ್ರೆಯ ಮಾನವ ಸಂಪನ್ಮೂಲ ಅಧಿಕಾರಿ ಸೌಮ್ಯ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಗನ್ನಾಥ್ ಎಂ. ನಿರೂಪಿಸಿದರು.

Related posts

ಕಜಕೆ ಸ. ಹಿ ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya

ಎ.20: ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: 10 ಸಾವಿರ ಕಾರ್ಯಕರ್ತರು ಭಾಗಿ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯ ಎಂ. ಮೃತ್ಯುಂಜಯ, ಕೊರಗಪ್ಪ ಹೆಗ್ಡೆ, ಅನಿತಾ ಶಿಂಗಾಯಿ ಉಪ ತಹಸೀಲ್ದಾರ್ ಆಗಿ ಭಡ್ತಿ

Suddi Udaya

ನಡ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮ

Suddi Udaya

ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!