September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರಸಾರ ಭಾರತಿ ದೂರದರ್ಶನದಲ್ಲಿ ಇಳಂತಿಲದ ಭರತನಾಟ್ಯ ಕಲಾವಿದೆ ಕೃತಿ ಕೈಲಾರ್‌ಗೆ ಮಾನ್ಯತೆ

ಬೆಳ್ತಂಗಡಿ: ಪ್ರಸಾರ ಭಾರತಿ ದೂರದರ್ಶನದಲ್ಲಿ ಭರತನಾಟ್ಯವನ್ನು ಪ್ರದರ್ಶನ ನೀಡುವ ನಿಟ್ಟಿನಲ್ಲಿ ಇಳಂತಿಲದ ಕೃತಿ ಕೈಲಾರ್‌ರವರಿಗೆ ‘ಬಿ’ ಗ್ರೇಡ್ ಕಲಾವಿದೆಯಾಗಿ ಮಾನ್ಯತೆ ದೊರಕಿದೆ.

ಇಳಂತಿಲ ನಿವಾಸಿ ಕೈಲಾರ್ ರಾಜಗೋಪಾಲ ಭಟ್ ಮತ್ತು ಸತ್ಯೇಶ್ವರಿ ದಂಪತಿಯ ಪುತ್ರಿಯಾಗಿರುವ ಈಕೆ ಭರತನಾಟ್ಯ ಶಾಸ್ತ್ರ, ಪ್ರವೀಣೆಯಾಗಿದ್ದು, ಹಲವಾರು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಈಕೆಯ ಭರತಾನಾಟ್ಯ ಪ್ರಾವೀಣ್ಯತೆಯನ್ನು ಕಂಡ ಪ್ರಸಾರ ಭಾರತಿಯ ಆಯ್ಕೆ ಸಮಿತಿಯು ದೂರದರ್ಶನದಲ್ಲಿ ಕಾರ್ಯಕ್ರಮ ನೀಡುವ ನಿಟ್ಟಿನಲ್ಲಿ ‘ಬಿ’ ಗ್ರೇಡ್ ಕಲಾವಿದೆಯಾಗಿ ಇವರನ್ನು ಆಯ್ಕೆ ಮಾಡಿದೆ.

ಪ್ರಸಕ್ತ ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನ ಅಂತಿಮ ವರ್ಷದ ಬಿ ಬಿ ಎ ಎಲ್ ಎಲ್ ಬಿ. ವಿದ್ಯಾರ್ಥಿನಿಯಾಗಿದ್ದು, ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಹಾಗೂ ವಿದುಷಿ ಸುಹಾಸಿನಿ ಕೌಲಗಿ ರವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಮಾತ್ರವಲ್ಲದೆ ವಿದ್ಯಾನ್ ಡಾ. ಆರ್.ಎಸ್. ನಂದ ಕುಮಾರ್ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾರೆ.

Related posts

ತಾಲೂಕು ಮಟ್ಟದ ಗೀತಗಾಯನ ಸ್ಪರ್ಧೆ: ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಅಮೃತ ಕಲಶ ಯಾತ್ರೆ

Suddi Udaya

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸ‌ರ್ ತಪಾಸಣಾ ಶಿಬಿರ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿರವರಿಗೆ ಆರೋಗ್ಯ ಸೇವಾ ಶ್ರೇಷ್ಠತೆ ಪ್ರಶಸ್ತಿ

Suddi Udaya

ಅ.11: ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಚಾಲನೆ

Suddi Udaya
error: Content is protected !!