27.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೇಸಿಗೆ ರಜೆ ಮುಗಿಸಿ ವಿದ್ಯಾಕೇಂದ್ರಕ್ಕೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು: ಬಜಿರೆ ಪಿ.ಎಂ.ಶ್ರೀ ಶಾಲಾ ಪ್ರಾರಂಭೋತ್ಸವ: ಶಾಲೆಯಲ್ಲಿ ಮಕ್ಕಳ ಕಲರವ-ಪಾಲಕರ ಸಂಭ್ರಮ

ಬಜಿರೆ: ಬೇಸಿಗೆ ರಜೆ ಮುಗಿಸಿ ವಿದ್ಯಾಕೇಂದ್ರಕ್ಕೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ನೂತನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಪಿ.ಎಂ.ಶ್ರೀ ಬಜಿರೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.1ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.

ವಿದ್ಯಾರ್ಥಿಗಳನ್ನು ಪಥಸಂಚಲನ ಮೆರವಣಿಗೆಯ ಮೂಲಕ ಆರತಿ ಎತ್ತಿ ಸ್ವಾಗತಿಸಲಾಯಿತು. ಈ ಸಂದರ್ಭ ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಶಾಲೆಗೆ ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಪುಷ್ಪವೃಷ್ಠಿಯಿಂದ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಬಳಿಕ ಶಾಲೆಯ ಸಭಾಂಗಣದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆಯಲ್ಲಿ ಪೋಷಕರ ಸಭೆ ನಡೆಯಿತು. ಮಂಗಳೂರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಸಭೆಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಗೈರುಹಾಜರಾಗದಂತೆ ಪೋಷಕರು ನೋಡಿಕೊಂಡು ವಿದ್ಯಾರ್ಥಿಗಳ ಸ್ವಚ್ಛತೆಗೆ ಗಮನಹರಿಸಿ, ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿರಿಸಿ, ಟಿವಿಗಳು ಕೇವಲ ನ್ಯೂಸ್ ನೋಡುವುದಕ್ಕೆ ಮಾತ್ರವೇ ಸೀಮಿತವಿರಲಿ ಎಂದರು.


ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಪಿ. ರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಗನ್ನಾಥ ದೇವಾಡಿಗ ಅವರು ಸನ್ಮಾನಪತ್ರ ವಾಚಿಸಿದರು.
ಸರಕಾರದಿಂದ ಒದಗಿಸಲಾದ ಉಚಿತ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎಸ್‌ಡಿಎಂಸಿ ಅಧಿಕಾರ ಹಸ್ತಾಂತರ ನಡೆಯಿತು. ಇಬ್ಬರು ನೂತನ ಸದಸ್ಯರನ್ನು ಎಸ್‌ಡಿಎಂಗೆ ಆಯ್ಕೆ ಮಾಡಲಾಯಿತು.
ವೇಣೂರು ಗ್ರಾ.ಪಂ. ಸದಸ್ಯರಾದ ಅರುಣ್ ಕ್ರಾಸ್ತ, ಸುನಿಲ್ , ಶಿವಾನಂದ ಗೌಡ, ಎಸ್‌ಡಿಎಂಸಿ ಉಪಾಧ್ಯಕ್ಷ ಲೋಕೇಶ್ ಕೋರ್ಲೋಡಿ, ಎಸ್‌ಡಿಎಂಸಿ ಸದಸ್ಯರು, ತಾಯಂದಿರ ಸಮಿತಿ ಸದಸ್ಯರು, ಪೋಷಕರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


ಪ್ರಭಾರ ಮುಖ್ಯಶಿಕ್ಷಕರಾದ ರಶ್ಮಿ ಶೆಟ್ಟಿ ಸ್ವಾಗತಿಸಿ, ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ಕಾಳಜಿ ಬಗ್ಗೆ ಹಾಗೂ ಶಾಲೆಯ ಕೆಲವು ನಿಯಮಗಳ ಬಗ್ಗೆ ತಿಳಿಸಿದರು. ಶಿಕ್ಷಕಿಯರಾದ ನಾಗವೇಣಿ ಮತ್ತು ಹರ್ಷಲಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಬಾಲಕ್ಕ ವಂದಿಸಿದರು. ವಿದ್ಯಾರ್ಥಿಗಳಾದ ಸ್ಪಂದನಾ ಬಳಗ ಪ್ರಾರ್ಥಿಸಿದರು.

Related posts

ಬೆಳೆ ವಿಮೆ ಬಗ್ಗೆ ರೈತರ ಪರವಾಗಿ ಗಮನಹರಿಸಬೇಕಿದೆ: ಮೋಹನ್ ಗೌಡ ಕಲ್ಮಂಜ

Suddi Udaya

ಕರಾಯ ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ವಿ.ಹಿಂ.ಪ. ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಘಟಕದ ವತಿಯಿಂದ ಯೋಗ ದಿನಾಚರಣೆ

Suddi Udaya

ಧರ್ಮಸ್ಥಳದಲ್ಲಿ ಯಕ್ಷಕಲಾವಿದ ವಸಂತ ಗೌಡ ಕಾಯರ್ತಡ್ಕ ಕಲಾಯಾನ ಸ್ವರ್ಣ ಸಂಭ್ರಮ

Suddi Udaya

ಮದ್ದಡ್ಕ ವಿ.ಹಿಂ.ಪ. ಭಜರಂಗದಳ ವತಿಯಿಂದ ನಂದಗೋಕುಲ ಗೋಶಾಲೆಗೆ ಹಸಿಹುಲ್ಲು ವಿತರಣೆ

Suddi Udaya

ಮಾಚಾರು: ಕೊಲೆಯತ್ನ ಪ್ರಕರಣ ಆರೋಪಿಗಳಿಗೆ ಹೈಕೋರ್ಟ್ ಜಾಮೀನು

Suddi Udaya

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya
error: Content is protected !!