September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಪ್ರಾ.ಕೃ.ಪ. ಸಹಕಾರಿ ಸಂಘ ವತಿಯಿಂದ ಸಂಘದ ರೈತ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತು ವಿತರಣೆ

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವತಿಯಿಂದ ಸಂಘದ ಸದಸ್ಯ ರೈತರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತು (Copper Sulphate) ವಿತರಣಾ ಕಾರ್ಯಕ್ರಮವನ್ನು ಇಂದು (ಜೂನ್ 2) ಫ್ಯಾಕ್ಸ್ ರೆಷನ್ ಮಾರಾಟ ವಿಭಾಗದ ಹಳೆಯ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸದಸ್ಯ ರೈತರಿಗೆ ಮೈಲುತುತ್ತು ವಿತರಿಸಿದರು. ಸಂಘದಲ್ಲಿ ಬೆಳೆಸಾಲ ಪಡೆದಿರುವ ಸದಸ್ಯ ರೈತರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ರೈತರ ಜಮೀನಿನ ಏಕರೆ ವಿಸ್ತೀರ್ಣದ ಆಧಾರದ ಮೇಲೆ ಮೈಲುತುತ್ತು ವಿತರಿಸಲಾಗುವುದು ಎಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ,ನಿರ್ದೇಶಕರಾದ ಶ್ರೀನಾಥ್ ಬಡೆಕೈಲು, ಪದ್ಮನಾಭ ಕಾಯಿಲ, ಪ್ರಮುಖರಾದ ಯೋಗೀಶ್ ಆಳಂಬಿಲ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕಾಯಿಲ, ಸಿಬ್ಬಂದಿಗಳಾದ ಸುಂದರ್ ಕೆಂಗುಡೇಲು, ಬಾಲಕೃಷ್ಣ ಉಪಸ್ಥಿತರಿದ್ದರು.

Related posts

ಬಸ್ತಿ ಪೆರಿಯಡ್ಕ ರಸ್ತೆಯಲ್ಲಿ ಹರಿದ ನೀರು

Suddi Udaya

ಭೀಕರ ಗಾಳಿ ಮಳೆ: ಕುವೆಟ್ಟು ವರಕಬೆ ಬಳಿ ರಸ್ತೆಗೆ ಬಿದ್ದ ಮರ: ಸಂಚಾರಕ್ಕೆ ಅಡಚಣೆ

Suddi Udaya

ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತೋಟತ್ತಾಡಿ: ಹಾಡು ಹಗಲೇ ಮನೆಯ ಬಾಗಿಲ ಬೀಗವನ್ನು ಮುರಿದು ಗಾದ್ರೇಜ್‌ನ ಲಾಕರ್ ನಲ್ಲಿಟ್ಟಿದ್ದ ರೂ. 1.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ನಾರಾವಿ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya
error: Content is protected !!