24.5 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುಕ್ಕೇಡಿ- ನಿಟ್ಟಡೆ ಕೋಟಿ ಚೆನ್ನಯ ಸೇವಾ ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣೆ

ಕುಕ್ಕೇಡಿ : ಕುಕ್ಕೇಡಿ- ನಿಟ್ಟಡೆ ಕೋಟಿ ಚೆನ್ನಯ ಸೇವಾ ಸಂಘದಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು.

ಮುಖ್ಯ ಅತಿಥಿಯಾಗಿ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಲೆಕ್ಕಿಗ ಭರತ್ ರಾಜ್ ಅಮೈ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿ ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಿ ತಾವು ಸಮಾಜದಿಂದ ಏನನ್ನು ಪಡೆದಿದ್ದೆವು ಮುಂದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ಪಂದಿಸುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಈ ಒಂದು ಸಂಘಟನೆಯು ಅನೇಕ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮುಖಾಂತರ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಮಾತನಾಡಿ ಸಂಘದಲ್ಲಿ ಪ್ರಾರಂಭದ ಹಂತದಿಂದ ಹಿಡಿದು ಈವರೆಗೂ ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡು ಬಂದಿರುವ ಈ ಸಂಘಟನೆ ಸಮಾಜಕ್ಕೆ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶುಭ ಹಾರೈಸಿದರು.

ಕುಕ್ಕೇಡಿ ನಿಟ್ಟಡೆ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಅನಿತಾ ಕೆ ಪಾಣೂರ್ ಮಾತನಾಡಿ ಸಂಘಟನೆ ಮಾಡುವ ಕೆಲಸಕ್ಕೆ ಸದಾ ಸಹಕಾರ ಇದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನವೀನ್ ಜಿ ಬುಲೆಕ್ಕರ ಮಾತನಾಡಿ, ಸಂಘದ ಈವರೆಗೆ ನಡೆದ ಸೇವಾ ಚಟುವಟಿಕೆಗಳು ಎಲ್ಲರ ಸಹಕಾರದಿಂದಾಗಿ ನಡೆದಿದೆ ವಿಶೇಷವಾಗಿ ಈ ಒಂದು ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಈ ವರ್ಷವು ಸಂಪೂರ್ಣವಾಗಿ ಸಹಕಾರ ನೀಡುವ ಯಶಲತಾ ಮತ್ತು ಅಮ್ಮಾಜಿ ಪೂಜಾರಿ ಇವರ ಕುಟುಂಬಕ್ಕೆ ಅಭಿನಂದಿಸಿ, ಮುಂದೆಯೂ ನಮ್ಮಿಂದ ಇನ್ನಷ್ಟು ಕೆಲಸ ಕಾರ್ಯಗಳು ನಡೆಯಬೇಕು, ಇದಕ್ಕೆಲ್ಲ ಸಂಘದ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಬೇಕೆಂದು ಕೇಳಿ ಕೊಂಡರು.

ಅಮೂಲ್ಯ,ಅನನ್ಯ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ರತ್ನಾಕರ ಪೂಜಾರಿ ಅಂಕರ್ಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷ ಸತೀಶ್ ಕೆ ಪಡ್ಯೋಡಿ ಬೈಲು, ಶ್ರೀಮತಿ ಯಶಲತಾ ಆಮ್ಮಾಜಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುಶಾಂತ್, ಪದ್ಮನಾಭ ಬಿಯದಡಿ, ನಿತಿನ್ ಪಾರೋಟ್ಟು ಹಾಗೂ ಪದಾಧಿಕಾರಿಗಳು ಸಹಕರಿಸಿದರು. ಸಂಘದ ಮಾಜಿ ಕಾರ್ಯದರ್ಶಿ ರವಿ ಉಲ್ತೂರ್ ಕಾರ್ಯಕ್ರಮ ನಿರೂಪಿಸಿ ಸಂಘದ ಗೌರವ ಅಧ್ಯಕ್ಷ ಅಮ್ಮಾಜಿ ಪೂಜಾರಿ ಧನ್ಯವಾದವಿತ್ತರು.

Related posts

ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಯಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ಉಜಿರೆ: ಎಸ್.ಡಿ.ಎಂ ಜೂನಿಯರ್ ಇಂಡಿಯನ್ ರೆಡ್ ಕ್ರಾಸ್ ಹಾಗೂ ಯುತ್ ರೆಡ್ ಕ್ರಾಸ್ ನಿಂದ ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಾಗಾರ

Suddi Udaya

ಕಲ್ಮಂಜ: ಅಪಘಾತದಲ್ಲಿ ಗಾಯವಾದ ಉಲ್ಲಾಸ್ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಇಂದಬೆಟ್ಟು ಗ್ರಾ.ಪಂ ವಿವಿಧ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ದೂರು: ಎರಡು ದಿನಗಳಲ್ಲಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಕಡತ ಪರಿಶೀಲನೆ-ಸ್ಥಳ ತನಿಖೆ

Suddi Udaya
error: Content is protected !!