23.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಮಧ್ಯಂತರ ಸಮ್ಮೇಳನದಲ್ಲಿ ಉಜಿರೆ ಜೆಸಿಐ ಸಿಟಿಗೆ ಹೊಸ ಘಟಕ ಔಟ್ ಸ್ಟ್ಯಾಂಡಿಂಗ್ ವಿನ್ನರ್ ಅವಾರ್ಡ್ ನೊಂದಿಗೆ ಹಲವು ಮನ್ನಣೆಗಳು

ಬೆಳ್ತಂಗಡಿ: ಜೆಸಿಐ ಕಾಪು ಆತಿಥ್ಯದಲ್ಲಿ ನಡೆದ ಜೆಸಿಐ ವಲಯ ಮಧ್ಯಂತರ ಸಮ್ಮೇಳನದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಜೆಸಿಐ ಉಜಿರೆ ಸಿಟಿ ಘಟಕವು ನಡೆಸಿದ ವಿವಿಧ ಕಾರ್ಯಕ್ರಮಗಳಾದ ವಲಯ ಉಪಾಧ್ಯಕ್ಷರ ಭೇಟಿ, ರಕ್ತದಾನ ಶಿಬಿರ ಕಾರ್ಮಿಕರ ದಿನಾಚರಣೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೌರವ, ವಿಶ್ವ ಮಹಿಳಾ ದಿನಾಚರಣೆ, ಆಶ್ರಮ ಭೇಟಿ ನೀಡಿ ಅಗತ್ಯ ವಸ್ತುಗಳ ವಿತರಣೆ, ಜೆಸಿಐ ಫೌಂಡೇಶನ್ ಕೊಡುಗೆ, ಆರೋಗ್ಯ ಮಾಹಿತಿ ಕಾರ್ಯಕ್ರಮ, ವ್ಯವಹಾರ ಕೌಶಲ್ಯ ತರಬೇತಿ ಕಾರ್ಯಕ್ರಮ, ಪ್ರಯಾಸ್ ಡೇ ಪ್ರಯುಕ್ತ ಜಾಗೃತಿ ಕಾರ್ಯಕ್ರಮ, ಬೇಸಿಗೆ ಶಿಬಿರದ ಪ್ರಾಯೋಜಕತ್ವ, ಹೊಲಿಗೆ ತರಬೇತಿ ಕಾರ್ಯಕ್ರಮ, ಯುವ ಸಬಲೀಕರಣ ತರಬೇತಿ ಕಾರ್ಯಕ್ರಮ ,ಕೌಶಲ್ಯಾಭಿವೃದ್ಧಿ ತರಬೇತಿಗಳು ಮೊದಲಾದ ಕಾರ್ಯಕ್ರಮಗಳ ಮೂಲಕ ವಲಯದ ಮೆಚ್ಚುಗೆಯನ್ನು ಪಡೆದು ಹೊಸ ಘಟಕದ ಔಟ್ ಸ್ಟ್ಯಾಂಡಿಂಗ್ ವಿನ್ನರ್ ಅವಾರ್ಡ್ ನೊಂದಿಗೆ ಗೋಲ್ಡನ್ ಪ್ರೆಸಿಡೆಂಟ್ ಅವಾರ್ಡ್, ಕಾಬೀಲ್,ಡಾನ್, ಬ್ಲಡ್ ಡೋನಟ್ ಕಾರ್ಯಕ್ರಮಗಳ ಮನ್ನಣೆ ,ಜೆಫ್ ಮ್ ಗೌರವ, ಲೇಬರ್ ಡೇ ಗೌರವ ಗಳನ್ನು ವಲಯಾಧ್ಯಕ್ಷರಾದ ಜೆಎಫ್ ಎಸ್ ಸಂತೋಷ್ ಶೆಟ್ಟಿ ಘಟಕಾಧ್ಯಕ್ಷ ಜೆಸಿ ಮೊಹಮ್ಮದ್ ಮಿರ್ಷಾದ್ ಇವರಿಗೆ ನೀಡಿ ಗೌರವಿಸಿರುತ್ತಾರೆ .

ಈ ಸಂದರ್ಭದಲ್ಲಿ ಘಟಕಕ್ಕೆ ಪ್ರೋತ್ಸಾಹ ನೀಡುತ್ತಿರುವ ವಲಯ ಉಪಾಧ್ಯಕ್ಷ ಅರುಣ್ ಮಾಂಜ ಉಪಸ್ಥಿತರಿರುತ್ತಾರೆ.
ಘಟಕಕ್ಕೆ ಸದಾ ಮಾರ್ಗದರ್ಶನ ನೀಡುತ್ತಿರುವ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ರಂಜಿತ್ ಎಚ್‌.ಡಿ, ನಿಕಟಪೂರ್ವಧ್ಯಕ್ಷರು, ವಲಯದ ತರಬೇತಿ ವಿಭಾಗದ ಸಂಯೋಜಕರಾದ ಆಶಾಲತಾ ಪ್ರಶಾಂತ್, ವಲಯ ತರಬೇತುದಾರರಾದ ಹೇಮಾವತಿ ಕೆ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್, ಸದಸ್ಯ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Related posts

ಸುದೇಮುಗೇರು ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕನ್ನಡ ಪ್ರಬಂಧ ಸ್ಪರ್ಧೆ: ಶ್ರೀ ಧ.ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿನಿ ಕು| ಗಗನ್ಯ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮೈರೋಳಡ್ಕ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಮಾ.31-ಎ.4: ಸುಲ್ಕೇರಿ ನಾವರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Suddi Udaya

ಅಂಡಿಂಜೆ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮಸಭೆ

Suddi Udaya

ಜಿಲ್ಲಾಧಿಕಾರಿ ಸಭೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಲೆಕುಡಿಯ ಸಮುದಾಯದ ಮುಖಂಡರ ಒತ್ತಾಯ

Suddi Udaya
error: Content is protected !!