23.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೋಣಂದೂರು ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಆಶಕ್ತ ಬಡ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಸೋಣoದೂರು: ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಸೋಣಂದೂರು ಪಣಕಜೆ ಇದರ 6ನೇ ವರ್ಷದ ಸೇವಾ ಯೋಜನೆಯಾಗಿ ಆಶಕ್ತ 8 ಬಡ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸೋಣಂದೂರು ಶಾಲಾ ಮುಖ್ಯ ಶಿಕ್ಷಕಿ ಅನಿತಾ ರೇಷ್ಮಾ ಡಿ ಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರೊ| ಡಾ ನಿಯಾಜ್. ಉದ್ಯಮಿಗಳಾದ ಜಗದೀಶ್ ಆಚಾರ್ಯ ಕಲ್ಲಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಶನ್ ಲೋಬೊ, ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಇದರ ಅಧ್ಯಕ್ಷ ಮೋಹನ್ ನಾಯ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ, ಉದ್ಯಮಿ ಸಂಪತ್ ಶೆಟ್ಟಿ ಕೃಷ್ಣ ನಗರ ಇವರು ಸೋಣಂದೂರು ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸಿದರು. ಈ ಸಂದರ್ಭದಲ್ಲಿ ಮಹಮ್ಮಾಯಿ ಕಟ್ಟೆಯ ಪದಾಧಿಕಾರಿಗಳು ಸರ್ವ ಸದಸ್ಯರು ಶಾಲಾ ಹಿರಿಯ ವಿದ್ಯಾರ್ಥಿಗಳು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related posts

ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್. ಡಿ. ಪದವಿ

Suddi Udaya

ಬಿಜೆಪಿ ಎಸ್. ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೊಕ್ಕಡದ ವಿಠಲ ಕುರ್ಲೆರವರ ವಿವಾಹ ನಿಶ್ಚಿರ್ತಾಥದ ಆಮಂತ್ರಣ ಪತ್ರಿಕೆಯಲ್ಲಿ ಮತ್ತೊಮ್ಮೆ ಮೋದಿಜಿ -2024 ಹಾಗೂ ಮೋದಿಯವರ ಸಾಧನೆಯ ಪಟ್ಟಿ

Suddi Udaya

ಮೂಡುಕೋಡಿ ಕಳಸೊಟ್ಟು ಮನೆಯ ಚೆಲುವಮ್ಮ ನಿಧನ

Suddi Udaya

ಧರ್ಮಸ್ಥಳ, ವೇಣೂರು, ಬೆಳ್ತಂಗಡಿ ನಕ್ಸಲ್ ಪ್ರಕರಣ: ನಕ್ಸಲ್ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಅಳದಂಗಡಿ ಸೊಸೈಟಿಯಿಂದ ಕಾಳುಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ: ಸುವರ್ಣ ಸಂಭ್ರಮ-2026 ಚಾಲನೆ,ಕೃಷಿ ತರಬೇತುದಾರರಿಗೆ ಸನ್ಮಾನ,ಸಾಧಕ ಕೃಷಿಕರಿಗೆ ಗೌರವಾರ್ಪಣೆ: ದ.ಕ. ಜಿಲ್ಲೆಯ ಕೃಷಿಕರು ಚಂಚಲ ಮನಸ್ಥಿತಿಯವರು: ಶಾಸಕ ಹರೀಶ್ ಪೂಂಜ

Suddi Udaya
error: Content is protected !!