September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ ಗ್ರಾಮ ಪಂಚಾಯತ್‌ ಗ್ರಾಮ ಸಭೆ

ಶಿಶಿಲ ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ದ್ವಿತಿಯ ಸುತ್ತಿನ ಗ್ರಾಮ ಸಭೆಯು ಆಡಳಿತಾಧಿಕಾರಿ ಭರತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜೂ.04 ರಂದು ಶಿಶಿಲ ಗ್ರಾಮ ಪಂಚಾಯತ್ ಕಚೇರಿ ಸಭಾಭವನದಲ್ಲಿ ನಡೆಯಿತು.

ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಭಾಗವಹಿಸಿದರು.

ಈ ವೇಳೆ ಶಿಶಿಲದಲ್ಲಿ ಅಕ್ರಮ -ಸಕ್ರಮ ಅರ್ಜಿ ಇದುವರೆಗೆ ಒಂದೂ ವಿಲೇವಾರಿ ಆಗದಿರುವ ಬಗ್ಗೆ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕರುಣಾಕರ ಅಡ್ಡಹಳ್ಳ, ಸಂದೀಪ್ ಅಮ್ಮುಡಂಗೆ ಹಾಗೂ ಇತರ ಅಕ್ರಮ -ಸಕ್ರಮ ಅರ್ಜಿದಾರರು ಕಂದಾಯ ಅಧಿಕಾರಿಯವರಿಗೆ ಮನವಿ ನೀಡಿ 3 ತಿಂಗಳೊಳಗೆ ಅಕ್ರಮ -ಸಕ್ರಮ ಅರ್ಜಿ ಸಿಟ್ಟಿಂಗ್ ಗೆ ಬರಬೇಕು, ಇಲ್ಲವಾದಲ್ಲಿ ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದರು.

ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿಶಿಲ ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಿಬ್ಬಂದಿ ಸುಂದರ ವರದಿ ವಾಚಿಸಿ, ಜಮಾ -ಖರ್ಚು ಬಗ್ಗೆ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Suddi Udaya

ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆಯವರಿಂದ ಹತ್ಯಡ್ಕದಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿ ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಪಿಡಬ್ಲೂಡಿ ಎಇಇ ಆಗಿ ಸಂಜೀವ ಕುಮಾರ್ ಜಿ .ಕೆ.

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!