September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತೀಯ ಭೂ ಸೇನೆ ಅಗ್ನಿವೀರ್‌ಗೆ ನಡ ಗ್ರಾಮದ ರಂಜಿತ್ ಆಯ್ಕೆ

ಬೆಳ್ತಂಗಡಿ: ಭಾರತ ಸರಕಾರದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಭಾರತೀಯ ಭೂ ಸೇನೆ ಅಗ್ನಿವೀರ್‌ಗೆ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶವಾದ ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ರಂಜಿತ್ ಅವರು ಆಯ್ಕೆಯಾಗಿದ್ದಾರೆ.

ರಂಜಿತ್ ಅವರು ಲಾಯಿಲ ಸೈಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಉಪ್ಪಿನಂಗಡಿ ಶ್ರೀರಾಮ ಪ್ರೌಢ ಶಾಲೆ ರಾಮನಗರದಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಬಳಿಕ ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಸೇನೆಗೆ ಸೇರುವ ಆಸಕ್ತಿ ಹೊಂದಿದ್ದ ರಂಜಿತ್ ಈಗ ಅಗ್ನಿವೀರ್‌ಗೆ ಆಯ್ಕೆಯಾಗಿದ್ದಾರೆ. ಇವರು ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ಶ್ಯಾಮಸುಂದರ್ ಹಾಗೂ ಶ್ರೀಮತಿ ಪುಷ್ಪಾವತಿ ಅವರ ಪುತ್ರ.

Related posts

ಕಳೆಂಜದಲ್ಲಿ ಗ್ರಾಮ ಸ್ವಚ್ಛತಾ ಅಭಿಯಾನ: ಕಳೆಂಜ ಕ್ರಿಶ್ಚಿಯನ್ ಬ್ರದರ್ಸ ನ ಸದಸ್ಯರು ಭಾಗಿ

Suddi Udaya

ಮುಂಡಾಜೆ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವ: ಪದಗ್ರಹಣ ಸಮಾರಂಭ

Suddi Udaya

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಬ್ಧಿ ಸಾಂಸ್ಕೃತಿಕ ಹಬ್ಬ

Suddi Udaya

ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ

Suddi Udaya

ಕೊಕ್ಕಡ: ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪದವಿ ಪ್ರಧಾನ ಸಮಾರಂಭ

Suddi Udaya
error: Content is protected !!