24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

ಉಜಿರೆ: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆ ಉಜಿರೆಯ ಫೌಂಡೇಶನ್ ಸ್ಟೇಜ್ (ಪ್ರಿ ಕೆಜಿಯಿಂದ 2ನೇ ತರಗತಿ) ಮಕ್ಕಳ ಪೋಷಕರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಜೂನ್ 4 ರಂದು ಎಸ್.ಡಿ.ಎಮ್ ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರು ಹಾಗೂ ಆಳ್ವಾಸ್ ಸೆಂಟರ್ ಫಾರ್ ವೆಲ್‌ನೆಸ್ ಆ್ಯಂಡ್ ಟ್ರೈನಿಂಗ್ ನ ನಿರ್ದೇಶಕರಾದ ಡಾ.ದೀಪಾ ಕೊಟಾರಿ ಇವರು ಪೋಷಕರಿಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು. ‘ಸೋಶಿಯಲ್, ಇಮೋಶನಲ್ ಆ್ಯಂಡ್ ಅಕಾಡೆಮಿಕ್ ಗ್ರೋತ್’ ಎಂಬ ವಿಷಯದ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ಮಕ್ಕಳ ಸಾಮಾಜಿಕ, ಭಾವನಾತ್ಮಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಮಹತ್ವವನ್ನು ವಿವರಿಸಿದರು. ಮಕ್ಕಳಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಉತ್ತಮ ಸಂವಹನ ಕೌಶಲ್ಯ ಮತ್ತು ಕಲಿಕೆಯ ಆಸಕ್ತಿಯನ್ನು ಬೆಳೆಸುವ ಕುರಿತು ಪರಿಣಾಮಕಾರಿ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಮನಮೋಹನ್ ನಾಯಕ್ ಕೆ.ಜಿ ಅವರು ವಹಿಸಿ, ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಶಾಲೆ ಹಾಗೂ ಪೋಷಕರ ನಡುವಿನ ಉತ್ತಮ ಸಹಕಾರದ ಅಗತ್ಯವನ್ನು ತಿಳಿಸಿದರು.

ಮಕ್ಕಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಅನೇಕ ಉಪಯುಕ್ತ ಮಾಹಿತಿಗಳನ್ನು ಪೋಷಕರು ಪಡೆದುಕೊಂಡರು.

ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟ್ಟಿ ಅವರು ನಿರೂಪಿಸಿದರು.

Related posts

ಉಜಿರೆ ರತ್ನಮಾನಸದಲ್ಲಿ ಆಟಿದ ಅಟಿಲ್ ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಎಲ್ ಐ ಸಿ ನಿವೃತ್ತ ಎಂ.ಡಿ. ಸುಶೀಲ್ ಕುಮಾರ್ ಭೇಟಿ

Suddi Udaya

ಕೊಕ್ರಾಡಿ : ಗೋಳಿಯಂಗಡಿಯಲ್ಲಿ ಸ್ಕಿಡ್‌ ಆಗಿ ಬಿದ್ದ ಬೈಕ್ : ಸವಾರರಿಗೆ ಗಾಯ

Suddi Udaya

ಮುಂಡಾಜೆ ಯುವ ವಾಹಿನಿ ಸಂಚಲನಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 69 ಫಲಿತಾಂಶ

Suddi Udaya

ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಪಡೆದು ಇಂದಬೆಟ್ಟು ನಿವಾಸಿಗೆ ರೂ.35 ಸಾವಿರ ವಂಚನೆ

Suddi Udaya
error: Content is protected !!