September 5, 2026
ಕೃಷಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಾರಾವಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪರಿಸರ ದಿನಾಚರಣೆ

ನಾರಾವಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾರಾವಿ ಇಲ್ಲಿ ಜೂನ್ 5ರಂದು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯ ಕುಮಾರ್ ಹೆಗಡೆ ನಾಮನಿರ್ದೇಶದ ಸದಸ್ಯರು ನಾರಾವಿ ಶಾಲೆ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಭಿಜಿತ್ ಜೈನ್ ಜನ ಸೇವಾ ಟ್ರಸ್ಟ್ ಇವರು ಇಂದಿನ ಕಾಲದಲ್ಲಿ ಪರಿಸರವನ್ನು ಉಳಿಸುವ ಅಗತ್ಯತೆಯ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು. ಸುಧಾಕರ್ ಭಂಡಾರಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಭಾಗವಹಿಸಿ ಪರಿಸರ ದಿನಾಚರಣೆಗೆ ಶುಭ ಕೋರಿದರು. ಪಿಡಿಓ ಸುಧಾಕರ್ ಸಸ್ಯ ಸಂಕುಲ, ಪ್ರಾಣಿ ಸಂಕುಲವನ್ನು ಉಳಿಸುವಲ್ಲಿ ಪರಿಸರದ ಮಹತ್ವವನ್ನು ವಿವರಿಸಿದರು. ಅರಣ್ಯ ಇಲಾಖೆಯ ಅರಣ್ಯ ಪಾಲಕರು ಮಹಾಂತೇಶ್ ಸಸ್ಯಗಳನ್ನು ನೆಡುವುದು ಅಲ್ಲದೆ ಅದನ್ನು ಪೋಷಿಸುವ ಜವಾಬ್ದಾರಿ ಕೂಡ ಅಷ್ಟೇ ಮುಖ್ಯ ಪರಿಸರ ಉಳಿಸಿದರೆ ನಾಡು ಉಳಿಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.

ಮಂಜುನಾಥ್ ಅರಣ್ಯ ಪಾಲಕರು ಪರಿಸರ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರೊನಾಲ್ಟ್ ವಾಚರ್ ಪರಿಸರದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಪರಿಸರವನ್ನು ರಕ್ಷಿಸುವಲ್ಲಿ ಲೋಕೇಶ್ ಸಾವಯವ ಗೊಬ್ಬರದ ಮಾಹಿತಿಯನ್ನು ನೀಡಿದರು. ಅಲ್ಲದೆ ಗೊಬ್ಬರವನ್ನು ಉಚಿತವಾಗಿ ನೀಡಿ ನೆಟ್ಟಂತಹ ಸಸಿಗಳಿಗೆ ಇಂದು ಹಾಕಲಾಯಿತು. ಸುಶೀಲ ಹೆಗ್ಡೆ ಮುಖ್ಯೋಪಾಧ್ಯಾಯರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾರಾವಿ ಇವರು ಸ್ವಾಗತಿಸಿದರು. ಶಾರದಾ ಶಿಕ್ಷಕರು ಬಂದಂತಹ ಅತಿಥಿಗಳಿಗೆ ಧನ್ಯವಾದ ನೀಡಿದರು. ಜ್ಞಾನೇಶ್ವರಿ ಕಾರ್ಯಕ್ರಮ ನಿರೂಪಣೆಗೈದರು.

Related posts

ಕುಕ್ಕೇಡಿ-ನಿಟ್ಟಡೆ ಕೋಟಿ ಚೆನ್ನಯ ಸೇವಾ ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ರಕ್ಮಿತಾ ಎಂ. ತಾಲೂಕಿಗೆ ತೃತೀಯ ಸ್ಥಾನ

Suddi Udaya

ಸಿ.ಎ ಪರೀಕ್ಷೆಯಲ್ಲಿ ನಾರಾವಿಯ ಕು.ಸಂಗೀತಾ ಜಿ. ಹೆಗ್ಡೆ ತೇರ್ಗಡೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಕುಮಾರ್ ಹೆಗ್ಡೆ

Suddi Udaya

1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದಿಂದ ಸಾವಿರಾರು ಜನರ ಸಮ್ಮುಖದಲ್ಲಿ, ವಿಜೃಂಭಣೆಯ “ಗುರು ವಂದನೆ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ : ನಡ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ

Suddi Udaya
error: Content is protected !!