September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಪರಿಸರ ದಿನಾಚರಣೆಯನ್ನು ವಿಜ್ಞಾನ ಹಾಗೂ ಗಣಿತ ಸಂಘಗಳಿಂದ ನೆರವೇರಿಸಲಾಯಿತು.

ಮುಖ್ಯ ಅತಿಥಿಯಾಗಿ ಅರಣ್ಯ ಇಲಾಖೆಯಿಂದ ಉಪವಲಯ ಅರಣ್ಯ ಅಧಿಕಾರಿಯಾದ ರಾಘವೇಂದ್ರ ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಪ್ರತಿ ವಿದ್ಯಾರ್ಥಿಯು ಅಮ್ಮನ ಹೆಸರಿನಲ್ಲಿ ಒಂದು ಗಿಡವನ್ನು ನೆಡಬೇಕೆಂಬುದನ್ನು ತಿಳಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಜಸಿಂತ ಉಪಸ್ಥಿತರಿದ್ದರು.

ಶಿಕ್ಷಕ ಶಿಕ್ಷಕಿಯರಾದ ನಯನ, ಪ್ರಮೀಳಾ ಎನ್, ವಾಗ್ದೇವಿ, ಸದಾನಂದ, ಸಮತಾ ಇವರ ನೇತೃತ್ವದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಿರೂಪಣೆಯನ್ನು ಆದ್ಯ ಜೈನ್ , ಸ್ವಾಗತವನ್ನು ಶ್ರೀವಿನಿತ್, ಧನ್ಯವಾದವನ್ನು ತ್ರಿಶಾಲಿ ನೆರವೇರಿಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

Related posts

ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಗೌರವಾರ್ಪಣೆ

Suddi Udaya

ಗುರಿಪಳ್ಳದಲ್ಲಿ ಜಾನುವರು ಕಟ್ಟಿದ್ದ ಹಗ್ಗ ಸಿಲುಕಿ ರಿಕ್ಷಾ ಪಲ್ಟಿ : ಚಾಲಕ ರಾಮಣ್ಣ ಗೌಡ ಹಾಗೂ ಪ್ರಯಾಣಿಕರಿಗೆ ಗಾಯ

Suddi Udaya

ಫೆ.1: ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡರಿಗೆ ಹುಟ್ಟೂರಿನಲ್ಲಿ ಸ್ವಾಗತ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪ್ರೆಸೆಂಟೇಶನ್ ಸ್ಕಿಲ್ಸ್ ಕಾರ್ಯಕ್ರಮ

Suddi Udaya

ನೆರಿಯ: ಮುಚ್ಚಿರಾಲಿ ಎಂಬಲ್ಲಿ ಅಪಾಯದ ಅಂಚಿನಲ್ಲಿರುವ ಕಾಲುಸಂಕ : ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಫಾರೆಸ್ಟರ್ ಹಾಗೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ : ಮರವನ್ನು ತೆರವುಗೊಳಿಸುವುದಾಗಿ ಭರವಸೆ

Suddi Udaya

ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮತ್ತು ಸುರಕ್ಷತೆಯ ತಂತ್ರಜ್ಞಾನವನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ISO 27001 ಪ್ರಶಸ್ತಿ ಪ್ರದಾನ

Suddi Udaya
error: Content is protected !!