September 6, 2026
ಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

ಮೂಡುಬಿದಿರೆ: ಜೂನ್ 6 ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ) ಫಲಿತಾಂಶದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ದಾಖಲಿಸಿದ್ದು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಬಿಎಸ್ಸಿ ಕೃಷಿ, ನರ್ಸಿಂಗ್ ಪ್ರವೇಶಕ್ಕೆ ನೂರರ ಒಳಗಿನ ರಾಂಕ್ ಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಕಾಲೇಜಿನ ತನ್ಮಯಿ ಕೋಟಿ (18 ನೇ), ತನುಶ್ರೀ ಎಚ್ ಆರ್ ( 23 ನೇ), ಧ್ರುವಂತ್ ಕೆ (41ನೇ), ನಿಖಿಲ್ ಎಸ್ ಎಸ್ ( 41 ನೇ), ನಿಶ್ಚಲ್ ( 58 ನೇ ) ರ್ಯಾಂಕ್ ಪಡೆದು ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪುಷ್ಪರಾಜ್, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕ ಡಾ. ಪ್ರಶಾಂತ್ ಹೆಗಡೆ, ಸಿಇಟಿ ಸಮನ್ವಯಕಾರ ರಂಜಿತ್ ಜೈನ್, ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ. ನಿರಂತರ ಶೈಕ್ಷಣಿಕ ಮಾರ್ಗದರ್ಶನ, ಪರೀಕ್ಷಾ ಪೂರ್ವ ತರಬೇತಿ, ವಿಶೇಷ ಅಭ್ಯಾಸ ತರಗತಿಗಳು, ಈ ಯಶಸ್ಸಿಗೆ ಕಾರಣವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

Related posts

ನಿಡ್ಲೆ : ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Suddi Udaya

ಭಾರೀ ಮಳೆಗೆ ಉಜಿರೆ ಶಿವಾಜಿನಗರದಲ್ಲಿ ಗುಡ್ಡ ಕುಸಿತ: ಮನೆಯವರು ಅಪಾಯದಿಂದ ಪಾರು

Suddi Udaya

ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್ ನಿಧನ

Suddi Udaya

ರಾಷ್ಟ್ರಮಟ್ಟದ ವಾಲಿಬಾಲ್: ಮುಂಡಾಜೆ ಕಾಲೇಜಿನ ಇಂದುಮತಿ ತಳವಾರ್ ಹಾಗೂ ಅಂಜಲಿಗೆ ಚಿನ್ನದ ಪದಕ

Suddi Udaya

ಪೆರ್ಮಾಣುವಿನ ಭ। ಶ್ರೀ 1008 ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕೆ ಕಾರ್ಕಳದ ಶ್ರೀಗಳ ಆರ್ಶೀವಾದ ಹಾಗೂ ಮಾರ್ಗದರ್ಶನ

Suddi Udaya
error: Content is protected !!