September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ನೂತನ ಕಟ್ಟಡ “ಉತ್ಥಾನ” ಲೋಕಾರ್ಪಣೆ

ಉಜಿರೆ: ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ಒದಗಿಸುವ ಮೂಲಕ ಕಳೆದ ಹಲವಾರು ವರ್ಷಗಳಿಂದ ಉಜಿರೆಯಲ್ಲಿ ಅತ್ಯುತ್ತಮ ಸೇವೆಯನ್ನು ನೀಡುತ್ತಾ ಬರುತ್ತಿರುವ ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ನೂತನ ಕಟ್ಟಡ “ಉತ್ಥಾನ” ಇದರ ಉದ್ಘಾಟನಾ ಸಮಾರಂಭವು ಜೂ. 6 ರಂದು ಬೆಳಿಗ್ಗೆ ನಡೆಯಿತು.

ಶಾಸಕ ಹರೀಶ್ ಪೂಂಜರವರು ಸಭಾಕಾರ್ಯಕ್ರಮದ ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಘಗಳು ಜಿಲ್ಲೆಯ ಕೃಷಿಕರಿಗೆ ಆರ್ಥಿಕ ಶಕ್ತಿ ನೀಡಿದೆ. ಉಜಿರೆ ರಾಜ್ಯದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮೀಣ ಭಾಗ. ಈ ನೂತನ ಕಟ್ಟಡದ ಉದ್ಘಾಟನೆಯಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದರು.

ಸಹಕಾರಿ ಯೂನಿಯನ್ ಮಂಗಳೂರು ಇದರ ದ.ಕ. ಜಿಲ್ಲಾ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ನೂತನ ಕಟ್ಟಡ ಉತ್ಥಾನ‌ ಇದರ ಉದ್ಘಾಟನೆಯನ್ನು ನೆರವೇರಿಸಿ ಶುಭಕೋರಿದರು.

ಸಭಾಂಗಣದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ರವರು ದೀಪ ಪ್ರಜ್ವಲನೆಗೊಳಿಸಿ ಶುಭ ಕೋರಿದರು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿದೇರ್ಶಕರಾದ ಕುಶಾಲಪ್ಪ ಗೌಡ ರವರು ಪಡಿತರ ವಿಭಾಗವನ್ನು ಉದ್ಘಾಟಿಸಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ ಮೀಟೀಂಗ್ ಹಾಲ್ ಉದ್ಘಾಟಿಸಿ ಶುಭ ಕೋರಿದರು.
ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು ರಘು ಎಸ್.ಎಸ್ ಇವರು ಲಿಪ್ಟ್ ಉದ್ಘಾಟಿಸಿದರು. ಬೆಳಾಲು ಸಿಎ ಬ್ಯಾಂಕ್ ಅಧ್ಯಕ್ಷ ಪದ್ಮ ಗೌಡ ಮೀಟಿಂಗ್ ಹಾಲ್ ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಪ್ರಾ.ಕೃ.ಸ,ಸೇ. ಸಂಘ ಉಜಿರೆ ಇದರ ಅಧ್ಯಕ್ಷರಾದ ಕೇರಿಮಾರ್ ಬಾಲಕೃಷ್ಣ ಗೌಡ ರವರು ವಹಿಸಿದ್ದರು.

ಉಜಿರೆ ಸಿಎ ಬ್ಯಾಂಕಿನ ಉಪಾಧ್ಯಕ್ಷರಾದ ಕೆ. ಶ್ರೀಧರ ಪೂಜಾರಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸರಸ್ವತಿ ರೈ,ನಿದೇರ್ಶಕರಾದ ಅರುಣ್ ಕುಮಾರ್, ಪುಷ್ಪಾವತಿ ಆರ್. ಶೆಟ್ಟಿ, ಗುರುರಾಜ್, ಅನಿಲ್ ಪ್ರಕಾಶ್ ಡಿ’ಸೋಜಾ, ಸಾಧು ಎಂ, ರಜತ್ ಗೌಡ, ವಾರಿಜ ಎಸ್. ಗೌಡ, ಅರವಿಂದ ಕಾರಂತ, ಅಣ್ಣು ನಾಯ್ಕ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು. ‌

ಬ್ಯಾಂಕಿನ ಸಿಬ್ಬಂದಿ ವರ್ಗದವರು ಮತ್ತು ಸರ್ವ ಸದಸ್ಯರು,ಗ್ರಾಹಕರು ಸಹಕರಿಸಿದರು. ಶ್ರೀದೇವಿ ಸಚಿನ್ ಪ್ರಾರ್ಥನೆಗೈದರು, ಬ್ಯಾಂಕಿನ ಸಿಬ್ಬಂದಿ ಮೋಹನ್ ಗೌಡ ಸ್ವಾಗತಿಸಿದರು. ವಿಜಯ್ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಜೋಡು ಜೀಟಿಗೆ ತುಳು ನಾಟಕ ಪ್ರದರ್ಶನ,
ಸಭಾ ಕಾರ್ಯಕ್ರಮ ಮತ್ತು ಮನರಂಜಿಸಲಿರುವ ಸಾಂಸ್ಕೃತಿಕ ವೈಭವ:
ಸಂಜೆಯ ಸಚಿವ ಯು.ಟಿ. ಖಾದರ್ ಫರೀದ್ ರವರು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು. ಸಭಾಧ್ಯಕ್ಷೆಯನ್ನು ಪ್ರಾ.ಕೃ.ಸ,ಸೇ. ಸಂಘ ಉಜಿರೆ ಇದರ ಅಧ್ಯಕ್ಷರಾದ ಕೇರಿಮಾರ್ ಬಾಲಕೃಷ್ಣ ಗೌಡ ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇದರ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆ ಹಾಗೂ ಉಜಿರೆ ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ರೆ|ಫಾ| ಅಬೆಲ್ ಲೋಬೋ ಭಾಗವಹಿಸಲಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ೫;೩೦ರಿಂದ ಉಜಿರೆಯ ಖ್ಯಾತ ನೃತ್ಯ ತಂಡ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಇವರಿಂದ ಗಾನ ನೃತ್ಯ ವೈಭವ ಹಾಗೂ ನಾಟಕ ರಂಗದಲ್ಲಿ ಸದ್ದನ್ನು ಮಾಡಿದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ, ಉರ್ವ ಚಿಲಿಂಬಿ, ಮಂಗಳೂರು ಇವರಿಂದ “ಜೋಡು ಜೀಟಿಗೆ” ತುಳು ಜನಪದ ನಾಟಕ ನಡೆಯಲಿರುವುದು.

Related posts

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳು: ಗಂಟೆಗಟ್ಟಲೇ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

Suddi Udaya

ಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ : ಶ್ರೀ ಗಣೇಶೋತ್ಸವಕ್ಕೆ ಆಮಂತ್ರಿಸಿದ ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್

Suddi Udaya

ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (ಕೆ.ಡಿ.ಸಿ) ನೂತನ ಆಡಳಿತ ಮಂಡಳಿ ರಚನೆ

Suddi Udaya

ಕುವೆಟ್ಟು ಸ. ಉ. ಪ್ರಾ. ಶಾಲೆಯ ಅಡುಗೆ ಕೋಣೆಯ ವಿಸ್ತೃತ ಕೊಠಡಿ ಉದ್ಘಾಟನೆ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್ ಕಾರ್ಯಕ್ರಮ

Suddi Udaya
error: Content is protected !!