25.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (ಕೆ.ಡಿ.ಸಿ) ನೂತನ ಆಡಳಿತ ಮಂಡಳಿ ರಚನೆ

ಬೆಳ್ತಂಗಡಿ; ಕಾಜೂರಿನ ಅಭಿವೃದ್ಧಿ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಮುದಾಯದ ಏಳಿಗೆಯ ಕನಸನ್ನು ಹೊತ್ತು ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಯುವ ಮಿತ್ರರ ತಂಡವಾದ ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (ಕೆ.ಡಿ.ಸಿ) ಇದರ ನೂತನ ಸಾಲಿನ ಆಡಳಿತ ಮಂಡಳಿ ರಚನೆಯು ಇತ್ತೀಚೆಗೆ ಜರುಗಿತು.

ಸ್ವಂತ ಕುಟುಂಬ, ಉದ್ಯೋಗ ಮತ್ತು ಪ್ರವಾಸಿ ಜೀವನದ ಜವಾಬ್ದಾರಿಗಳ ನಡುವೆ ಬಿಡುವಿನ ಸಮಯವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟು, ಊರಿನ ಒಳಿತಿಗಾಗಿ ವಿವಿಧ ಯೋಜನೆಗಳು ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಊರಿನ ಬಗ್ಗೆ ಕಾಳಜಿ, ಸಮಾಜದ ಬಗ್ಗೆ ಬದ್ಧತೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸುವ ಸಂಕಲ್ಪದೊಂದಿಗೆ‌ ಈ ಸಮಿತಿ ಕಾರ್ಯನಿರ್ವಹಿಸುತ್ತದೆ.

ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದಲ್ಲಿ ಮುನ್ನಡೆಯುವ ಕೆಡಿಸಿ ಸಮಿತಿಯ ಮಹಾಸಭೆಯು ನಡೆದು ಮುಂದಿನ ಸಾಲಿನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಶರೀಫ್ ಜೆ.ಹೆಚ್ ಕಾಜೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ವಹಾಬ್ ಅಝ್ಹರಿ, ಕೋಶಾಧಿಕಾರಿಯಾಗಿ ಸಿದ್ದೀಕ್ ಪಿ.ಎ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿಕಂದರ್ ಹೇಡ್ಯಾ, ಜಾಬಿರ್ ಕಾಜೂರು, ಲತೀಫ್ ಪಿ.ಎ, ಮನ್ಸೂರ್ ಡಿ.ಹೆಚ್, ಸುಹೈಬ್ ಕಾಜೂರು, ನವಾಝ್ ಕಾಜೂರು, ಮುಹಮ್ಮದ್ ಹಾಶಿಂ ಕಾಜೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಹನೀಫ್ ಕೆ ಎಂ, ಇಬ್ರಾಹಿಂ ಇಬ್ಬಿ, ಹಾರಿಸ್ ಜೆ.ಹೆಚ್, ಇಸ್ಮಾಯಿಲ್ ಹಾಜಿ ಮಕ್ಕ, ಸಿನಾನ್ ಬಹ್ರೈನ್, ಫಾರೂಕ್ ಜೆ.ಹೆಚ್, ರಫೀಕ್ ಕಾಜೂರು, ಸಫ್ವಾನ್ ಇವರನ್ನು ಆರಿಸಲಾಯಿತು.
ಸಯ್ಯಿದ್ ಕಾಜೂರು ತಂಙಳ್ ಗೌರವಾಧ್ಯಕ್ಷರಾಗಿಯೂ, ಕೆ ಯು ಮುಹಮ್ಮದ್ ಸಖಾಫಿ ಅವರು ಡೈರೆಕ್ಟರಾಗಿ ಎಂದಿನಂತೆ ಮಹಾಸಭೆಯಲ್ಲಿ ಅವಿರೋಧವಾಗಿ ನೇಮಕಗೊಂಡಿದ್ದಾರೆ.

Related posts

ಹಾಪ್ ಕಾಮ್ಸ್ ನಿರ್ದೇಶಕರಾಗಿ  ರತ್ನರಾಜ್ ಪೇರಂದಬೈಲ್ ಆಯ್ಕೆ        

Suddi Udaya

ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್‍ ನ ರಾಷ್ಟ್ರೀಯ ಸಹ ನಿರ್ದೇಶಕರಾಗಿ ಪ್ರಮೋದ್ ಆರ್ ನಾಯಕ್ ಆಯ್ಕೆ

Suddi Udaya

ನೆರಿಯ: ಕೋಲೋಡಿ ನಿವಾಸಿ ಜಯಂತ್ ಅಸೌಖ್ಯದಿಂದ ನಿಧನ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾಗಿ ವಿಜಯಾ ಆರಂಬೋಡಿ, ಕಾರ್ಯದರ್ಶಿಯಾಗಿ ಅಮಿತಾ ಕುಶಾಲಪ್ಪ ಗೌಡ ನೇಮಕ

Suddi Udaya

ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 23ನೇ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

Suddi Udaya
error: Content is protected !!