25.5 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಅರಸಿನಮಕ್ಕಿ ಸೇವಾ ಟ್ರಸ್ಟ್ ವತಿಯಿಂದ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

ಅರಸಿನಮಕ್ಕಿ: ಅರಸಿನಮಕ್ಕಿ ಸೇವಾ ಟ್ರಸ್ಟ್ ವತಿಯಿಂದ ದಿ ಅಡ್ಕಾಡಿ ಜಗನ್ನಾಥ ಗೌಡ ಇವರ ಸಂಸ್ಮರಣೆಯೊಂದಿಗೆ 2025 – 26ನೇ ಸಾಲಿನಲ್ಲಿಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದರೊಂದಿಗೆ ಗುಣಾತ್ಮಕ ಫಲಿತಾಂಶ ಪಡೆದ ಕಳೆದ ಸಾಲಿನ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕವೃಂದವನ್ನು ಅಭಿನಂದಿಸುವ ಕಾರ್ಯಕ್ರಮ ಜೂ.6 ರಂದು ಸರಕಾರಿ ಪ್ರೌಢಶಾಲೆ ಅರಸಿನಮಕ್ಕಿಯಲ್ಲಿ ನಡೆಯಿತು.


1967ರಲ್ಲಿ ಸ್ಥಾಪನೆಯಾದ ಶಾಲೆ 2026-27 ನೇ ಸಾಲಿನಲ್ಲಿ ಶೇ 100 ಫಲಿತಾಂಶ ಹಾಗೂ ಗುಣಾತ್ಮಕ ಫಲಿತಾಂಶ 85 .29 ಶೇ ತರುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಈ ಸಾಧನೆಗೆ ಅರಸಿನಮಕ್ಕಿ ಸೇವಾಟ್ರಸ್ಟ್ ವತಿಯಿಂದ 47 ವಿದ್ಯಾರ್ಥಿಗಳನ್ನು ಹಾಗೂ ಕಳೆದ ಸಾಲಿನಲ್ಲಿ ಈ ವಿದ್ಯಾರ್ಥಿಗಳಿಗೆ ಬೋಧನಾ ಕಾರ್ಯವನ್ನು ಕೈಗೊಂಡ ಶಿಕ್ಷಕವೃಂದವನ್ನು ಅಭಿನಂಧಿಸಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮರಾಜ್ ಗೌಡ ಅಡ್ಕಾಡಿ ಅವರು ಸರ್ಕಾರಿ ಶಾಲೆಯ ಸಾಧನೆ ಮೆಚ್ಚುವಂತದ್ದು. ಸರ್ಕಾರಿ ಶಾಲೆಗಳು ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಸಹೋದರ ದಿ. ಅಡ್ಕಾಡಿ ಜಗನ್ನಾಥ ಗೌಡರ ಮೇರು ವ್ಯಕ್ತಿತ್ವದ ಚಿಂತನೆಗಳನ್ನು ಸ್ಮರಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷ ವಾಮನ ತಮನ್ಕರ್ ವಹಿಸಿದ್ದರು. ಸರ್ವದಾ ಒಳಿತನ್ನು ಮಾಡುವುದು ಗುರುಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆನಡೆಯುವುದು ಎಲ್ಲರಿಗೂ ಶ್ರೇಯಸ್ಕರವೆಂಬಂದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅವಿನಾಶ್ ಭಿಡೆ ಮಾಸ್ಟರ್ ಶೌರ್ಯ ವಿಪತ್ತು ನಿರ್ವಹಣಾ ಘಟಕ ಇವರು ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಯ್ಯ ಶೆಟ್ಟಿ ರವರು ಸರಕಾರಿ ಶಾಲೆಗಳು ಉತ್ತಮ ಫಲಿತಾಂಶ ಕೊಡುವಲ್ಲಿ ಶ್ರಮಿಸುತ್ತಿವೆ ಹಾಗೂ ಯಶಸ್ವಿಯಾಗುತ್ತಿವೆ ಪೋಷಕರು ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸುವ ದೊಡ್ಡ ಮನಸ್ಸು ಮಾಡಬೇಕಿದೆ ಎಂದು ತಿಳಿಸಿದರು.


ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮಂಜುಳಾ ಅವರು ಮಾತನಾಡಿ 2025 – 26ನೇ ಸಾಲಿನ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ವಿದ್ಯಾರ್ಥಿಗಳು ಶಿಕ್ಷಕರು ಪೋಷಕರು ಹಾಗೂ ಎಲ್ಲಾ ರೀತಿಯಲ್ಲು ಸಹಕರಿಸಿದ ಎಸ್.ಡಿ.ಎಮ್.ಸಿ ಹಿರಿಯ ವಿದ್ಯಾರ್ಥಿ ಸಮಿತಿ ಹಾಗೂ ಸರ್ವ ವಿದ್ಯಾಭಿಮಾನಿಗಳನ್ನು ಸ್ಮರಿಸಿದರು.


ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಸಿ ಕಾರ್ಯಾಧ್ಯಕ್ಷ ಗಣೇಶ್, ಶ್ರೀಮತಿ ಸರೋಜಿನಿ ನಾಯ್ಕ ಉಪಸ್ಥಿತರಿದ್ದು ಶುಭಹಾರೈಸಿದರು
ಚೇತನಾ ಕುಮಾರಿ ಎಸ್ ಸ್ವಾಗತಿಸಿದರು. ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀಚೇತನಾ ಬಿ.ಎಂ ವಂದಿಸಿದರು. ಸತೀಶ್ ಶೆಟ್ಟಿ ಗುತ್ತು ಕಾರ್ಯಕ್ರಮದ ಆಯೋಜನೆಗೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಸಿ ಉಪಾಧ್ಯಕ್ಷರು, ಸದಸ್ಯರು, ಅಶ್ವಮೇಧಾ ಫ್ರೆಂಡ್ಸ್ ಸದಸ್ಯರು, ಛಾಯಾಗ್ರಾಹಕರಾದ ಪ್ರಕಾಶ್, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಓಡಿಲ್ನಾಳ: ಅಪಾಯಕಾರಿ ತಿರುವಿಗೆ ತುರ್ತಾಗಿ ತಡಬೇಲಿ ಹಾಕುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಕಾಂಗ್ರೆಸ್‌’ಗೆ ಗೆಲುವಿನ ಗ್ಯಾರಂಟಿ ನೀಡಿದ ಜನತೆ ರಕ್ಷಿತ್ ಶಿವರಾಂ

Suddi Udaya

ವೇಣೂರು: ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

Suddi Udaya

ಶಿರ್ಲಾಲು ಗ್ರಾಮ ಸಭೆ: ಶಿರ್ಲಾಲುವಿನಲ್ಲಿರುವ ಗೋಮಾಲಾ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ಧಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ನಡ ಸರಕಾರಿ ಪ.ಪೂ. ಕಾಲೇಜಿಗೆ ರನ್ನರ್ಸ್ ಆಫ್ ಪ್ರಶಸ್ತಿ

Suddi Udaya

ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ, ದಂಡ ವಿಧಿಸಿದ: ಲಾಯಿಲ ಗ್ರಾ‌ಪಂ ಪಿಡಿಓ ಶ್ರೀನಿವಾಸ್ ಡಿ ಪಿ ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿಯವರಿಗೆ ಸಾರ್ವಜನಿಕರಿಂದ ಪ್ರಶಂಸೆ

Suddi Udaya
error: Content is protected !!