ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ನ 585 ಸೇವಾ ಯೋಜನೆಯ ಬೃಹತ್ ಉಚಿತ ಹೃದಯ ತಪಾಸಣೆ ಶಿಬಿರ

ಬೆಳ್ತಂಗಡಿ: ರಾಜಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು, ಒಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕಾö್ಯನ್ ಫೌಂಡೇಶನ್ ಇವರ ಸಹಯೋಗದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ೫೮೫ ಸೇವಾ ಯೋಜನೆ ಬೃಹತ್ ಉಚಿತ ಹೃದಯ ತಪಾಸಣೆ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದೀಶ್ ಲಾಯಿಲ ವಹಿಸಿದ್ದರು. ಕಾರ್ಯಕ್ರಮವನ್ನು ಸಿಖಂದರ್ ಪಾಷಾ ಡಿ.ಎನ್ ಉದ್ಘಾಟಿಸಿ ಮಾತನಾಡಿ “ರಾಜಕೇಸರಿ ಸೇವಾ ಟ್ರಸ್ಟ್ ಬಹಳ ಉತ್ತಮವಾದ ಸಂದೇಶದೊAದಿಗೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವುದು ಬಹಳ ಹೆಮ್ಮೆಯ ವಿಷಯ. ಇಂತಹ ಸಂಸ್ಥೆಗೆ ನಾವೆಲ್ಲ ಕೈಜೋಡಿಸಿದರೆ ಇನ್ನಷ್ಟು ಸಮಾಜಕ್ಕೆ ಕೊಡುಗೆಗಳನ್ನು ನೀಡಲು ಯಶಸ್ವಿಯಾಗುತ್ತದೆ” ಎಂದು ಶುಭ ಹಾರೈಸಿದರು.

ಖ್ಯಾತ ಹಾಸ್ಯ ಯಕ್ಷಗಾನ ಚಕ್ರವರ್ತಿ ಪ್ರಜ್ವಲ್ ಕುಮಾರ್ ಮಾತನಾಡಿ ರಾಜ್ಯಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ನಮ್ಮ ರಾಜ ಕೇಸರಿ ಯಾವ ಸಂದರ್ಭದಲ್ಲಿಯೂ ರಕ್ತದ ಅವಶ್ಯಕತೆ ಇದ್ದಲ್ಲಿ ದೀಪಕ್ ಜಿ ಅವರನ್ನು ಸಂಪರ್ಕಿಸಿದ ಕೂಡಲೇ ರಕ್ತ ಸಿಗುತ್ತದೆ ಇದು ನಮಗೆ ಸಂತೋಷದ ವಿಷಯ ಇಂಥ ಸಂಸ್ಥೆಯು ರಾಜ್ಯದಲ್ಲಿ ಏಕೈಕ ಇರುವುದೆಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಹಿರಿಯ ಹೃದಯ ತಜ್ಞ ಡಾ| ಮುಕುಂದ್, ವರದಿಗಾರರಾದ ಮನೋಹರ್ ಬಳಂಜ, ಜಾರಪ್ಪ ಪೂಜಾರಿ ಬೆಳಾಲು, ಖಾಸಗಿ ಬಸ್ ನೌಕರರ ಸಂಘದ ಗೌರವ ಸಲಹೆಗಾರ ಚಾಬಕ್ಕ, ದುರ್ಗಾ ಕ್ಯಾಟರಿಂಗ್ ಮಾಲಕ ಭಾಸ್ಕರ್ ಕುಲಾಲ್, ಉದ್ಯಮಿ ಸೆಬಾಸ್ಟಿಯನ್ ಮುಂಡಾಜೆ, ಬೆಳ್ತಂಗಡಿ ಸರಕಾರಿ ಮಾದರಿ ಶಾಲೆ ಮುಖ್ಯೋಪಾಧ್ಯಾಯ ಶಿವಾನಂದ ಭಂಡಾರಿ, ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಸಂದೀಪ್ ಉಪಸ್ಥಿತರಿದ್ದರು.

ದೀಪಕ್ ಜಿ ಬೆಳ್ತಂಗಡಿ ಸ್ವಾಗತಿಸಿ, ನಿರೂಪಿಸಿದರು. ಜಗದೀಶ್ ವಂದಿಸಿದರು. ೫೦ಕ್ಕಿಂತ ಅಧಿಕ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ಉಜಿರೆ : ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಶಿಬಿರ

Suddi Udaya

ಶಿಶಿಲ ಗ್ರಾ.ಪಂ ನಲ್ಲಿ ಕಸ್ತೂರಿರಂಗನ್ ವಿರೋಧಿಸುವ ಬಗ್ಗೆ ಪೂರ್ವಭಾವಿ ಸಭೆ

Suddi Udaya

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಪಡ್ಲಾಡಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಶಿಬಾಜೆ ಶತ ಚಂಡಿಕಾ ಯಾಗ ಸಮಿತಿಯಿಂದ ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಭೇಟಿ: ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಕರಿಮಣೇಲು: ಗಾಂಧಿನಗರ ನಿವಾಸಿ ಹಸನಬ್ಬ ನಿಧನ

Suddi Udaya
error: Content is protected !!