September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿರ್ಲಾಲು ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ರಜತ ಮಹೋತ್ಸವ

ಅಳದಂಗಡಿ ವಲಯದ ಶಿರ್ಲಾಲು ಎ ಕಾರ್ಯಕ್ಷೇತ್ರದ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಅಧ್ಯಕ್ಷೆ ಪ್ರೇಮ ಕೋರ್ದೊಟ್ಟು ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮುಖಾಂತರ ವಾರ್ಷಿಕೋತ್ಸವವನ್ನು ಉದ್ಘಾಟಿಸಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಮಾತೃಶ್ರೀ ಅಮ್ಮನವರ ಕನಸನ್ನು ನನಸು ಮಾಡಿದ ಹೆಗ್ಗಳಿಕೆ ಈ ಅನ್ನಪೂರ್ಣೇಶ್ವರಿ ಸಂಘದ್ದು ಹಾಗೂ ಸಂಘ ಎಳೆಯ ಪ್ರಾಯದಲ್ಲಿ ನಮ್ಮ ಸಂಘ ಹೇಗೆ ಇತ್ತು ಎಂಬುದರ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ಗೋಡೆಯ ಮದ್ಯ ಇದ್ದ ಮಹಿಳೆಯರು ಹೊರಗಿನ ಪ್ರಪಂಚ ನೋಡಿದ್ದೇ ಗ್ರಾಮಾಭಿವೃದ್ಧಿ ಯೋಜನೆಯ ಈ ಅನ್ನಪೂರ್ಣನೇಶ್ವರಿ ಸಂಘದಿಂದ ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ವಲಯ ಮೇಲ್ವಿಚಾರಕರಾದ ಯಶೋಧ ರವರು ಮತ್ತು ತರಬೇತಿಯನ್ನು ಪಡೆಯಲು ಬಂದ ಮೇಲ್ವಿಚಾರಕ ವಸಂತ ರವರು ಸಂಘಕ್ಕೆ ಶುಭ ಹಾರೈಸಿದರು. 25 ವರ್ಷದಿಂದ ಸಂಘ ನಡೆದು ಬಂದ ದಾರಿ ಮತ್ತು ಅದರ ಸದ್ವಿನಿಯೋಗ ಪಡೆದ ಬಗ್ಗೆ ಅನಿಸಿಕೆಯನ್ನು ಡೀಕಮ್ಮ ಕರ್ದೋಟ್ಟು ಮತ್ತು ಹರಿಣಾಕ್ಷಿಯವರು ವ್ಯಕ್ತಪಡಿಸಿದರು. ವಾರದ ಸಭೆ ನಡೆಯುವ ಮನೆಯವರಾದ ಶ್ರೀಮತಿ ಮನೀಷ ಲಕ್ಷ್ಮಣ ಪೂಜಾರಿಯವರು ಮಹಿಳೆಯರ ತಾಳ್ಮೆ ಮತ್ತು ಸಹನೆಯ ಬಗ್ಗೆ ಮಾತನಾಡಿದರು. ಸೇವಾ ಪ್ರತಿನಿಧಿಯವರಾದ ಚಂದ್ರವತಿಯವರು ತಮ್ಮ ಸಂಘದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿ ಸಂಘಕ್ಕೆ ಶುಭ ಹಾರೈಸಿದರು.

ಹರಿಣಾಕ್ಷಿ ನಿರೂಪಿಸಿ, ಶೋಭಾ ಕರ್ದೋಟ್ಟು ಸ್ವಾಗತಿಸಿದರು . ಶಿಲ್ಪ ಬಾರ್ಲೊಡಿ ಬೈಲ್ ಧನ್ಯವಾದವಿತ್ತರು.

Related posts

ಸರಕಾರದ ಎಮ್.ಎಸ್.ಐ.ಎಲ್ ಮದ್ಯದ ಅಂಗಡಿಗೆ ಜನಜಾಗೃತಿ ವೇದಿಕೆ, ಬಾರ್ಯ ಗ್ರಾ.ಪಂ. ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನೂತನ ನಾಯಕರ ಪದಗ್ರಹಣ ಮತ್ತು ಪ್ರಮಾಣವಚನ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ಲೈವ್ ಅಸೋಸಿಯೇಶನ್ ಅಧ್ಯಕ್ಷರಾಗಿ ದಿವ್ಯವರ್ಮಾ, ಕಾರ್ಯದರ್ಶಿಯಾಗಿ ಶರತ್ ಎಂ. ಗೌಡ ಬೆಳ್ತಂಗಡಿ ಆಯ್ಕೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ

Suddi Udaya

ಕಡಿರುದ್ಯಾವರ: ನಿಯಂತ್ರಣ ತಪ್ಪಿ ಬಿದ್ದ ದ್ವಿಚಕ್ರ ವಾಹನ

Suddi Udaya

ಪಶ್ಚಿಮ ವಲಯ ಮಟ್ಟದ 8ನೇ ಪೊಲೀಸ್ ಕರ್ತವ್ಯ ಕೂಟ : ಬೆಳ್ತಂಗಡಿ ವೃತ್ತ ನೀರಿಕ್ಷಕ ರವಿ ಬಿಎಸ್, ಹೆಡ್ ಕಾನ್‌ಸ್ಟೇಬಲ್ ವಿಜಯ್ ಕುಮಾರ್, ಪೊಲೀಸ್ ಕಾನ್‌ಸ್ಟೇಬಲ್ ಪ್ರಸನ್ನ, ಮೋಹನ್‌ರಿಗೆ ಪ್ರಶಸ್ತಿ

Suddi Udaya
error: Content is protected !!