30.3 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ಆಯ್ಕೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮಾದರಿಯಲ್ಲಿ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳು ಮತಪತ್ರಗಳ ಮೂಲಕ ತಮ್ಮ ಶಾಲಾ ನಾಯಕರು ಹಾಗೂ ಮಂತ್ರಿಮಂಡಲದ ಸದಸ್ಯರನ್ನು ಆಯ್ಕೆ ಮಾಡಿದರು.
ಶಾಲಾ ನಾಯಕಿಯಾಗಿ ಸಂಜನಾ ಎಸ್ ಉಪ ನಾಯಕಿಯಾಗಿ ಶ್ರುತಾ ಆಯ್ಕೆಯಾಗಿರುತ್ತಾರೆ.


ಈ ಚುನಾವಣಾ ಪ್ರಕ್ರಿಯೆಯನ್ನು ಶಾಲೆಯ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಸುಸೂತ್ರವಾಗಿ ನಡೆಸಲಾಯಿತು. ಸಂಘದ ಸಂಯೋಜಕರಾದ ಶ್ರೀಮತಿ ಕಸ್ತೂರಿ ಎಸ್., ಶಿಕ್ಷಕರಾದ ಮುರಳಿ ಪಿ. ಹಾಗೂ ಶ್ರೀಮತಿ ನೀತಾ ಕೆ.ಎಸ್. ಅವರ ನೇತೃತ್ವದಲ್ಲಿ ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಯಶಸ್ವಿಯಾಗಿ ನೆರವೇರಿದವು.

ಶಾಲಾ ಮುಖ್ಯ ಶಿಕ್ಷಕರಾದ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ, ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಬೆಳ್ತಂಗಡಿ: ಅತ್ಯುತ್ತಮ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಆಗಿ ಪ್ರಮೀಳಾ ರಿಗೆ ಜಿಲ್ಲಾ ಪ್ರಶಸ್ತಿ

Suddi Udaya

ಸಿವಿಲ್ ಇಂಜಿನಿಯರಿಂಗ್ ನಲ್ಲಿ ನ್ಯಾಯತರ್ಫುವಿನ ಮೋಹಿನಿ ಹೆಚ್ ರವರಿಗೆ ಚಿನ್ನದ ಪದಕ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಟಿಯು ಮಂಗಳೂರು ವಲಯ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

Suddi Udaya

ಪದ್ಮುಂಜ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಮಚ್ಚಿನ ಕಾರ್ಯಕ್ಷೇತ್ರದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ

Suddi Udaya

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

Suddi Udaya
error: Content is protected !!