September 17, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ಮಾನ್ಯತೆ ರದ್ದಾದ ಕಾಲೇಜು ಕೋಡ್ ನಲ್ಲಿ ಯಾವುದೇ ದಾಖಲಾತಿ ಆಗಿಲ್ಲ: ಅದರ ಮಾನ್ಯತೆ ರದ್ದಿಗೆ ನಾವೇ ಅರ್ಜಿ ಹಾಕಿದ್ದೆವು- ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಯಾವುದೇ ಗೊಂದಲ ಬೇಡಾ: ಎಕ್ಸೆಲ್ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ

ಬೆಳ್ತಂಗಡಿ: ಎಕ್ಸೆಲ್ ಕಾಲೇಜು ಬೆಳ್ತಂಗಡಿ ಮತ್ತು ವೇಣೂರಿನ ಮಾನ್ಯತೆ ರದ್ದು ಆದೇಶದ ಬಗ್ಗೆ ಗೊಂದಲ ಬೇಡ, ರದ್ದಾಗಿರುವ ಕೋಡ್ ನಡಿ ನಾವು ಯಾವುದೇ ದಾಖಲಾತಿ ಮಾಡಿಕೊಂಡಿಲ್ಲ ಎಂದು ಎಕ್ಸೆಲ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಸ್ಪಷ್ಟನೆಯ ವಿವರ: ಸಾರ್ವಜನಿಕರ ಗಮನಕ್ಕೆ, ಕೆಲ ನ್ಯೂಸ್ ಚಾನೆನ್ ನಲ್ಲಿ ಕಾಲೇಜಿನ ಬಗ್ಗೆ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ನಾವು ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು College code SS0351 ರಲ್ಲಿ ದಾಖಲಾತಿ ಮಾಡಿದ್ದು, ಈ ಕಾಲೇಜು ಕೋಡ್ ನ ಮಾನ್ಯತೆಯ ಬಗ್ಗೆ ಮತ್ತು ವಿದ್ಯಾರ್ಥಿಗಳ ಯಾವ ಕಾಲೇಜು ಕೋಡ್ ನಲ್ಲಿ ದಾಖಲಾತಿ ಆಗಿದ್ದಾರೆ ಎನ್ನುವುದನ್ನು ಮಕ್ಕಳ ಸ್ಯಾಟ್ಸ್ ಸಂಖ್ಯೆ ಮೂಲಕ ಹತ್ತಿರದ ಡಿಡಿಪಿಯು ಕಚೇರಿ ಅಥವಾ ಸರಕಾರಿ ಕಾಲೇಜುಗಳಲ್ಲಿ ಖಚಿತ ಪಡಿಸಿಕೊಳ್ಳಬಹುದು.

ಈಗ ರದ್ದುಗೊಂಡಿರುವ ಕಾಲೇಜಿನ CODE SS0376 ಆಗಿದ್ದು, ಕಳೆದ ವರ್ಷ ಅದರ ಮಾನ್ಯತೆಗಾಗಿ ಅರ್ಜಿಯನ್ನು ಸಲ್ಲಿಸ್ಸಿದ್ದು ಮಾತ್ರ ವಿನಃ ಅದರಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ದಾಖಾಲಾತಿ ಮಾಡಿರಲಿಲ್ಲ. ಈ ವರ್ಷ ನಾವಾಗಿಯೇ ಅದರ ಮಾನ್ಯತೆಯನ್ನು ರದ್ದುಗೊಳಿಸಲು ಮಾರ್ಚ್ ತಿಂಗಳ ಕೊನೆಯಲ್ಲಿ ಅರ್ಜಿ ಹಾಕಿದ್ದೆವು. ಆದರೆ ಈಗ ಕಾಣದ ಕೈಗಳು ನಮ್ಮ ಸಂಸ್ಥೆಯ ಘನತೆಯನ್ನು ಹಾಳುಮಾಡುವ ಉದ್ದೇಶದಿಂದ ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದು ಸುಳ್ಳು ಸುದ್ದಿಯನ್ನು ELECTRONIC ಮಾಧ್ಯಮದ ಮೂಲಕ, ಸಾಮಾಜಿಕ ಮಾಧ್ಯಮದ ಮೂಲಕ ಪ್ರಯತ್ನಿಸುತ್ತಿದ್ದಾರೆ. ತಾವೆಲ್ಲರೂ ಗೊಂದಲಕ್ಕೆ ಒಳಗಾಗದೇ ಸಹಕರಿಸಬೇಕಾಗಿ ವಿನಂತಿ.ಉದ್ದೇಶಪೂರ್ವಕ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ಸ್ವಷ್ಟನೆಯಲ್ಲಿ ತಿಳಿಸಿದ್ದಾರೆ.

Related posts

ಉಜಿರೆಯ ಐಕಾನ್ ಗೆ ಪ್ಲಾಟಿನಂ ಸೆಂಟರ್ ಅವಾರ್ಡ್ ಸೇರಿ ಅನೇಕ ಗೌರವಗಳು

Suddi Udaya

ಬೆಳ್ತಂಗಡಿ ಬಂಟರ ಸಂಘದ ಖಾಯಂ ಆಹ್ವಾನಿತರ, ನಿರ್ದೇಶಕ ಮಂಡಳಿ ಸಭೆ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಕಲಾರತ್ನ ಗೌರವ ಪುರಸ್ಕಾರ

Suddi Udaya

ಚಾಮಾ೯ಡಿ ಘಾಟಿಯಲ್ಲಿ ಬಸ್ಸು ಲಾರಿ ಮುಖಾಮುಖಿ ಡಿಕ್ಕಿ: ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್

Suddi Udaya

ಧರ್ಮಸ್ಥಳ: ಶ್ರೀರಂಗ ತುಲಾಭಾರ ಮತ್ತು ಭಕ್ತಸುಧನ್ವ ತಾಳಮದ್ದಳೆ

Suddi Udaya

ಬಳಂಜ ಗ್ರಾ.ಪಂ. ನ ಅಭಿವೃದ್ಧಿಯ ಓಟಕ್ಕೆ ಒಲಿದ ಪ್ರತಿಷ್ಠಿತ ಗಾಂಧಿ ಪುರಸ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್,ಸಚಿವ ಪ್ರಿಯಾಂಕ್ ಖರ್ಗೆರವರಿಂದ ಪ್ರಶಸ್ತಿ ಪ್ರದಾನ

Suddi Udaya
error: Content is protected !!