24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಕ್ತೇಶ್ವರಿಪದವು ಶಾಲಾ ಹಳೆ ವಿದ್ಯಾರ್ಥಿಗಳಿಂದ ಹದಗೆಟ್ಟ ರಸ್ತೆ ದುರಸ್ತಿ ಶ್ರಮದಾನ

ನ್ಯಾಯತರ್ಪು : ಇಲ್ಲಿನ ರಕ್ತೇಶ್ವರಿ ಪದವು ಸರಕಾರಿ ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಹಾಗೂ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಕಳಿಯ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ನಡೆಯಿತು.


ಪರಪ್ಪು-ಕೊಯ್ಯೂರು ಕೂಡು ರಸ್ತೆಯ ರಕ್ತೇಶ್ವರಿಪದವು, ಬಟ್ಚೆಮಾರು,ಕೆಳಗಿಬೆಟ್ಟು,ಕಜೆ, ಕಲಾಯಿತೊಟ್ಟು, ಬದ್ಯಾರು,
ಹಾಕೋಟೆ,ಮುದ್ದುಂಜ,ಒಂಜಾರೆ ಮತ್ತು ಕೇಲ್ದಡ್ಕ ಮೂಲಕ ಹಾದು ಹೋಗುವ ಸುಮಾರು ನಾಲ್ಕು ಕಿ.ಮೀಟರ್ ದೂರದ ತೀರ ಹದಗೆಟ್ಟಿರುವ ರಸ್ತೆಯ ಗುಂಡಿ ಮುಚ್ಚುವ ಮೂಲಕ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುವಂತೆ ಶ್ರಮದಾನದಲ್ಲಿ ದುರಸ್ತಿ ಮಾಡಿದರು.


ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಾಗೂ ವಾಹನ ಸವಾರರ ಓಡಾಟಕ್ಕೆ ಅನುಕೂಲ ಕಲ್ಪಿಸಿದಂತ್ತಾಗಿದೆ.
ರಸ್ತೆ ಗುಂಡಿ ಮುಚ್ಚಲು ಬೇಕಾದ ಕಲ್ಲು,ಮಣ್ಣು, ಕಲ್ಲಿನ ಹುಡಿ ಸಾಮಾಗ್ರಿಗಳನ್ನು ಸಾಗಿಸಲು ಸ್ಥಳೀಯ ವಾಹನ ಚಾಲಕ,ಮಾಲಕರು ಉಚಿತವಾಗಿ ಆಟೋ ರಿಕ್ಷಾ, ಟೆಂಪೋ ರಿಕ್ಷಾಗಳು ಮತ್ತು ಪಿಕಪು ವಾಹನಗಳನ್ನು ನೀಡಿ ಸಹಕರಿಸಿದರು. ನಿವೃತ್ತ ಮಾಜಿ ಸೈನಿಕ ವಿಕ್ರಂ ಜೆ.ಎನ್.ವಂಜಾರೆ ಉಪಹಾರದ ವ್ಯವಸ್ಥೆ ಮಾಡಿದರು.


ರಕ್ತೇಶ್ವರಿಪದವು ಶಾಲಾ ಹಳೆಯ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಕಲಾಯಿತೊಟ್ಟು ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ಜಯರಾಮ ಗೌಡ ಕೆರೆಕೋಡಿ, ಉಮೇಶ್ ನಾಯ್ಕ ಕೇಳ್ದಡ್ಕ ರಮೇಶ್ ಪೂಜಾರಿ ವಂಜಾರೆ,ಶೇಖರ ಗೌಡ ಮುದ್ದುಂಜ, ವಸಂತ ಗೌಡ ಕಲಾಯಿತೊಟ್ಟು,ಭಜನಾ ಮಂಡಳಿ ಅಧ್ಯಕ್ಷ ಯುವರಾಜ ಗೌಡ ಮುದ್ದುಂಜ,ಗೇರುಕಟ್ಟೆ ಅಟೋ ಚಾಲಕ,ಮಾಲಕರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೊಟ್ಟು, ಪೂವಪ್ಪ ಗೌಡ ಹಾಕೋಟೆ, ಓಬಯ್ಯ ಗೌಡ ಹಾಕೋಟೆ,ನಾರಾಯಣ ಗೌಡ ಹಾಕೋಟೆ, ಬೊಮ್ಮಣ್ಣ ಗೌಡ ಹಾಕೋಟೆ,ಬೊಮ್ಮಣ್ಣ ಗೌಡ ಬಟ್ಟೆಮಾರು, ಪ್ರಣಿತ್ ಗೌಡ ಬಟ್ಟೆ ಮಾರು, ಪ್ರಮೋದ ಪೂಜಾರಿ ಕೆಳಗಿನಬೆಟ್ಟು, ಜಿತೇಶ್ ಗೌಡ ಕೆ. ಹಲವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕರು, ಮಾಲಕರು ಪದಾಧಿಕಾರಿಗಳು ಕಳಿಯ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ಅಂತರಾಷ್ಟ್ರಮಟ್ಟದ ಯೂತ್ ಗೇಮ್ಸ್ : ಎಸ್‌ಡಿಎಂ ಶಾಲಾ ವಿದ್ಯಾರ್ಥಿನಿ ಅನೀಶ ಆರೋಲ್‌ಗೆ ಚಿನ್ನದ ಪದಕ

Suddi Udaya

ಮಚ್ಚಿನ ಗ್ರಾ.ಪಂ., ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸಂಯೋಗದಲ್ಲಿ ಆಧಾರ್ ಶಿಬಿರ

Suddi Udaya

ಜೂ.21: ಬಳಂಜ ಬಿಲ್ಲವ ಸಂಘದಲ್ಲಿ ದತ್ತಿನಿಧಿಯಿಂದ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ತರಬೇತಿ ಕಾರ್ಯಾಗಾರ

Suddi Udaya

ವೇಣೂರು: ಚಿರತೆಯ ಮೃತದೇಹ ಪತ್ತೆ ಪ್ರಕರಣ:ಚಿರತೆಯ ಶವಪರೀಕ್ಷೆ ಮಾಡಿ ಅಂತ್ಯಕ್ರಿಯೆ ನಡೆಸಿದ ಅರಣ್ಯ ಇಲಾಖೆ

Suddi Udaya

ಆ 31: ಬೆಳ್ತಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಗುರುಜಯಂತಿ: ಸಮಾಜದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ

Suddi Udaya

ಶಿಶಿಲ: ಉಮ್ಮಂತಿಮಾರ್ ಎಂಬಲ್ಲಿ ಕಿಂಡಿ ಅಣೆಕಟ್ಟು–ಒಟ್ಲದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

Suddi Udaya
error: Content is protected !!