26.9 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ. ಪ್ರಾ. ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡುವ ಉಚಿತ ಬರೆವಣಿಗೆ ಪುಸ್ತಕಗಳ ವಿತರಣೆ ಕಾರ್ಯಕ್ರಮ ಜೂ.13ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಪೂಜ್ಯ ಖಾವಂದರ ಕಾರ್ಯದರ್ಶಿಗಳ ಕಚೇರಿ ಸಿಬ್ಬಂದಿ ಯವರಾದ ಶ್ರೀ ಸುನಿಲ್ ಅವರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಬರೆಯುವ ಪುಸ್ತಕಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಒಳ್ಳೆಯ ಜ್ಞಾನವಂತರಾಗಿ ಬಾಳಿ ಎಂದು ಶುಭ ಹಾರೈಸಿ ,ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

ಮುಖ್ಯೋಪಾಧ್ಯಾಯರಾದ ಕಮಲ್ ತೇಜು ರಜಪೂತ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ ಜೋಸೆಫ್ ಇವರು ಶ್ರೀ ಕ್ಷೇತ್ರದಿಂದ ಶಾಲಾ ಮಕ್ಕಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಉಷಾ ಕುಮಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದ ಕಾರ್ಯಕ್ರಮಕ್ಕೆ ಶಿಕ್ಷಕರಾದ ಶೇಖರ್ ಸ್ವಾಗತಿಸಿ, ಕಾವ್ಯ ಕೆ. ವಂದಿಸಿದರು. ಶ್ರೀಜಾ ಎ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಎಸ್‌.ಡಿ.ಎಂ ಪಾಲಿಟೆಕ್ನಿಕ್‌ ನಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮ

Suddi Udaya

ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ “ಬಾಲ ಕಾರ್ಮಿಕತೆ ಮುಕ್ತ ” ದಿನಾಚರಣೆ

Suddi Udaya

ಧರ್ಮಸ್ಥಳ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕಾರ್ಫ್ ಡೇ, ಕಾರ್ಗಿಲ್ ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Suddi Udaya

ಅತಿಕ್ರಮಣ ತೆರವುಗೊಳಿಸಿ ಗ್ರಾಮ ಪಂಚಾಯತ್ ಕಟ್ಟಡ ವಶಕ್ಕೆ ಪಡೆದ ತೆಕ್ಕಾರು ಗ್ರಾ.ಪಂ

Suddi Udaya

ನೆರಿಯ : ಮನೆಯಂಗಳದಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ

Suddi Udaya

ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!