24 C
ಪುತ್ತೂರು, ಬೆಳ್ತಂಗಡಿ
June 15, 2026
Uncategorized

ಬಳಂಜ ಶಾಲೆಗೆ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಶಾಲಾ ವಾಹನ ಸಮರ್ಪಣೆ

ಬಳಂಜ: ಸ್ಥಳೀಯ ಬಳಂಜ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಶಾಲಾ ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಸೌಲಭ್ಯದಿಂದ ನಾಲ್ಕೂರು, ಶಾಂತಿನಗರ, ತೋಟದಪಲ್ಕೆ , ರಾಮನಗರ, ಅಟ್ಲಾಜೆ , ಬಳಂಜ, ಕಟ್ಟಡಬೈಲು, ತೆಂಕಕಾರಂದೂರು, ಆಲಡ್ಕ , ಕಾಪಿನಡ್ಕ , ಗಾಂಧಿನಗರ, ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ನಮ್ಮೂರಿನ ಮಕ್ಕಳ ಶಿಕ್ಷಣದ ಪಯಣಕ್ಕೆ ಅಮೃತ ಸಂಭ್ರಮದ ಕೊಡುಗೆ ಎನ್ನುವ ದ್ಯೇಯದೊಂದಿಗೆ ಆರಂಭವಾಗಿರುವ ಈ ಸೌಲಭ್ಯವನ್ನು ಜೂನ್ 15 2026ನೇ ಸೋಮವಾರ, ಪೂರ್ವಾಹ್ನ 10 ಘಂಟೆಗೆ ಬಳಂಜ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾರವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ರವರ ನಿಧಿಯಿಂದ ನವೀಕರಣಗೊಳಿಸಲಾದ LKG ಕೊಠಡಿಯ ಉದ್ಘಾಟನೆಯೂ ನೆರವೇರಲಿದೆ.
ಅಶ್ವಥ್ ಹೆಗ್ಡೆ ಫೌಂಡೇಶನ್ ಸಂಸ್ಥೆಯು ಈಗಾಗಲೇ ಸುಮಾರು 15 ಲಕ್ಷಕ್ಕೂ ಮಿಕ್ಕಿದ ವೆಚ್ಚದಲ್ಲಿ ಬಳಂಜ ಶಾಲೆಯನ್ನು ವಿಟ್ರಿಫೈಡ್ ಟೈಲ್ಸ್, ಸ್ವಾಗತ ಗೋಪುರ, ಇಂಟರ್ ಲಾಕ್ ಅಳವಡಿಸುವುದರ ಮೂಲಕ ನವೀಕರಣಗೊಳಿಸಿದ್ದಾರೆ. ಇದೀಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನವನ್ನು ಸಮರ್ಪಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಜನಜಾಗೃತಿ ಸಮಿತಿಯ ಸ್ಥಾಪಕಾಧ್ಯಕ್ಷರಾದ ಕೆ ವಸಂತ್ ಸಾಲ್ಯಾನ್, ಕುಳೆಂಜಿರೋಡಿ ಗುತ್ತುವಿನ ಗಡಿ ಪ್ರಧಾನರಾದ ಅರುಣ ಹೆಗ್ಗಡೆ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಚಂದ್ರ ಶೇಖರ್ ಪಿ ಕೆ , ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾದ ಮನೋಹರ್ ಬಳಂಜ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

.

Related posts

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ: “ ಸು ಫ್ರಮ್ ಸೋ “ ನಿರ್ದೇಶಕ, ನಟ ಜೆ. ಪಿ. ತುಮಿನಾಡ್ ಕುಟುಂಬ ಸಮೇತರಾಗಿ ಭೇಟಿ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮತ್ತಷ್ಟು ವಿಘ್ನ : ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆ ಮೂರು ಮಂದಿ ನಿರ್ದೇಶಕರಿಂದ ಚುನಾವಣಾಧಿಕಾರಿಗಳಿಗೆ ಮನವಿ

Suddi Udaya

ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಕಾರ್ಯಕ್ರಮದಡಿ ನಿರ್ಮಾಣಗೊಳ್ಳಲಿರುವ ವಸತಿ ಶಾಲೆಯ ಆವರಣ: ಶಾಸಕ ಹರೀಶ್ ಪೂಂಜರಿಂದ ಸ್ಥಳ ಪರಿಶೀಲನೆ

Suddi Udaya

ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನಿತಿನ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕೊಕ್ಕಡ ಬಿಜೆಪಿ ಶಕ್ತಿಕೇಂದ್ರದಲ್ಲಿ ಬೈಠಕ್

Suddi Udaya
error: Content is protected !!