24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಟೌನ್‌ ಹಯಾತುಲ್ ಇಸ್ಲಾಂ ಸೆಕೆಂಡರಿ ಮದ್ರಸಾದಲ್ಲಿ ಹಮ್ರಾ ವರ್’ದ ಬಾಲ ಮಾಸಿಕ ಚಂದಾ ಅಭಿಯಾನಕ್ಕೆ ಚಾಲನೆ

ಉಜಿರೆ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (SJM) ಕೇಂದ್ರ ಸಮಿತಿ ಪ್ರಕಟಿಸುವ ಹಮ್ರಾ ವರ್’ದ ಬಾಲ ಮಾಸಿಕದ ಚಂದಾ ಅಭಿಯಾನಕ್ಕೆ ಹಯಾತುಲ್ ಇಸ್ಲಾಂ ಸೆಕೆಂಡರಿ ಮದ್ರಸಾ, ಉಜಿರೆ ಟೌನ್‌ನಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

ಜಮಾಅತ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ART ಅವರು ಚಂದಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮದ್ರಸ ಸದರ್ ಉಸ್ತಾದ್ ಇಸ್ಮಾಯಿಲ್ ಹನೀಫಿ ಅವರು ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಬೆಳೆಸುವ ಅಗತ್ಯತೆ ಹಾಗೂ ಪುಸ್ತಕಗಳು ಮತ್ತು ಮಾಸಿಕಗಳ ಮಹತ್ವದ ಕುರಿತು ಮಾತನಾಡಿದರು. ಹಮ್ರಾ ವರ್’ದ ಬಾಲ ಮಾಸಿಕವು ಮಕ್ಕಳಲ್ಲಿ ಓದುವ ಹವ್ಯಾಸ, ಸಾಹಿತ್ಯಾಸಕ್ತಿ ಹಾಗೂ ಇಸ್ಲಾಮಿಕ್ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಕೋಶಾಧಿಕಾರಿ ಖಾಲಿದ್, ಮದ್ರಸ ಮುಅಲ್ಲಿಂ ಮನ್ಸೂರ್ ಝುಹುರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಭಿಯಾನದ ಉದ್ಘಾಟನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಂದಾ ಕೂಪನ್‌ಗಳು ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಅಭಿಯಾನದಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರನ್ನು ಸೇರಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮದ್ರಸ ಮುಅಲ್ಲಿಂ ಮನ್ಸೂರ್ ಝುಹುರಿ ಧನ್ಯವಾದ ಅರ್ಪಿಸಿದರು.

Related posts

ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಕೊಕ್ಕಡ ಎಂಡೊಸಲ್ಪಾನ್ ಕೇಂದ್ರದಲ್ಲಿ ಇಂದಿರಾ ಗಾಂಧಿ ಜನ್ಮದಿನ ಆಚರಣೆ

Suddi Udaya

ರಬ್ಬರ್ ಬೆಳೆಗಾರರಿಗೆ ಪ್ರೋತ್ಸಾಹ ಧನ ಅಥವಾ ಬೆಂಬಲ ಬೆಲೆ ನೀಡುವ ಕುರಿತು ಸಂಸದರ ಮೂಲಕ ಕೇಂದ್ರ ಕೃಷಿ ಸಚಿವರಿಗೆ ರಬ್ಬರ್ ಸೊಸೈಟಿಯಿಂದ ಮನವಿ

Suddi Udaya

ಬೆಳಾಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮಾಧವ ಗೌಡ

Suddi Udaya

ಬಿಜೆಪಿ ತಣ್ಣೀರುಪoತ ಶಕ್ತಿಕೇಂದ್ರ ಪ್ರಮುಖ್ ಆಗಿ ಚೇತನ್ ಸುವರ್ಣ ಅಳಕ್ಕೆ ಆಯ್ಕೆ

Suddi Udaya

ಬಂದಾರು: ಕಬಿಲಾಲಿ ನಿವಾಸಿ ರುಕ್ಮಯ ಗೌಡ ನಿಧನ

Suddi Udaya

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆ ಆರಂಭ

Suddi Udaya
error: Content is protected !!