24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕೊಡೆ ವಿತರಣೆ

ಬೆಳ್ತಂಗಡಿ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂದಾರು ಇಲ್ಲಿನ 143 ವಿದ್ಯಾರ್ಥಿಗಳಿಗೆ “ಬದುಕು ಕಟ್ಟೋಣ ಬನ್ನಿ ” ತಂಡದ ಸಂಚಾಲಕ, ಉಜಿರೆ ಲಕ್ಷ್ಮಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಮಾಲಕರಾದ ಮೋಹನ್ ಕುಮಾರ್ ಅವರು ಸ್ಕೂಲ್ ಬ್ಯಾಗ್ ಮತ್ತು ಕೊಡೆ ವಿತರಣೆ ಮಾಡಿದರು.

ಈ ಸಂದರ್ಭ “ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕ ಮೋಹನ್ ಕುಮಾರ್ ಅವರು ಪುಸ್ತಕ ಸ್ಕೂಲ್ ಬ್ಯಾಗ್ ಮತ್ತು ಕೊಡೆ ವಿತರಿಸಿ ಮಾತನಾಡಿ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕು, ಕೇವಲ ಅಂಕಗಳಿಗಾಗಿ ಕಲಿಯುವುದಲ್ಲ, ವಿದ್ಯಾರ್ಥಿಗಳು ಸಂಸ್ಕಾರಯುತರಾಗಿ ಬದುಕಬೇಕು, ವಿದ್ಯಾವಂತರಾಗಿ‌ ಮಾದರಿ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನ‌ಕ್ಕೇರಿ ಇದೇ ರೀತಿ ಬಡತನ, ಕಷ್ಟದಲ್ಲಿ ಇರುವವರಿಗೆ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ನೊಂದವರ ಸೇವೆ ಮಾಡಬೇಕು ಎಂದು ಆಶಿಸುತ್ತಾ ಶುಭ ಹಾರೈಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಗೌಡ, ಗ್ರಾ.ಪಂ. ಮಾಜಿ ಸದಸ್ಯೆ ವಿಮಲಾ , ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಪಾಂಜಾಳ,
ನವೀನ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಪೇಕ್ಷ, ವೇದಿಕಾ, ತನ್ವಿ, ತನುಶ್ರೀ ಪ್ರಾರ್ಥಿಸಿದರು. ಸಹ ಶಿಕ್ಷಕ ರಫೀಕ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ
ವಿಶ್ವನಾಥ ಎಂ.ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ಮೋಹನ್ ವೈ.ಇ. ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ರೇಖಾ ವಂದಿಸಿದರು. ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಶಿಕ್ಷಕ ವೃಂದದವರು ಪಾಲ್ಗೊಂಡರು.

Related posts

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

Suddi Udaya

ಮೃತ ಸುಮಂತ್ ಕೊಲೆ ಪ್ರಕರಣ, 5 ತಿಂಗಳಾದರೂ ಪತ್ತೆಯಾಗದ ಸುಳಿವು: ಸಮಗ್ರ ತನಿಖೆಗೆ ಶಾಸಕ ಹರೀಶ್ ಪೂಂಜ ಮತ್ತು ಪೋಷಕರೊಂದಿಗೆ ಎಸ್‌ಪಿ ಭೇಟಿ

Suddi Udaya

ಅರಸಿನಮಕ್ಕಿಯಲ್ಲಿ 22ನೇ ವರ್ಷದ ಅಷ್ಟಮಿ : ಹರೀಶ್ ಪೂಂಜರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಉಜಿರೆಯ ರಂಜಿತ್ ನಾಯ್ಕ್ ಎನ್. ಆರ್ ನೇಮಕ

Suddi Udaya

ಕಳೆಂಜ ಕ್ರಿಶ್ಚಿಯನ್  ಬ್ರದರ್‍ಸ್ ಸಂಘದ ವತಿಯಿಂದ ವೈದ್ಯಕೀಯ ನೆರವು

Suddi Udaya

ಬಿಜೆಪಿ‌ ಅಲ್ಪಸಂಖ್ಯಾತ ಮೋರ್ಚಾದಿಂದ ಶಾಸಕರ ಹುಟ್ಟುಹಬ್ಬ ಆಚರಣೆ

Suddi Udaya
error: Content is protected !!