September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಮಜಲುವಿನಲ್ಲಿ ಎಸ್‌ಜೆಎಮ್ ರೇಂಜ್ ಕಾನ್ಫರೆನ್ಸ್ ಸಂಪನ್ನ

ಬೆಳ್ತಂಗಡಿ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಎಸ್‌ಜೆಎಮ್ ಉಪ್ಪಿನಂಗಡಿ ರೇಂಜ್ 140ರ ವತಿಯಿಂದ ಜೂ.17 ರಂದು ಹಿಮಾಯತುಲ್ ಇಸ್ಲಾಂ ಮದ್ರಸ ಹೊಸಮಜಲುವಿನಲ್ಲಿ ರೇಂಜ್ ಕಾನ್ಫರೆನ್ಸ್ ನಡೆಯಿತು.

ಕಾರ್ಯಕ್ರಮಕ್ಕೆ ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಡಿ.ಹೆಚ್ ಇಬ್ರಾಹಿಂ ಸಅದಿ ನೆಕ್ಕಿಲಾಡಿ ಅಧ್ಯಕ್ಷತೆ ವಹಿಸಿದ್ದರು. ಸತ್ತಾರ್ ಹಿಶಾಮಿ ಉಸ್ತಾದ್ ಖಿರಾಅತ್ ನೆರವೇರಿಸಿದರು. ಹೊಸಮಜಲು ಖತೀಬ್ ಮುಹಮ್ಮದ್ ಶಂಸೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಫಿರೋಝ್ ಸಅದಿ ಸ್ವಾಗತಿಸಿದರು. ಬಳಿಕ ಮುಹಮ್ಮದ್ ರಫೀಖ್ ಅಹ್ಸನಿ ನೆಕ್ಕಿಲಾಡಿ 6ನೇ ತರಗತಿಯ ತಝ್ಕಿಯಾ ಪಾಠ-5 ಕುರಿತ ಹಾಗೂ ಇಸ್ಮಾಯಿಲ್ ಸಅದಿ ನೆಲ್ಯಾಡಿ ಅವರು 8ನೇ ತರಗತಿ ತಝ್ಕಿಯಾ ಪಾಠ-4 ಕುರಿತು ಪಾಠ ನಡೆಸಿ ಚರ್ಚೆ ಕೈಗೊಂಡರು.

9ನೇ ತರಗತಿ ದುರೂಸ್ 1, 2 ಹಾಗೂ 3 ಪಾಠಗಳನ್ನು ಆಧರಿಸಿ ಕ್ವಿಝ್ ಸ್ಪರ್ಧೆಯನ್ನು ಶರೀಫ್ ಸಅದಿ ನೆಕ್ಕಿಲಾಡಿ ನಡೆಸಿಕೊಟ್ಟರು.

ಮುಹಮ್ಮದ್, ಎಂ.ಕೆ ಇಬ್ರಾಹಿಂ ಹಾಗೂ ಇಬ್ರಾಹಿಂ ಖಲೀಲ್ ಉಸ್ತಾದ್ ಆಶಂಸ ಭಾಷಣ ಮಾಡಿದರು. ಅಬ್ದುಲ್ ಲತೀಫ್ ಸಖಾಫಿ ಕರ್ವೇಲ್ ಅವರು “ಹೊಸ ವರ್ಷ – ಹೊಸ ಹರುಷ” ವಿಷಯದ ಕುರಿತು ಪ್ರಬಂಧ ಮಂಡಿಸಿದರು.

ಮುಹಮ್ಮದ್ ರಾಶೀದ್ ಮದನಿ ನೆಲ್ಯಾಡಿ ನ್ಯೂಸ್ ರೀಡಿಂಗ್ ನಡೆಸಿದರೆ, ಅನ್ಸಿಫ್ ಸಅದಿ ಮೊರಂಕಳ ಆಲಾಪಣೆ ನಡೆಸಿದರು. ಕೊನೆಯಲ್ಲಿ ಅಬ್ದುಲ್ ಜಬ್ಬಾರ್ ಝೈನಿ ಕರ್ವೇಲು ಧನ್ಯವಾದ ಅರ್ಪಿಸಿದರು.

ರೇಂಜ್ ವ್ಯಾಪ್ತಿಯ ಮುಅಲ್ಲಿಮರು ಮತ್ತು ಸಂಬಂಧಿತ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸಮಜಲು ಎಸ್‌ಬಿಎಸ್ ವತಿಯಿಂದ ಉಸ್ತಾದರಿಗೆ ಸ್ಮರಣಿಕೆ ಹಾಗೂ ಕೊಡುಗೆ ನೀಡಿ ಗೌರವಿಸಲಾಯಿತು. ಬಗೆಬಗೆಯ ತಿಂಡಿ ವ್ಯವಸ್ಥೆಯನ್ನು ಊರವರು ಸಂಯೋಜಿಸಿದ್ದರು.

Related posts

ಕಡಿರುದ್ಯಾವರ ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಆಶಾ ಯಂಗ್ ಸ್ಟಾರ್ ಕ್ಲಬ್ ಕಾರ್ಯಕಾರಿ ಸಮಿತಿ ಸಭೆ

Suddi Udaya

ಶಿಶಿಲ: ಉಮ್ಮಂತಿಮಾರು ಕಿಂಡಿ ಅಣೆಕಟ್ಟು ಹಾಗೂ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ರೂ.2.50 ಕೋಟಿ ಅನುದಾನ ಮಂಜೂರು: ಶಾಸಕ ಹರೀಶ್ ಪೂಂಜ

Suddi Udaya

ಅಳದಂಗಡಿ: ನೊಚ್ಚ ಮನೆತನದ ಕುವರಿ ನಿಯತಿ ಅಮೇರಿಕಾದಲ್ಲಿ ಯಕ್ಷಗಾನ ನಾಟ್ಯ ಪ್ರದರ್ಶನ

Suddi Udaya

ಕಳೆಂಜ ಬಿಎಸ್‌ಪಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Suddi Udaya

ಬೆಳ್ತಂಗಡಿ: ಪ.ಜಾತಿ.ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ. ಅಧ್ಯಕ್ಷತೆಯಲ್ಲಿ ಕುಂದುಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆ

Suddi Udaya
error: Content is protected !!