September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ. ಹಿ. ಪ್ರಾ. ಶಾಲೆಯಲ್ಲಿ ಯೋಗ ತರಬೇತಿ ಉದ್ಘಾಟನೆ

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ ಇಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟನೆಯು ಜೂ. 12 ರಂದು ನಡೆಯಿತು

ಮುಖ್ಯ ಅತಿಥಿಯಾಗಿ ಉಜಿರೆ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜಿನ ವೈದ್ಯಶಾಸ್ತ್ರದ ಉಪನ್ಯಾಸಕಿ ಡಾ. ಶಮಿತಾ ಅವರು ಮಾತನಾಡಿ, ಯೋಗ ಅತ್ಯಂತ ಪ್ರಾಚೀನವಾದದ್ದು. ಮಕ್ಕಳಲ್ಲಿ ಯೋಗಾಭ್ಯಾಸವನ್ನು ಮೂಡಿಸುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.ಇದು ಆರೋಗ್ಯಕರ ಜೀವನ ಸಾಗಿಸಲು ಇರುವ ಸುಲಭ ಮಾರ್ಗ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕಮಲ್ ತೇಜ್ ರಜಪೂತ್ ಮಾತನಾಡಿ, ಮಕ್ಕಳಲ್ಲಿ ಏಕಾಗ್ರತೆ ಬರಲು ಯೋಗ ಸಹಕಾರಿಯಾಗಿದೆ. ಒಂದು ವಾರ ಕಾಲ ನಡೆಯಲಿರುವ ಈ ಶಿಬಿರ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕಾಲೇಜಿನ ವಿದ್ಯಾರ್ಥಿಗಳಾದ ರಾಮಕೃಷ್ಣ, ವಂದಿತ, ಭಾವನ ಉಪಸ್ಥಿತರಿದ್ದರು.
ಸಹ ಶಿಕ್ಷಕ ಶೇಖರ್ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಸಂಜೀವ ಕೆ ವಂದಿಸಿದರು.

Related posts

ಉಜಿರೆ: ಕುಂಟಿನಿ ಎಸ್ ಸಿ ಕಾಲೊನಿಯಲ್ಲಿ 9ನೇ ವರ್ಷದ ಸಾಮೂಹಿಕ ದೀಪಾವಳಿ ಆಚರಣೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ತಾ| ಮಟ್ಟದ ಫುಟ್ ಬಾಲ್ ಪಂದ್ಯಾಟ

Suddi Udaya

ಲಾಯಿಲ: ಬಜಕ್ಕಿರೆಸಾಲು ಬಳಿ ಚಿರತೆ ಓಡಾಟ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಪ್ರೊಫೆಸರ್ ಗಳ ತಂಡ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷರಾಗಿ ಪಿ.ಕುಶಾಲಪ್ಪ ಗೌಡ , ಗೌರವ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಕಾರ್ಯದರ್ಶಿಯಾಗಿ ಗಣೇಶ್ ಗೌಡ

Suddi Udaya

ದ್ವಿತೀಯ ಪಿಯು ಫಲಿತಾಂಶ: ಅರಸಿನಮಕ್ಕಿ ಪದವಿ ಪೂರ್ವ ಕಾಲೇಜಿಗೆ ಶೇ. 84.6 ಫಲಿತಾಂಶ

Suddi Udaya
error: Content is protected !!