September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುಂಜಾಲಕಟ್ಟೆ ಕೆ ಪಿ ಎಸ್ (ಪ್ರೌಢಶಾಲಾ ವಿಭಾಗ,) : ಶಾಲಾ ವಿದ್ಯಾರ್ಥಿ ಸರಕಾರಕ್ಕೆ ತಂತ್ರಜ್ಞಾನ ಬಳಸಿ ಮತದಾನ

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿ ಸರಕಾರಕ್ಕೆ ತಂತ್ರಜ್ಞಾನವನ್ನು ಬಳಸಿ ಚುನಾವಣೆಯನ್ನು ನಡೆಸಲಾಯಿತು.


ಈ ಚುನಾವಣೆಯಲ್ಲಿ ಸರಳತೆಯೊಂದಿಗೆ ಚುನಾವಣಾ ಪದ್ಧತಿಯಂತೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂದೆ ಪಡೆಯಲು ಅವಕಾಶ, ಅಂತಿಮ ಕಣದಲ್ಲಿರುವ ಸ್ಪರ್ದಾಳುಗಳ ಪಟ್ಟಿ, ಈ ರೀತಿ ಎಲ್ಲಾ ಹಂತಗಳನ್ನು ಕ್ರಮವತ್ತಾಗಿ ನಡೆಸಲಾಯಿತು.

ತಂತ್ರಜ್ಞಾನವನ್ನು ಬಳಸಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆಯನ್ನು ನಡೆಸಲಾಯಿತು. ಬಳಿಕ ವಿಜೇತ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಸಂಸ್ಥೆಯ ಉಪ ಪ್ರಾಂಶುಪಾಲರಾದ ಗಣೇಶ್ ಬಿ ಯವರು ಪ್ರಮಾಣವಚನವನ್ನು ಶಾಲಾ ವಿದ್ಯಾರ್ಥಿ ನಾಯಕನಿಗೆ ಬೋಧಿಸಿದ ಬಳಿಕ ಉಳಿದ ಮಂತ್ರಿಗಳಿಗೆ ಬೋಧಿಸಿದರು.
ಈ ಚುನಾವಣಾ ವ್ಯವಸ್ಥೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಸಂಸ್ಥೆಯ ಮುಖ್ಯಸ್ಥ ಗಣೇಶ್ ಬಿ, ಚುನಾವಣಾಧಿಕಾರಿಯಾಗಿ ಭವಾನಿ ಕೆ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಧರಣೇಂದ್ರ ಕೆ ಹಾಗೂ ಶಾಲಾ ಶಿಕ್ಷಕರ ಮತ್ತು ಸರ್ವ ಸಿಬ್ಬಂದಿಗಳು ಎಲ್ಲಾ ರೀತಿಯ ಸಹಕಾರವನ್ನು ನೀಡಿದರು.


ಶಾಲಾ ನಾಯಕನಾಗಿ ಕಿರಣ್ ಕುಮಾರ್ ಹತ್ತನೇ 10 ಸಿ, ಶಾಲಾ ಉಪನಾಯಕ ಮಹಮ್ಮದ್ ಅಯಾನ್, ಕ್ರೀಡಾ ಮಂತ್ರಿ
ದ್ರುವಿತ್ , ಉಪ ಕ್ರೀಡಾ ಮಂತ್ರಿ ಚರಣ್ ,ವಾರ್ತಾ ಮಂತ್ರಿ ದೀಪಾ ಜಗದೀಶ ಹಡಪದ ,ಉಪ ವಾರ್ತಾ ಮಂತ್ರಿ ನವ್ಯ ,ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿ ಶಿವುಕುಮಾರ್ ರಾಜಶೇಖರ್ ಹತ್ತರಸಂಗ,ಉಪ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿ ಶಮಿತಾ ,ಆರೋಗ್ಯ ಮತ್ತು ಆಹಾರ ಮಂತ್ರಿ, ಸ್ವರ್ತಿಕ್ , ಉಪ ಆಹಾರ ಮಂತ್ರಿ ಶ್ರಾವಣ ನಾಯಕ್ ,ಸ್ವಚ್ಛತಾ ಮಂತ್ರಿ ಅನುಶ್ರೀ ,
ಉಪ ಸ್ವಚ್ಛತಾ ಮಂತ್ರಿ ಲಾವಣ್ಯ, ಪ್ರತಿಪಕ್ಷದ ನಾಯಕರಾಗಿ ಶಶಾಂಕ್ ಭಟ್ ಮತ್ತು ಸಾನ್ವಿ ಎಸ್ ಪೂಜಾರಿ ಆಯ್ಕೆಯಾಗಿರುತ್ತಾರೆ.

Related posts

ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಮಾಡ್ಯಾಲೋಟ್ಟುನಲ್ಲಿ ರಸ್ತೆಗೆ ಗುಡ್ಡ ಕುಸಿತ

Suddi Udaya

ಪದ್ಮುಂಜ ಸಿಎ ಬ್ಯಾಂಕ್ ಹಿರಿಯ ಗುಮಾಸ್ತ ಚಿದಾನಂದ ಗೌಡರಿಗೆ ನುಡಿನಮನ

Suddi Udaya

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸವಣಾಲು ಪ್ರೌಢ ಶಾಲಾ 40 ಮಂದಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನಕ್ಕೆ ವಸಂತ್ ಶೆಟ್ಟಿ ಕಲ್ಲುಗುಡ್ಡೆ 92 ಹೇರೂರು ಕಾಪು ರವರಿಂದ 75 ಕುರ್ಚಿಗಳ ಕೊಡುಗೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷರಾಗಿ ಗಾಯತ್ರಿ, ಉಪಾಧ್ಯಕ್ಷರಾಗಿ ಸುಧೀರ್ ಕುಮಾರ್ ಆಯ್ಕೆ

Suddi Udaya

ಕರಿಮಣೇಲು ಬಳಿ ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದ ಮರ

Suddi Udaya
error: Content is protected !!