October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ-ಬೈರಾಪುರ ರಸ್ತೆ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕಿರಣ್ ಚಂದ್ರ ಪುಷ್ಪಗಿರಿ ಸಂಪೂರ್ಣ ಬೆಂಬಲ: ಪಕ್ಷಾತೀತವಾಗಿ ಕೈಜೋಡಿಸಲು ಕರೆ

ಶಿಶಿಲ ಬೈರಾಪುರ ರಸ್ತೆ ಅಭಿವೃದ್ಧಿಯ ಬೇಡಿಕೆಯು ಈ ಭಾಗದ ಜನರ ಬಹುಕಾಲದ ಕನಸು. ಇದು ಕೇವಲ ಎರಡು ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಯ ವಿಚಾರವಲ್ಲ; ಗ್ರಾಮೀಣ ಜನರ ಬದುಕು, ಯುವಜನರ ಭವಿಷ್ಯ ಹಾಗೂ ಈ ಭಾಗದ ಸಮಗ್ರ ಅಭಿವೃದ್ಧಿಯೊಂದಿಗೆ ಬೆಸೆದುಕೊಂಡಿರುವ ಜನಪರ ಆಶಯವಾಗಿದೆ.

ಈ ಮಹತ್ವದ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಹಕ್ಕೊತ್ತಾಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಬದುಕುತ್ತಿರುವ ಜನರಿಗೆ ಸುಗಮ ಸಂಚಾರ ವ್ಯವಸ್ಥೆ ಅತ್ಯಗತ್ಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪುಯಾಣಿಸಲು, ಉದ್ಯೋಗಿಗಳು ಕೆಲಸದ ಸ್ಥಳಗಳಿಗೆ ತೆರಳಲು ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಉತ್ತಮ ರಸ್ತೆ ಸಂಪರ್ಕ ನೆರವಾಗುತ್ತದೆ.
ಹೀಗಾಗಿ ಶಿಶಿಲ ಬೈರಾಪುರ ರಸ್ತೆ ಅಭಿವ್ಯದ್ಧಿಯನ್ನು ಜನರ ನಿತ್ಯಜೀವನದ ಅಗತ್ಯವಾಗಿ ಪರಿಗಣಿಸಬೇಕು. ಕರಾವಳಿ ಮತ್ತು ಮಲೆನಾಡಿನ ನಡುವಿನ ಸಂಪರ್ಕವನ್ನು ಬಲಪಡಿಸಬಹುದಾದ ಈ ರಸ್ತೆಯ ಅಭಿವೃದ್ಧಿಯಿಂದ ಸ್ಥಳೀಯ ವ್ಯಾಪಾರ, ಕೃಷಿ ಹಾಗೂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಶಿರಾಡಿ ಮತ್ತು ಚಾರ್ಮಾಡಿ ಘಾಟಿ ಮಾರ್ಗಗಳ ಮೇಲಿನ ಸಂಚಾರದ ಒತ್ತಡವನ್ನು ತಗ್ನಿಸಲು ಪರ್ಯಾಯ ಸಂಪರ್ಕದ ಸಾಧ್ಯತೆಯನ್ನೂ ಪರಿಶೀಲಿಸಬೇಕಿದೆ.

ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಇಲಾಖೆಗಳು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಯಸಾಧ್ಯತೆಯ ಆಧಾರದಲ್ಲಿ ಅಭಿವೃದ್ಧಿಗೆ ಮುಂದಾಗಬೇಕು. ಪ್ರಕೃತಿ ನಮ್ಮೆಲ್ಲರ ಅಮೂಲ್ಯ ಸಂಪತ್ತು. ಪರಿಸರದ ಸಂರಕ್ಷಣೆಯೊಂದಿಗೆ ಜನರ ಮೂಲಸೌಕರ್ಯದ ಅಗತ್ಯಗಳಿಗೂ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಸರಕ್ಕೆ ಕನಿಷ್ಠ ಹಾನಿಯಾಗುವಂತೆ, ಅಗತ್ಯ ತಾಂತ್ರಿಕ ಪರಿಶೀಲನೆ ಹಾಗೂ ಸಂಬಂಧಪಟ್ಟ ಅನುಮತಿಗಳೊಂದಿಗೆ ರಸ್ತೆ ಅಭಿವೃದ್ಧಿಗೆ ಸೂಕ್ತ ಮಾರ್ಗ ಕಂಡುಕೊಳ್ಳಬೇಕು. ಜನರ ನಿರೀಕ್ಷೆ ಮತ್ತು ಪ್ರಕೃತಿಯ ರಕ್ಷಣೆ ಎರಡನ್ನೂ ಗೌರವಿಸುವ ಅಭಿವೃದ್ಧಿ ನಮ್ಮ ಆಶಯವಾಗಬೇಕು.ಊರಿನ ಅಭಿವೃದ್ಧಿಯ ವಿಚಾರದಲ್ಲಿ ಪಕ್ಷ, ಜಾತಿ, ಮತಗಳ ಭೇದಕ್ಕೆ ಅವಕಾಶವಿರಬಾರದು. ರೈತರು, ವ್ಯಾಪಾರಸ್ಥರು, ಯುವಜನರು, ಮಹಿಳೆಯರು, ಸಂಘ-ಸಂಸ್ಥೆಗಳು ಹಾಗೂ ಎಲ್ಲ ಸಮುದಾಯದವರು ಒಂದಾಗಿ ನಿಂತಾಗ ಜನಪರ ಬೇಡಿಕೆಗೆ ಹೆಚ್ಚಿನ ಶಕ್ತಿ ಬರುತ್ತದೆ.

ಈ ಹೋರಾಟವು ಸಮಸ್ತ ಜನರ ಹಿತವನ್ನು ಪ್ರತಿನಿಧಿಸುವ ಶಾಂತಿಯುತ, ಶಿಸ್ತಿನ ಹಾಗೂ ಒಗಟ್ಟಿನ ಪ್ರಯತ್ನವಾಗಿ ಯಶಸ್ವಿಯಾಗಬೇಕು.ನ. 2ರಂದು ಬೆಳಿಗ್ಗೆ 9.30ಕ್ಕೆ ಅರಸಿನಮಕ್ಕಿಯ ನಿಸರ್ಗ ಸ್ಟೋರ್ಸ್ ಮುಂಭಾಗದಲ್ಲಿ ನಡೆಯಲಿರುವ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸಬೇಕು. ರಸ್ತೆ ಅಭಿವೃದ್ಧಿಗಾಗಿ ನಡೆಯುವ ಈ ಪ್ರಯತ್ನಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಪುಷ್ಪಗಿರಿ ತಿಳಿಸಿದ್ದಾರೆ.

Related posts

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

Suddi Udaya

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಕುತ್ಲೂರು ಶಾಲೆಯಲ್ಲಿ ವನಮಹೋತ್ಸವ: ಕುತ್ಲೂರು ಶಾಲಾ ವಠಾರದಲ್ಲಿ ಹಣ್ಣುಗಳ ಉದ್ಯಾನ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಭರವಸೆ

Suddi Udaya

ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಗೌರವಾರ್ಪಣೆ

Suddi Udaya

ಅಂಡಿಂಜೆ : ಮಜಲಡ್ಡ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ

Suddi Udaya
error: Content is protected !!