September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯದಲ್ಲಿ ಯಕ್ಷ ಪುರುಷೋತ್ತಮ ಸರಣಿಯ ಸಮಾರೋಪ

ಬಾರ್ಯ: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ಸಂಯೋಜನೆಯಲ್ಲಿ ಅಧಿಕ ಮಾಸದ ಪ್ರಯುಕ್ತ ಶ್ರೀ ಮಹಾವಿಷ್ಣು ದೇವಸ್ಥಾನಗಳಲ್ಲಿ ನಡೆಸಲಾದ ಯಕ್ಷ ಪುರುಷೋತ್ತಮ ಸರಣಿಯ 7ನೇ ತಾಳಮದ್ದಳೆಯು ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಿತು .

ಮೇದಿನಿ ನಿರ್ಮಾಣ , ತುಳುನಾಡ ಬಲಿಯೇಂದ್ರೆ ಮತ್ತು ಭಕ್ತ ಪ್ರಹ್ಲಾದ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು.

ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೇನೇರಂಕಿ, ಸತೀಶ್ ಇರ್ದೆ, ಆನಂದ ಸವಣೂರು,ನಿತೀಶ್. ವೈ ಹಿಮ್ಮೆಳದಲ್ಲಿ ಶ್ರೀ ಹರಿ ನಗ್ರಿ, ಅಚ್ಯುತ ಪಾಂಗಣ್ಣಾಯ, ತಾರಾನಾಥ ಸವಣೂರು ,ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು.

ಭಕ್ತ ಪ್ರಹ್ಲಾದದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಹಿರಣ್ಯಕಶ್ಯಪ), ಭಾಸ್ಕರ ಬಾರ್ಯ (ಕಯಾದು), ದಿವಾಕರ ಆಚಾರ್ಯ ಗೇರುಕಟ್ಟೆ (ಗುರುಗಳು), ದುಗ್ಗಪ್ಪ ನಡುಗಲ್ಲು (ನರಸಿಂಹ) ಶುಭಾ ಅಡಿಗ (ಪ್ರಹ್ಲಾದ) ಮೇದಿನಿ ನಿರ್ಮಾಣದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಮಹಾ ವಿಷ್ಣು) ಭಾರತಿ ರೈ ಅರಿಯಡ್ಕ (ಮಧು),ಶಾರದಾ ಅರಸ್ (ಕೈಟಭ), ಮತ್ತು ತುಳುನಾಡ ಬಲಿಯೇಂದ್ರೆ ಪ್ರಸಂಗದಲ್ಲಿ ಗುಡ್ಡಪ್ಪ ಬಲ್ಯ (ವಾಮನ) ತಾರಾನಾಥ ಸವಣೂರು ( ಬಲಿ) ಹರಿಣಾಕ್ಷಿ ಜೆ ಶೆಟ್ಟಿ (ಶುಕ್ರಾಚಾರ್ಯ), ಅಚ್ಯುತ ಪಾಂಗಣ್ಣಾಯ (ವಿಂದ್ಯಾವಳಿ) ಭಾಗವಹಿಸಿದ್ದರು

ದೇವಳದ ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ ಬಾರ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವರ್ಣಲತಾ ಬಾರ್ಯ ನಾರಾಯಣ ಗೌಡ, ಪ್ರಶಾಂತ್ ಪೈ, ವಿಜಯಲಕ್ಷ್ಮಿ ರೈ, ಶಿವರಾಮ್ ನಾಯ್ಕ, ವಿದ್ಯಾಪ್ರಭಾಕರ್, ಮನೋಹರ ಶೆಟ್ಟಿ, ಶೇಸಪ್ಪ ಸಾಲಿಯಾನ್, ಪ್ರವೀಣ್ ಮೂರುಗೋಳಿ,ಅರುಣ್ ಬಂಗೇರ ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ ಕಲಾವಿದರನ್ನು ಗೌರವಿಸಿದರು. ದೇವಳದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ ಟ್ರಸ್ಟಿ ಮನೋಹರ ಶೆಟ್ಟಿ ವಂದಿಸಿದರು. ಶ್ರವಣರಂಗ ಪ್ರತಿಷ್ಠಾನದ ಸಂಚಾಲಕ ತಾರನಾಥ ಸವಣೂರು ಏಳು ತಾಳಮದ್ದಳೆಗಳ ಸರಣಿಯಲ್ಲಿ ಸಹಕರಿಸಿದ ಪ್ರಾಯೋಜಕರಿಗೆ, ಕಲಾವಿದರಿಗೆ ಕೃತಜ್ಞತೆ ಅರ್ಪಿಸಿದರು.

Related posts

ಭಾರಿ ಮಳೆಗೆ: ಪುತ್ತಿಲ ನಡುಕೇರ್ಯದಲ್ಲಿ ಬರೆ ಕುಸಿತ

Suddi Udaya

ತಣ್ಣೀರುಪಂತ: ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವಾರ್ಷಿಕ ಜಾತ್ರೋತ್ಸವ

Suddi Udaya

ವೇಣೂರಿನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮೊಗ್ರು ಸರಕಾರಿ ಶಾಲೆಯಲ್ಲಿ ಆಂ.ಮಾ. ಶಿಕ್ಷಣ ನೀಡಲು ಅನುಮತಿ: ಟ್ರಸ್ಟ್ ನ ಪ್ರಯತ್ನ | ಶಾಸಕರ ಸಾಥ್ | ಸರಕಾರದ ನಿರ್ಧಾರ

Suddi Udaya

ಬಂದಾರು: ಕುಂಟಾಲಪಳಿಕೆ ಪ್ರದೇಶದ ನೆಲ್ಲಿಗೇರುನಲ್ಲಿ ಒಂಟಿ ಸಲಗ ದಾಳಿ: ಭತ್ತದ ಕೃಷಿಗೆ ಹಾನಿ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಧಾತ್ರಿ ಪಿ ನಾಲ್ಕೂರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya
error: Content is protected !!