September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ: ಹೃದಯ ಶ್ರೀಮಂತಿಕೆಯ ವ್ಯಕ್ತಿ ದಿನಕರ ಪೂಜಾರಿಯವರು: ಸಂತೋಷ್ ಕುಮಾರ್ ಕಾಪಿನಡ್ಕ

ಬೆಳ್ತಂಗಡಿ: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮಾಜಿ ಆಡಳಿತ ಮೋಕ್ತೇಸರಾದ ದಿ.ದಿನಕರ ಪೂಜಾರಿ ಕಡ್ತಿಲ ಅವರಿಗೆ ನುಡಿನಮನ ಕಾರ್ಯಕ್ರಮ ಜೂ.18 ರಂದು ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಜೂ. 6 ರಂದು ನಿಧನರಾದ ಬೇಬಿ ಯಾನೆ ದಿನಕರ ಪೂಜಾರಿ ಕಡ್ತಿಲರಿಗೆ ಸಂತೋಷ್ ಕುಮಾರ್ ಕಾಪಿನಡ್ಕ ನುಡಿನಮನ ಸಲ್ಲಿಸಿ ಮಾತನಾಡಿ ಕಡ್ತಿಲ ಮನೆತನದ ನಂದಾದೀಪ ಹಾರಿಹೋಗಿದೆ. ಮನುಷ್ಯ ಜನಿಸಿದಾಗ ಅವನೊಂದಿಗೆ ಉಸಿರು ಇರುತ್ತದೆ ಆದರೆ ಹೆಸರಿರಲ್ಲ, ಸಾವಿನ ಬಳಿಕ ಉಸಿರು ನಿಲ್ಲುತ್ತದೆ ಜೀವಿತಾವಧಿಯಲ್ಲಿ ನಾವು ಮಾಡಿರುವ ಸಮಾಜಮುಖಿ ಕಾರ್ಯಗಳಿಂದ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ ಆ ನಿಟ್ಟಿನಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಿದ ಹೃದಯ ಶ್ರೀಮಂತಿಕೆಯ ಧೀಮಂತ ವ್ಯಕ್ತಿ ದಿನಕರ ಪೂಜಾರಿಯವರು ಎಂದು ನುಡಿದರು.

ಪದ್ಮುಂಜ ಸಿಎ ಬ್ಯಾಂಕ್ ನಿರ್ದೇಶಕಿ ಶಾರಾದ ಆರ್ ರೈ ಹಾಗೂ ಸುಂದರ ಶೆಟ್ಟಿ ಎಂಜಿರಪಲ್ಕೆ ನುಡಿನಮನ ಗೈದರು. ಮಾಜಿ ಸಚಿವ ಬಿ.ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸಹಕಾರಿ ರತ್ನ ಭಾಸ್ಕರ್ ಎಸ್ ಕೊಟ್ಯಾನ್ ಕೊಳಕ್ಕೆಇರ್ವತ್ತೂರು, ವಸಂತ್ ಸಾಲಿಯಾನ್ ಕಾಪಿನಡ್ಕ, ಪದ್ಮರಾಜ್ ಆರ್. ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಸಂಪತ್ ಬಿ.ಸುವರ್ಣ, ಕಿರಣ್‌ಚಂದ್ರ ಪುಷ್ಪಗಿರಿ, ಮಡಂತ್ಯಾರು ಸೇರ್ಕೆಡ್ ಹಾರ್ಟ್ ಸೊಸೈಟಿ ಅಧ್ಯಕ್ಷ ಲ್ಯಾನ್ಸಿ ಪಿಂಟೋ, ಬೆಳ್ತಂಗಡಿ ಬಂಟರ ಸಂಘ ಅಧ್ಯಕ್ಷ ಜಯಂತ್ ಶೆಟ್ಟಿ, ಜಗನ್ನಾಥ್ ಬಂಗೇರ ನಿರ್ಮಲ್, ಪೀತಂಬರಾ ಹೇರಾಜೆ, ಮಲೆಗಂಲ್ಲು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠಲ್ ಶೆಟ್ಟಿ ಕೊಲ್ಲೋಟ್ಟು, ರಾಜು ಕೆ.ಸಾಲಿಯಾನ್ ಕಾಶಿಪಟ್ಣ, ಸಾರಿಗೆ ಅಧಿಕಾರಿ ಚರಣ್, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ದಂತ ವೈದ್ಯ ಡಾ.ಆಶಿಶ್ ಉಪ್ಪಿನಂಗಡಿ, ವಕೀಲ ಅನಿಲ್ ಯು, ಪತ್ನಿ ಕಮಲ ಪೂಜಾರಿ, ಮಕ್ಕಳಾದ ಯೋಗೀಶ್ ಪೂಜಾರಿ ಕಡ್ತಿಲ ಮತ್ತು ಹರಿಣಿ, ಸೊಸೆ ಸಂಧ್ಯಾ ಲಕ್ಷ್ಮೀ, ಅಳಿಯ ಧನಂಜಯ ಬಂಗೇರ, ಮೊಮ್ಮಕ್ಕಳಾದ ಸಂಯುಕ್ತ ಪೂಜಾರಿ ಕಡ್ತಿಲ, ಸಂಸ್ಕೃತಿ ವೈ ಎಸ್ ಪೂಜಾರಿ, ಸಾಹಿಲ್ ಅಂಚನ್, ಪ್ರಕೃತಿ, ತರುಣ್, ಪ್ರಗತಿ, ಮರಿಮಕ್ಕಳಾದ ದೀತ್ಯ ಮತ್ತು ಸಾನ್ವಿಕ, ಜಲಜ ವಿ.ಸಾಲಿಯಾನ್, ಭಾರತಿ ಸಂತೋಷ್ ಕುಮಾರ್, ಶಿವಧ್ಯಾನ್, ಸೌಮ್ಯಲಕ್ಷ್ಮೀ ರತ್ನಾಕರ ಸುವರ್ಣ, ಸಿಂಚನ, ಸುಬ್ರಹ್ಮಣ್ಯ ಸಹಿತ ಮೊದಲಾದವರು ಕಡ್ತಿಲ ದಿನಕರ ಪೂಜಾರಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

Related posts

ಇಂದಿನಿಂದ ದ.ಕ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರಗಳ ಸ್ವೀಕಾರ ಆರಂಭ: ಜಿಲ್ಲಾಧಿಕಾರಿ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಒಂಟಿಸಲಗ ಪ್ರತ್ಯಕ್ಷ: ವಾಹನ ಸವಾರರ ಪರದಾಟ

Suddi Udaya

ಗುರುವಾಯನಕೆರೆ ದ .ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ

Suddi Udaya

ಪ್ರಪ್ರಥಮ ಬಾರಿಗೆ ಏಕಕಾಲದಲ್ಲಿ ಚಿತ್ರಮಂದಿರ ಮತ್ತು ಟಾಕೀಸ್ ಆ್ಯಪ್ ಒಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿರುವ “ಹೌದ್ದೋ ಹುಲಿಯ”

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

Suddi Udaya
error: Content is protected !!