32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾಳೆ(ಜೂ.21) ನೀಟ್ ಮರು ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 5,570 ಅಭ್ಯರ್ಥಿಗಳು

ಬೆಳ್ತಂಗಡಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಜೂ. 21ರಂದು ರಾಷ್ಟ್ರಾದ್ಯಂತ ನಡೆಯುವ ನೀಟ್ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ವ್ಯಾಪ್ತಿಯ 12 ಕೇಂದ್ರಗಳಲ್ಲಿ 5, 570 ಅಭ್ಯರ್ಥಿಗಳು ಹಾಜರಾಗುವರು.

ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ, ಪರೀಕ್ಷೆಯನ್ನು ನಕಲು ಮುಕ್ತ, ಪಾರದರ್ಶಕ ಹಾಗೂ ಲೋಪವಾಗದಂತೆ ನಡೆಸಬೇಕು. ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರು ಇರಲಿದ್ದು, ಅಭ್ಯರ್ಥಿಗಳ ತಪಾಸಣೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತಪಾಸಣಾ ಸಾಮಾಗ್ರಿ ಹಾಗೂ ಅಗತ್ಯ ಸಿಬಂದಿ ಒದಗಿಸಿದೆ ಎಂದರು.

ಈ ಬಾರಿ ಪರೀಕ್ಷೆ ಬಿಗು ಭದ್ರತೆಯಿಂದ ನಡೆಸಲಾಗುತ್ತಿದ್ದು, ಸ್ಥಳೀಯ ಪೊಲೀಸ್ ರೊಂದಿಗೆ 30 ಮಂದಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮಂಗಳೂರಿಗೆ ಆಗಮಿಸಲಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೆ ಸ್ಥಳೀಯ ಪೊಲೀಸರನ್ನು ಸಶಸ್ತ್ರವಾಗಿ ನಿಯೋಜಿಸಲಾಗುವುದು. ಪರೀಕ್ಷಾ ಕಾರ್ಯಗಳ ಮೇಲ್ವಿಚಾರಣೆಗೆ ಎನ್‌ಟಿಎ ಜಿಲ್ಲೆಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ ಎಂದರು.

ಪರೀಕ್ಷೆ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್‌ಫೋನ್, ಮೈಕ್ರೋ ಫೋನ್, ಬ್ಲೂಟೂತ್ ಸಾಧನ ಅನುಮತಿ ಇಲ್ಲ. ವಿದ್ಯಾರ್ಥಿ ಮತ್ತು ಪರೀಕ್ಷಾ ಸಿಬಂದಿಗೆ ಮೊಬೈಲ್ ಬಳಕೆ, ಫೋಟೋಗ್ರಫಿ ಸಂಪೂರ್ಣ ನಿಷೇಧಿಸಲಾಗಿದೆ. ಸಿಸಿಟಿವಿ ಕಾರ್ಯನಿರ್ವಹಣೆ ಬಗ್ಗೆ ಮುಂಚಿತವಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಬೆಳಗ್ಗೆ 11ರಿಂದ ಪರೀಕ್ಷಾ ಕೇಂದ್ರ ಪ್ರವೇಶ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ರವಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1.30 ರವರೆಗೆ ಪ್ರವೇಶಿಸಬಹುದು. ಅಪರಾಹ್ನ 2 ರಿಂದ ಸಂಜೆ 5.15ರವರೆಗೆ ಪರೀಕ್ಷೆ ನಡೆಯಲಿದ್ದು, ವಿಶೇಷಚೇತನರಿಗೆ ಹೆಚ್ಚುವರಿ 1 ಗಂಟೆ ಇರಲಿದೆ.ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ ನೀಡಲಾಗಿದೆ ಎಂದರು.

Related posts

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಕುವೆಟ್ಟು: ಪಯ್ಯೋಟ್ಟು ನಿವಾಸಿ ನಾಣ್ಯಪ್ಪ ಪೂಜಾರಿ ನಿಧನ

Suddi Udaya

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯ ವತಿಯಿಂದ ಗ್ರಂಥಪಾಲಕರಿಗೆ ಕಾರ್ಯಾಗಾರ

Suddi Udaya

ಕಣಿಯೂರು ದೀಪಾ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya

ವಾಣಿ ಕಾಲೇಜು : ಸಾಹಿತ್ಯ ಸಂಘದಿಂದ ಬರಹ ಕೌಶಲ್ಯ ಕಾರ್ಯಕ್ರಮ

Suddi Udaya

ಕ್ಲಸ್ಟರ್ ಮಟ್ಟದ ವಾರ್ಷಿಕ ಕ್ರೀಡಾಕೂಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya
error: Content is protected !!