28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡುಮಲೆ ಎರುಕೊಟ್ಟದ ಕೋಟಿ ಚೆನ್ನಯರ ಜನ್ಮಸ್ಥಾನಕ್ಕೆ ನಟ ಶನಿಲ್ ಗೌತಮ್ ಭೇಟಿ

ಪುತ್ತೂರು: ಪಡುಮಲೆ ಎರುಕೊಟ್ಟದ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ಸಂಕ್ರಮಣ ಶುಭ ದಿವಸದಂದು ನಾಗ ದೇವರಿಗೆ ಹಾಗೂ ನಾಗಬೆರ್ಮರಿಗೆ ತಂಬಿಲ ಸೇವೆ ಮತ್ತು ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆತಿಗೆ ವಿಶೇಷ ಪೂಜೆ ನಡೆಯಿತು.

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಬಿ. ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಈ ಸಂದರ್ಭದಲ್ಲಿ ‘ಸು ಫ್ರಮ್ ಸೋ’ ಖ್ಯಾತಿಯ ಪ್ರಮುಖ ನಟ ಶನಿಲ್ ಗೌತಮ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕಾರ್ಯದರ್ಶಿ ಶ್ರೀಧರ್ ಪಟ್ಟ ಪುತ್ತೂರು, ಸದಸ್ಯರಾದ ಚರಣ್ ಕೆ., ಜಗನ್ನಾಥ್ ಬಂಟ್ವಾಳ, ರಾಜೇಶ್ ಕಂಟ್ರಾಕ್ಟರ್, ರವಿ ಬಂಟ್ವಾಳ, ಅಭಿಷೇಕ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

Related posts

ಆರಂಬೋಡಿ ಪ್ರಗತಿಪರ ಕೃಷಿಕ ಮುತ್ತಯ್ಯ ಪೂಜಾರಿ ನಿಧನ

Suddi Udaya

ಕನ್ಯಾಡಿ ಯಕ್ಷಭಾರತಿಯಿಂದ ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ಗುರುವಂದನೆ

Suddi Udaya

ತುಳುಕೂಟ ಇಸ್ರೇಲ್ ವತಿಯಿಂದ ಮಂಜುಶ್ರೀ ಸೀನಿಯರ್ ಛೇಂಬರ್ ಬೆಳ್ತಂಗಡಿ ಆಶ್ರಯದಲ್ಲಿ ಕಿಲ್ಲೂರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಎ.17: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ : ‌ಬೆಳ್ತಂಗಡಿ ನಗರದಲ್ಲಿ ಸಂಚಾರಕ್ಕೆ ಅಡಚಣೆ ಹಿನ್ನಲೆಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ

Suddi Udaya
error: Content is protected !!